ಕೊರಟಗೆರೆ: ಕಳೆದ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ 15 ತಿಂಗಳ ಅಲ್ಪ ಅವಧಿಯಲ್ಲಿ ಶಿಕ್ಷಕರ ಕ್ಷೇತ್ರದಲ್ಲಿ ಅನೇಕ ಸಮಸ್ಯೆಗಳನ್ನು ನಿವಾರಿಸಿ 5 ಕೋಟಿ ಅನುದಾನದಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಿರುವ ನನಗೆ ನಿರುದ್ಯೋಗಿ ಪದವೀಧರ ಕ್ಷೇತ್ರದಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಅವಕಾಶ ಮಾಡಿಕೊಡ ಬೇಕೆಂದು ಆಗ್ನೇಯ ಪದವೀಧರ ಕ್ಷೇತ್ರದ ಆಭ್ಯರ್ಥಿ ರಮೇಶ್ ಬಾಬು ಮನವಿ ಮಾಡಿದರು.
ಪಟ್ಟಣದ ಪ್ರಿಯದರ್ಶಿನಿ ಕಾಲೇಜಿನಲ್ಲಿ ಮತಯಾಚನೆ ಮಾಡಿ ನಂತರ ಮಾತನಾಡಿ, ಕಳೆದ ಶಿಕ್ಷಕರ ಕ್ಷೇತ್ರದಿಂದ ನಡೆದ ಉಪಚುನಾವಣೆಯಲ್ಲಿ ನನಗೆ ಮತ ನೀಡಿ ಆಯ್ಕೆ ಮಾಡಿದ್ದ ಸಂದರ್ಭದಲ್ಲಿ ಕೇವಲ 15 ತಿಂಗಳ ಅವಧಿಯಲ್ಲಿ ಶಿಕ್ಷಕರ ಅನೇಕ ಸಮಸ್ಯೆಗಳೊಂದಿಗೆ 6ನೇ ವೇತನ ಆಯೋಗದಲ್ಲ ಶಿಕ್ಷಕರಿಗೆ ಅನ್ಯಾಯ ವಾಗದಂತೆ ಎಲ್ಲಾ ಶಿಕ್ಷಕರಿಗೂ ಲಾಭದಾಯಕವಾದ ವೇತನ ಶ್ರೇಣಿ ನಿಗದಿಗೆ ಶ್ರಮಿಸಿದ್ದೇನೆ ಎಂದರು.
ಪಿಯು ಪ್ರಾಂಶುಪಾಲರಿಗೆ ಕಳೆದ 50 ವರ್ಷಗಳಿಂದ ನಿವಾರಣೆಯಾಗದೆ ನನೆಗುಂದಿಗೆ ಬಿದ್ದಿದ್ದ ವೇತನ ಶ್ರೇಣಿಯನ್ನು ನಿಗದಿ ಮಾಡಿಸಲಾಗಿದೆ. ನನ್ನ 2 ಕೋಟಿ ಅನುದಾನದೊಂದಿಗೆ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಾಗೂ ಯೋಜನಾ ಮಂತ್ರಿಗಳಾ ಗಿದ್ದ ಎಂ.ಆರ್.ಸೀತಾರಂ ಅವರ 1 ಕೋಟಿ ಸೇರಿದಂತೆ ಒಟ್ಟು 5 ಕೋಟಿ ರೂಗಳನ್ನುಹಾಗೂಕೇಂದ್ರ ಸರ್ಕಾರದಿಂದ ಸರ್ಕಾರಿಶಾಲೆಗಳ ಅಭಿವೃದ್ಧಿಗಾಗಿ 12 ಕೋಟಿ ರೂಗಳನ್ನು ಕ್ಷೇತ್ರದ 33 ತಾಲೂಕುಗಳಲ್ಲಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ನೀಡಿದ್ದೇನೆ ಎಂದು ತಿಳಿಸಿದರು. ಎಲ್ಲಾ ಪದವೀಧರರನ್ನು ಹಾಗೂ ನಿರುದ್ಯೋಗಿಪದವೀಧರರನ್ನು ಸಂಪಿರ್ಕಿಸಿ ಅವರಕುಂದು-ಕೊರತೆ ಸಮಸ್ಯೆಯನ್ನು ಅರಿತಿದ್ದು ಈಕಾರಣದಿಂದಾಗಿಆಗ್ನೇಯಪದವೀಧರಕ್ಷೇತ್ರದಿಂದ ಸ್ಪರ್ಧಿಸಿದ್ದು ನನನ್ನು ಆಯ್ಕೆ ಮಾಡಿದಲ್ಲಿ ಹಂತಹಂತವಾಗಿ ಪ್ರಮಾಣಿಕ ಪ್ರಯತ್ನ ಮಾಡಿ ಬಗೆಹರಿಸುವುದಾಗಿ ತಿಳಿಸಿದರು.
ಈ ಬಾರಿ 5 ಜಿಲ್ಲೆಗಳಲ್ಲಿ ಉತ್ತಮ ಸ್ಪಂದನೆ ಇದ್ದು ಪ್ರಬುದ್ಧ ಮತದಾರರು ನನಗೆ ಮೊದಲ ಪ್ರಾಶಸ್ತ್ಯ ನೀಡಿ ಮತ ನೀಡುವ ಮೂಲಕ ನಿಮ್ಮ ಸೇವೆ ಮಾಡುವ ಅವಕಾಶ ನೀಡಬೇಕೆಂದು ಮನವಿ ಮಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಡ್ಲಹಳ್ಳಿಅಶ್ವತ್ಥನಾರಾಯಣ ಮಾತನಾಡಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಮೇಶ್‌ಬಾಬು ಅವರು ಸಾಮಾಜಿಕ ಕಳಕಳಿ ಇರುವ ವ್ಯಕ್ತಿಯಾಗಿದ್ದು ಈ ಬಾರಿ ಆಗ್ನೇಯ ಪದವೀಧರ ಸಮಸ್ಯೆಗೆ ಸಕಾರತ್ಮಾಕವಾಗಿ ಸ್ಪಂದಿಸುವ ಗುಣವಿದೆ. ಖಾಸಗಿ ಶಾಲೆಗಳಲ್ಲಿ ಇರುವ ಪದವೀಧರರ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಆಶ್ವಾಸನೆ ನೀಡಿರುವ ಇವರುಕಳೆದ ಸಾಲಿನಲ್ಲಿ ಅಲ್ಪಸಮಯದಲ್ಲಿ ಶಿಕ್ಷಕರ ಅನೇಕ ಸಮಸ್ಯೆಗಳನ್ನುಪರಿಹರಿಸುವ ಇವರಿಗೆ ಮೊದಲ ಪ್ರಾಶಸ್ತ್ಯ ಮತ ನೀಡಬೇಕೆಂದು ಮನವಿ ಮಾಡಿದರು.
ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್, ಯುವಕಾಂಗ್ರೆಸ್ ಅಧ್ಯಕ್ಷ ವಿನಯ್ ಕುಮಾರ್,ಸಂತೋಷ್‌ಕುಮಾರ್,ಮುಖಂಡರಾದ ರವಿಕುಮಾರ್, ಅರವಿಂದ್, ಉಮಾಶಂಕಆರಾಧ್ಯ, ಡಿ.ಕೆ.ರಂಗನಾಥ್ ಇತರರು ಇದ್ದರು.