Advertisement

“ಜನರ ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ’

09:29 PM Jul 05, 2019 | Team Udayavani |

ವಿಟ್ಲ: ಸರಕಾರ ಮತ್ತು ನಿಮ್ಮ ನಡುವಿನ ಕೊಂಡಿಯಾಗಿ ನಾವು ಕರ್ತವ್ಯ ನಿರ್ವಹಿಸಬೇಕು. ಗ್ರಾಮದ ಸಮಸ್ಯೆ ಗಳನ್ನು ಸ್ಥಳೀಯ ಮಟ್ಟದ ಅಧಿಕಾರಿ ಗಳಿಂದ ಪರಿಹರಿಸಲು ಪ್ರಾಮಾಣಿಕ ವಾಗಿ ಯತ್ನಿಸಲಾಗುವುದು. ಜನರ ಧ್ವನಿ ಯನ್ನು ವಿಧಾನಸಭೆಯವರೆಗೆ ತಲುಪಿಸಿ, ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡ ಲಾಗುವುದು ಎಂದು ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಹೇಳಿದರು.

Advertisement

ಶುಕ್ರವಾರ ಅನಂತಾಡಿ ಕರಿಂಕ ಶ್ರೀದೇವಿ ಕಲ್ಯಾಣ ಮಂಟಪದಲ್ಲಿ ಅನಂತಾಡಿ-ನೆಟ್ಲಮುಟ್ನೂರು ಗ್ರಾಮ ವ್ಯಾಪ್ತಿಯಲ್ಲಿ ಶಾಸಕರ ಗ್ರಾಮ ಸ್ಪಂದನ “ಗ್ರಾಮದ ಕಡೆ ಶಾಸಕರ ನಡೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶಾಸಕರು ಭಾಷಣ ಮಾಡುವು ದಿಲ್ಲ. ನಿಮ್ಮ ಸಮಸ್ಯೆಗಳನ್ನು ತಿಳಿಸಿ ಎಂದು ನೇರವಾಗಿ ಗ್ರಾಮಸ್ಥರ ಮನವಿಗಳನ್ನು ಸ್ವೀಕರಿಸಿ, ಸ್ಥಳದಲ್ಲೇ ಕ್ರಮ ಕೈಗೊಳ್ಳಲು ಆರಂಭಿಸಿದರು. ಕೆಲವು ಮನವಿಗಳಿಗೆ ಸ್ಪಂದಿಸಿ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಕೆಲವು ಮುಖಂಡರಿಗೆ, ಗ್ರಾ.ಪಂ. ಸದಸ್ಯರಿಗೆ ನೇರವಾಗಿ ಜವಾಬ್ದಾರಿಗಳನ್ನು ನೀಡಿದರು. ಭಾಷಣವಿಲ್ಲ, ಸ್ಪಂದನೆಗೇ ಆದ್ಯತೆ ಕೊಡುತ್ತಿದ್ದೇನೆ ಎಂದು ಹೇಳಿದ ಶಾಸಕರು ಅದರಂತೆ ನಡೆದುಕೊಂಡರು.

ಗೋಳ್ತಮಜಲು ಜಿ.ಪಂ. ಸದಸ್ಯೆ ಕಮಲಾಕ್ಷಿ ಪೂಜಾರಿ, ತಾ.ಪಂ. ಸದಸ್ಯೆ ಗೀತಾ ಚಂದ್ರಶೇಖರ್‌, ಮಾಣಿ ಪ್ರಾ. ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಶಶಿಕಲಾ, ಜಿ.ಪಂ. ಎಂಜಿನಿಯರ್‌ ನಾಗೇಶ್‌ ಬಿಲ್ಲವ, ಉಪತಹಶೀಲ್ದಾರ್‌ ರವಿಶಂಕರ್‌, ಆರ್‌ಐ ದಿವಾಕರ, ಉಪಾಧ್ಯಕ್ಷೆ ಕವಿತಾ ಉಮೇಶ್‌ ಪೂಜಾರಿ, ಗ್ರಾಮಕರಣಿಕ ಲಿಂಗಪ್ಪ ಜಜ್ಜುರಿ, ನೆಟ್ಲಮುಟ್ನೂರು ಗ್ರಾ.ಪಂ. ಸದಸ್ಯ ತನಿಯಪ್ಪ ಗೌಡ, ಸಾಮಾಜಿಕ ಕಾರ್ಯಕರ್ತ ಗಣೇಶ್‌ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಗ್ಯಾಸ್‌ ಕಿಟ್‌ ವಿತರಣೆ
ಇದೇ ಸಂದರ್ಭ ಕೇಂದ್ರ ಸರಕಾರದ ಉಚಿತ ಗ್ಯಾಸ್‌ ಸಂಪರ್ಕ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಗ್ಯಾಸ್‌ ಕಿಟ್‌ ವಿತರಣೆ ಮಾಡಲಾಯಿತು.
ಅನಂತಾಡಿ ಗ್ರಾಮ ಪಂಚಾಯತ್‌ ಅಧ್ಯಕ್ಷ ಸನತ್‌ ಕುಮಾರ್‌ ರೈ ಸ್ವಾಗತಿಸಿದರು.

ಗ್ರಾಮಕರಣಿಕರ ಕ್ರಮಕ್ಕೆ ಆಕ್ಷೇಪ
ಕುಟುಂಬದಲ್ಲಿ ಮೂವರು ಅಂಗವಿಕಲರಾಗಿದ್ದು, ಅವರಿಗೆ 94ಸಿ ಹಕ್ಕುಪತ್ರ ನೀಡಿಲ್ಲ ಎಂದು ಅವರು ಶಾಸಕರಿಗೆ ದೂರು ನೀಡಿದರು. ಆಗ ಅದು ಶ್ಮಶಾನಕ್ಕಾಗಿ ಕಾದಿರಿಸಿದ ಜಾಗವೆಂದು ಗ್ರಾಮಕರಣಿಕ ಲಿಂಗಪ್ಪ ಹೇಳಿದರು. ಪಿಡಿಒ ಜಯರಾಮ ಅವರಲ್ಲಿ ವಿಚಾರಿಸಿದಾಗ ಅದು ಶ್ಮಶಾನದ ಜಾಗವಲ್ಲ ಎಂದು ತಿಳಿದುಬಂತು. ಶಾಸಕರು ತತ್‌ಕ್ಷಣ ಕ್ರಮ ಕೈಗೊಳ್ಳಲು ಆದೇಶಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next