ಖ್ಯಾತ ಮೋಟಾರು ವಾಹನ ತಯಾರಕ ಸಂಸ್ಥೆಗಳಾದ ಹೋಂಡಾ ಮೋಟರ್ ಸೈಕಲ್ ಹಾಗೂ ಸ್ಕೂಟರ್ ಇಂಡಿಯಾ ಜಂಟಿಯಾಗಿ ಹೋಂಡಾ ಶೈನ್ 100 ಸಿಸಿ ಮೋಟಾರ್ ಬೈಕ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿವೆ.
64,900 ರೂ.ಗಳ ಎಕ್ಸ್ ಶೋರೂಮ್ ಬೆಲೆ ಹೊಂದಿರುವ ಬೈಕ್ ಮೇ ತಿಂಗಳಿಂದ ಖರೀದಿಗೆ ಲಭ್ಯವಿರಲಿದ್ದು, 12 ವಿಭಿನ್ನ ತಂತ್ರಜ್ಞಾನಗಳನ್ನು ಬಳಸಿ ಬೈಕ್‌ನ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲಾಗಿದೆ. ಒಬಿಡಿ2 ಕಂಪ್ಲೇಂಟ್ 100 ಸಿಸಿ ಇಂಜಿನ್, 4 ಸ್ಪೀಡ್ ಗೇರ್‌ಬಾಕ್ಸ್ ವಿನ್ಯಾಸ ಹೊಂದಿದೆ. 677 ಎಂಎಂ ಉದ್ದ, 786 ಎಂಎಂ ಎತ್ತರದ ಸೀಟ್ ಬೈಕ್‌ನಲ್ಲಿದ್ದು, 5 ಬಣ್ಣಗಳಲ್ಲಿ ಬೈಕ್ ಲಭ್ಯವಿರಲಿದೆ.
ಲೀಟರ್ ಪೆಟ್ರೋಲ್‌ಗೆ 65 ಕಿ.ಮೀ. ಮೈಲೇಜ್ ನೀಡಲಿರುವ ಶೈನ್ 100 ಬೈಕ್ ಅನ್ನು ಶೈನ್ 125ರ ವಿನ್ಯಾಸದ ಪ್ರೇರಣೆಯೊಂದಿಗೆ ತಯಾರಿಸಲಾಗಿದೆ.