Advertisement
ಹೆಬ್ರಿ ಬಸ್ ತಂಗುದಾಣದಲ್ಲಿ ವರ್ಷದ ಹಿಂದೆ ಬಿದ್ದಿದ್ದ ಚಿನ್ನದ ಕರಿಮಣಿ ಸರವೊಂದು ಬಸ್ ನಿಲ್ದಾಣ ವಠಾರದಲ್ಲಿ ಪತ್ರಿಕೆ ವಿತರಣೆ ಮಾಡುತ್ತಿದ್ದ ಶಿವರಾಯ ಕಾಮತ್ ಅವರಿಗೆ ಸಿಕ್ಕಿದ್ದು ಕೂಡಲೇ ಹೆಬ್ರಿ ಠಾಣೆಗೆ ಕೊಟ್ಟು ವಾರಸುದಾರರಿಗೆ ಹಿಂದುರುಗಿಸುವಂತೆ ವಿನಂತಿಸಿದ್ದರು. ತಿಂಗಳು ಕಳೆದರೂ ವಾರಸುದಾರರು ಬಾರದ ಕಾರಣ ಪೊಲೀಸರು ಸರವನ್ನು ಕೋರ್ಟ್‌ಗೆ ಒಪ್ಪಿಸಿದರು.
ಶಿವರಾಯ ಅವರು 25 ವರ್ಷಗಳಿಂದ ಉದಯವಾಣಿ ಪತ್ರಿಕೆಯನ್ನು ಮನೆ ಮನೆಗೆ ಮುಟ್ಟಿಸುತ್ತಿರುವ ಜತೆಗೆ ಸಾರ್ವಜನಿಕರ ಸೇವೆಗಳಾದ ವಿದ್ಯುತ್/ ಫೋನ್ ಬಿಲ್ ಪಾವತಿ, ಗ್ಯಾಸ್ ಪೂರೈಕೆ ಇತ್ಯಾದಿಗಳನ್ನು ಕ್ಲಪ್ತ ಸಮಯದಲ್ಲಿ ಮಾಡಿಕೊಟ್ಟು ಜನರ ಮೆಚ್ಚುಗೆಗೆ ಪಾತ್ರರಾದ್ದಾರೆ. 1995ರಿಂದ ಸಂತೆಕಟ್ಟೆಯಲ್ಲಿ ಪತ್ರಿಕೆ ವಿತರಿಸಲು ಪ್ರಾರಂಭಿಸಿದ ಅವರು ಲಾಕ್‌ಡೌನ್ ಸಂದರ್ಭದಲ್ಲೂ ಪ್ರತಿ ದಿನ ಮನೆಮನೆಗೆ ಪತ್ರಿಕೆ ವಿತರಿಸುತ್ತಿದ್ದರು.
Related Articles
Advertisement
ಕಷ್ಟಪಟ್ಟ ಸಂಪಾದಿಸಿದ ಹಣ ಅಥವಾ ವಸ್ತುವನ್ನು ಕಳೆದುಕೊಂಡರೆ ಅದರ ದುಃಖ ಹೇಳತೀರದ್ದು. ಕಳಕೊಂಡವರಿಗೆ ವಾಪಸು ಸಿಕ್ಕರೆ ಅದರಷ್ಟು ಸಂತೋಷ ಬೇರೊಂದಿಲ್ಲ. ನಾವು ದುಡಿದು ಬದುಕಿದಾಗ ಸಂತೋಷವಿದೆ. ಪ್ರಾಮಾಣಿಕ ಕೆಲಸದಿಂದ ಸಂಪಾದಿಸುವ ಜನಪ್ರೀತಿಯೇ ಜೀವನದ ದೊಡ್ಡ ಸಂಪಾದನೆ.– ವಿಶ್ವನಾಥ (ಶಿವರಾಯ) ನಾಯಕ್, ಉದಯವಾಣಿ ಏಜೆಂಟ್, ಹೆಬ್ರಿ ಸಂತೆಕಟ್ಟೆ