ಚಿಂಚೋಳಿ: ಪಟ್ಟಣದ ಬೆಳಿಗ್ಗೆ ಬಸ್ ನಿಲ್ದಾಣ ಹತ್ತಿರದ ಬೆಳಗಿನ ಉಪಹಾರ ಸೇವಿಸಲು ದುರ್ಗಾ ಭವನ ಹೋಟೆಲ್ ಗೆ ಹೋಗುವಾಗ ಸಿಕ್ಕ 1.50 ಲಕ್ಷ ರೂ.ಹಣ ಚಿಂಚೋಳಿ ಠಾಣೆಗೆ ತಂದು ನೀಡಿ ಕಟ್ಟಡ ನಿರ್ಮಾಣದ ಮೇಸ್ತ್ರಿ ಶರಣು ನಿರ್ಣಾ ಪ್ರಾಮಾಣಿಕತೆ ಮೆರೆದಿದ್ದಾರೆ.
ಮಂಗಳವಾರ ಬೆಳಿಗ್ಗೆ ಪಟ್ಟಣದ ಶೆಳ್ಳಗಿ ಡ್ರೆಸ್ಸೆಸ್ ಮಾಲೀಕರಾದ ಲೋಕೇಶ ಶೆಳ್ಳಗಿ ಬ್ಯಾಂಕಿಗೆ ತುಂಬಲು ರೂ.1.50 ಲಕ್ಷ ಹಣದೊಂದಿಗೆ ಮಳೆಯಲ್ಲಿ ಬೈಕ್ ಮೇಲೆ ತೆರಳುವಾಗ ಹಣದ ಚೀಲ ಬಿದ್ದಿದೆ. ಆಗ ದಾರಿಯಲ್ಲಿ ಬಂದ ಶರಣು ನಿರ್ಣಾ ಚೀಲ ತೆಗೆದುಕೊಂಡು ಚಿಂಚೋಳಿ ಠಾಣೆಗೆ ತೆರಳಿ ಠಾಣೆಯಲ್ಲಿದ್ದ ಹೆಡ್ ಕಾನ್ ಸ್ಟೆಬಲ್ ಗೌರಿಶಂಕರ ಅವರಿಗೆ ಹಣ ಒಪ್ಪಿಸಿದ್ದಾರೆ.
ಹಣ ತುಂಬಲು ಬ್ಯಾಂಕಿಗೆ ಹೋಗಿ ನೋಡಿದ ಲೋಕೇಶ ಬೈಕ್ ನಲ್ಲಿ ಹಣದ ಚೀಲವಿಲ್ಲದಿವುದು ನೋಡಿ. ಗಾಬರಿ ಆಗ ಠಾಣೆಗೆ ದೂರು ನೀಡಲು ಬಂದಿದ್ದಾರೆ. ಚಿಂಚೋಳಿ ಪೊಲೀಸ್ ಠಾಣೆ ಪಕ್ಕದಲ್ಲಿ ನೂತನ ಠಾಣೆ ಕಟ್ಟಡವನ್ನು ಗುತ್ತಿಗೆದಾರ ಭೀಮಶೆಟ್ಟಿ ಪಾರಾ ನಿರ್ಮಿಸುತ್ತಿದ್ದಾರೆ. ಪಾರಾ ಅವರ ಬಳಿ ಶರಣು ನಿರ್ಣಾ ಮೇಸ್ತ್ರಿ ಕೆಲಸ ಮಾಡುತ್ತಿದ್ದಾರೆ. ಠಾಣೆಯಲ್ಲಿ ಹೆಡ್ ಕಾನಸ್ಟೆಬಲ್ ಗೌರಿಶಂಕರ ಅವರು ಹಣವನ್ನು ಲೋಕೇಶ ಅವರಿಗೆ ಮರಳಿಸಿದರು.
ಪ್ರಾಮಾಣಿಕತೆ ಮೆರೆದ ಶರಣು ನಿರ್ಣಾ ಅವರಿಗೆ ಪೊಲೀಸರ ಸಮ್ಮುಖದಲ್ಲಿ ಲೋಕೇಶ ಶೆಳ್ಳಗಿ ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ
ಪಿಎಸೈ ಮಂಜುನಾಥರೆಡ್ಡಿ ಡಿವೈಎಸ್ಪಿ ಕಚೇರಿಯ ಹೆಡ್ ಕಾನಸ್ಟೆಬಲ್ ರೇವಣಸಿದ್ದ ಹೂವಿನಭಾವಿ, ಠಾಣೆಯ ಸಿಬ್ಬಂದಿಗಳಾದ ಶಿವಾನಂದ ಮತ್ತು ಶಿಲ್ಪಕಲಾ,ನಾಗರಾಜ ಮೊದಲಾದವರು ಇದ್ದರು.