Advertisement

ಪ್ರಾಮಾಣಿಕ ಇಲಾಖೆ ಎಂದರೆ ಅಂಚೆ‌: ಸಚಿವ ಶಿವರಾಮ ಹೆಬ್ಬಾರ್ ಬಣ್ಣನೆ

12:06 PM Nov 13, 2021 | Team Udayavani |

ಶಿರಸಿ: ಪಾರದರ್ಶಕತೆ, ಪ್ರಾಮಾಣಿಕ ಇಲಾಖೆ ಎಂದರೆ ಅಂಚೆ‌ ಇಲಾಖೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಬಣ್ಣಿಸಿದರು.

Advertisement

ಅವರು ಶನಿವಾರ ಕೆಡಿಸಿಸಿ ಬ್ಯಾಂಕ್ ಆವರಣದಲ್ಲಿ ಅಂಚೆ ಇಲಾಖೆ ಹಮ್ಮಿಕೊಂಡ ಶತಮಾನ ಕಂಡ ಕೆಡಿಸಿಸಿಯ ವಿಶೇಷ ಲಕೋಟೆ ಬಿಡುಗಡೆಗೊಳಿಸಿ‌ ಮಾತನಾಡಿದರು.

ಅಂಚೆ ಇಲಾಖೆ ‌ಪತ್ರಕ್ಕೆ‌ ಕಾಯುವ ದಿನಗಳಿದ್ದವು. ಅಂಥ ಅಪರೂಪದ ಇಲಾಖೆ. ಇಂದು‌ ಲಕೋಟೆ ಮುದ್ರಿಸಿ ದೇಶಕ್ಕೆ ‌ಪರಿಚಯಿಸುವ ಕಾರ್ಯ ಆಗುತ್ತಿದೆ. ಕಪ್ಪು ಚುಕ್ಕಿ ಇಲ್ಲದೇ ನಡೆಸಿ, ಹತ್ತು ಪೈಸೆ ಕಾರ್ಡನ್ನೂ ಜನರಿಗೆ ತಲುಪಿಸಿ ಮನ ಗೆದ್ದಿದೆ ಎಂದರು.

ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಆರ್.ಜಿ.ಭಾಗವತ್ ಮಾತನಾಡಿ, ಬ್ಯಾಂಕಿನ ಮೂಲಕ ರಾಜ್ಯದ, ರಾಷ್ಟ್ರದ ಜನರಿಗೆ ಕೆಡಿಸಿಸಿ ಬ್ಯಾಂಕ್ ಕುರಿತು ಜಾಗೃತಿ, ತಿಳುವಳಿಕೆ  ನೀಡಲಾಗುತ್ತದೆ ಎಂದರು.

ಇದನ್ನೂ ಓದಿ: ಮೈಸೂರಿನಲ್ಲಿ ನಿಯಮ ಮೀರಿ ತೆರಿಗೆ ವಸೂಲಿ: ಶಾಸಕ ಸಾರಾ ಮಹೇಶ್ ಆರೋಪ

Advertisement

ಮಾಜಿ ಅಧ್ಯಕ್ಷ ಶ್ರೀಕಾಂತ ಘೋಟ್ನೇಕರ್ ಮಾತನಾಡಿ, ರೈತರ ಬ್ಯಾಂಕ್ ನ ಲಕೋಟೆ ಬಿಡುಗಡೆ ಮಾಡಿದ್ದು ಖುಷಿಯಾಗಿದೆ ಎಂದರು.

ಕೆಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮೋಹನದಾಸ ನಾಯಕ, ವಿನಾಯಕ ಭಟ್ಟ ಇದ್ದರು. ಸಿಂಧೂ ಹೆಗಡೆ ನಿರ್ವಹಿಸಿದರು. ವೆಂಕಟೇಶ ಬಾದಾಮಿ ವಂದಿಸಿದರು.

ಕೆಡಿಸಿಸಿ ಬ್ಯಾಂಕ್‍ನ ಶತಮಾನದ ಘನತೆ ಹೆಚ್ಚಿಸಲು ಈ ವಿಶೇಷ ಲಕೋಟೆ ಕೂಡ ಸಹಕಾರಿ ಆಗಿದೆ. -ಶಿವರಾಮ್ ಹೆಬ್ಬಾರ್, ಸಚಿವ

ಕೆಡಿಸಿಸಿ ಬ್ಯಾಂಕ್ ಜಿಲ್ಲೆಯಲ್ಲಿ ‌ನೂತನ ೧೮ ಶಾಖೆ ಆರಂಭಿಸಲು ಮುಂದಾಗಿದ್ದೇವೆ. -ಆರ್.ಜಿ.ಭಾಗವತ್, ವ್ಯವಸ್ಥಾಪಕ ನಿರ್ದೇಶಕರು

Advertisement

Udayavani is now on Telegram. Click here to join our channel and stay updated with the latest news.

Next