Advertisement
ಜಗದ್ವಿಖ್ಯಾತ ಹೋಂಡಾ ಅಟೋಮೊಬೈಲ್ ಸಾಮ್ರಾಜ್ಯದ ಸ್ಥಾಪಕ ಸೋಯಿಚಿರೋ ಹೋಂಡಾ. ಇಂದು ಹೋಂಡಾ ಅಂದರೇ ಸಾಮಾನ್ಯ ಜನರಿಗೂ ಪರಿಚಿತ. ಈ ಕಂಪೆನಿಯ ಕಾರು, ಬೈಕ್ ಎಲ್ಲವೂ ಜನರ ಮನಗೆದ್ದಿದೆ. ಈ ಸಂಸ್ಥೆ ಬೆಳೆಸಲು ಸೋಯಿಚಿರೋ ಪಟ್ಟ ಶ್ರಮ ಅಷ್ಟಿಸ್ಟಲ್ಲ. ಈತ ಕೆಳಮಧ್ಯಮವರ್ಗದಲ್ಲಿ 1906 ನವೆಂಬರ್ 17 ರಂದು ಜಪಾನ್ ನಲ್ಲಿ ಹುಟ್ಟಿದ.
Related Articles
Advertisement
ಛಲಬಿಡದ ಹೋಂಡಾ ಮತ್ತೆ ಹೊಸ ಡಿಸೈನ್ ಒಂದನ್ನು ತಯಾರಿಸಲು ಮುಂದಾದ. ಸುಮಾರು ಎರಡು ವರ್ಷದ ಪರಿಶ್ರಮದ ನಂತರ ಮತ್ತೊಂದು ಪಿಸ್ಟನ್ ರಿಂಗ್ ತಯಾರಿಸಿ ಟಯೋಟಾ ಕಂಪೆನಿಯ ಕದತಟ್ಟಿದ. ಈ ಭಾರೀ ಟಯೋಟ ಕಂಪೆನಿ ಆ ಡಿಸೈನ್ ಕಂಡು ಸಂತೋಷಗೊಂಡು ಪಿಸ್ಟನ್ ರಿಂಗ್ ತಯಾರಿಸಲು ಆತನಿಗೆ ಕಾರ್ಖಾನೆಯನ್ನು ಆರಂಭಿಸಲು ಹಣವನ್ನು ಒದಗಿಸಿತು, ಟಯೋಟ ಕಂಪೆನಿಯ ಈ ಪ್ರೋತ್ಸಾಹದಿಂದ ಸಂತುಷ್ಟನಾದ ಹೋಂಡಾ ಫ್ಯಾಕ್ಟರಿಯನ್ನು ಎತ್ತರಕ್ಕೇರಿಸಲು ಮುಂದಾದ. ಈ ಸಮಯದಲ್ಲೆ ಜಪಾನ್ ನ ವಿವಿಧ ನಗರಗಳಿಗೆ ಭೂಕಂಪ ಅಪ್ಪಳಿಸಿತ್ತು. ಹೊಂಡಾ ಕಟ್ಟಿದ್ದ ಕಾರ್ಖಾನೆಯೂ ಧರೆಗುರುಳಿತ್ತು.
ಆತನ ಸಿಬ್ಬಂದಿ ಇದರಿಂದ ತೀವ್ರ ವಿಚಲಿತವಾದರೂ ಹೋಂಡಾ ಮಾತ್ರ ಸಂತಸದಿಂದಲೇ ಆದದ್ದಾಯಿತು ಮತ್ತೆ ಕಟ್ಟೋಣವೆಂದು ಕಾರ್ಖಾನೆ ನಿರ್ಮಾಣ ಕಾರ್ಯ ಆರಂಭಿಸಿದ. ಅದರ ಕೆಲಸಗಳು ಭರದಿಂದ ಸಾಗುತ್ತಿದ್ದವು. ಆದರೇ ಅದು ಪೂರ್ಣವಾಗುವ ಮೊದಲೇ ಜಪಾನ್ ಎರಡನೇ ಮಹಾಯುದ್ದವನ್ನು ಕಂಡಿತ್ತು. ಆ ಸಮಯದಲ್ಲಿ ದೇಶದಾದ್ಯಂತ ಸಿಮೆಂಟ್ ಪೂರೈಕೆ ಸ್ಥಗಿತಗೊಂಡಿತ್ತು. ಆಗಲೇ ಹೊಂಡಾ ಮತ್ತು ಆತನ ತಂಡ ಸಿಮೆಂಟ್ ತಯಾರಿಸುವ ಹೊಸ ವಿಧಾನವನ್ನು ಕಂಡುಹಿಡಿದರು. ಈ ರೀತಿಯಾಗಿ ಕಾರ್ಖಾನೆ ನಿರ್ಮಾಣವನ್ನು ಪೂರ್ಣಗೊಳಿಸಿದ.
ಆದರೆ ಅದೊಂದು ದಿನ ಅಮೆರಿಕಾ ಪಡೆಗಳು ಜಪಾನ್ ನ ಮೇಲೆ ವಾಯುದಾಳಿಯನ್ನು ನಡೆಸಿದಾಗ ಹೊಂಡಾ ಕಟ್ಟಿದ ಕಾರ್ಖಾನೆಯೂ ಬಾಂಬ್ ದಾಳಿಗೆ ತುತ್ತಾಯಿತು. ಮಾತ್ರವಲ್ಲದೆ ಜಪಾನ್ ನಲ್ಲಿ ಸ್ಟೀಲ್ ನ ತೀವ್ರ ಅಭಾವ ಉಂಟಾಯಿತು. ಆಗಲೂ ಹೊಂಡಾ ಕೈಚೆಲ್ಲಲಿಲ್ಲ. ಆ ಸಮಯದಲ್ಲಿ ಅಮೆರಿಕಾ ಯುದ್ಧವಿಮಾನಗಳೆಲ್ಲವೂ ಇಂಧನ ಟ್ಯಾಂಕ್ ಗಳನ್ನು ಹೊತ್ತು ಹಾರುತ್ತಿದ್ದವು. ಈ ಟ್ಯಾಂಕ್ ಗಳಲ್ಲಿನ ಇಂಧನವನ್ನು ಬಳಸಿದ ನಂತರ ಆಗಸದಿಂದ ಅದನ್ನು ಕಳಗೆ ಬಿಸಾಡಲಾಗುತ್ತಿತ್ತು. ಇದರಿಂದ ವಿಮಾನದ ಭಾರ ಕಡಿಮೆಯಾಗುತ್ತಿದ್ದವು. ಈ ರೀತಿ ಅಮೆರಿಕಾ ಯುದ್ಧವಿಮಾನಗಳು ಜಪಾನ್ ನ ತುಂಬೆಲ್ಲಾ ಸ್ಟೀಲ್ ಟ್ಯಾಂಕ್ ಗಳನ್ನು ಎಸೆದುಹೋಗುತ್ತಿದ್ದವು. ಇದನ್ನೆ ಹೊಂಡಾ ಸಂಗ್ರಹಿಸಿ ಅವುಗಳನ್ನು ಕರಗಿಸಿ ತನ್ನ ಫ್ಯಾಕ್ಟರಿ ನಿರ್ಮಾಣಕ್ಕೆ ಬಳಸಿಕೊಂಡ. ಈ ಸ್ಟೀಲ್ ಟ್ಯಾಂಕ್ ಗಳನ್ನು ಹೊಂಡಾ ಅಮೆರಿಕಾದ ಅಧ್ಯಕ್ಷ ಟ್ರೂಮನ್ ನ ಕೊಡುಗೆ ಎಂದು ಕರೆದ.
ಆದರೂ ಸಮಸ್ಯೆಗಳ ಸರಮಾಲೆ ನಿಲ್ಲಲಿಲ್ಲ. ಯುದ್ಧ ನಂತರ ಜಪಾನ್ ನಲ್ಲಿ ತೀವ್ರ ಇಂಧನ ಅಭಾವವುಂಟಾಯಿತು. ಇಂಧನಗಳೇ ಇಲ್ಲವೆಂದರೇ ಕಾರುಗಳನ್ನು ಕೊಳ್ಳುವರಾರು ? ಹೀಗಾಗಿ ಟಯೋಟಾ ಕಂಪೆನಿ ಕಾರು ಉತ್ಪಾದನೆಯನ್ನು ನಿಲ್ಲಿಸಿತು. ಪರಿಣಾಮವಾಗಿ ಹೋಂಡಾಗೆ ಪಿಸ್ಟನ್ ರಿಂಗ್ ಗಳಿಗೆ ಆರ್ಡರ್ ಬರಲಿಲ್ಲ. ಇಂಧನ ಕೊರೆತೆಯಿದ್ದ ಕಾರಣ ಜನಸಾಮಾನ್ಯರು ಕಾಲ್ನಡಿಗೆಯಲ್ಲಿ ಅಥವಾ ಸೈಕಲ್ ಗಳಲ್ಲಿ ಸಾಗಬೇಕಿತ್ತು. ಇದನ್ನು ಕಂಡ ಹೋಂಡಾ ಸೈಕಲ್ ಗಳಿಗೆ ಇಂಜಿನ್ ಕೂರಿಸಿದರೆ ಹೇಗೆ ಎಂದು ಚಿಂತಿಸಲಾರಂಭಿಸಿದ. ಯಾಕೆಂದರೇ ಸೈಕಲ್ ಇಂಜಿನ್ ಗಳಿಗೆ ಹೆಚ್ಚು ಇಂಧನ ಬೇಕಾಗಿರಲಿಲ್ಲ. ಮಾತ್ರವಲ್ಲದೆ ತನ್ನ ಆಲೋಚನೆಯನ್ನು ಕಾರ್ಯರೂಪಕ್ಕಿಳಿಸಿ ಬೈಕ್ ಇಂಜಿನ್ ತಯಾರಿಸಿದ. ಕೆಲವೇ ವರ್ಷಗಳಲ್ಲಿ ಹೊಂಡಾ ಕಂಪೆನಿಯ ಬೈಕ್ ಇಂಜಿನ್ ಗಳು ಎಷ್ಟು ಪ್ರಖ್ಯಾತವಾದವೆಂದರೇ ಅವುಗಳನ್ನು ಯೂರೋಪ್ ಮತ್ತು ಅಮೆರಿಕಾಕ್ಕೂ ಸರಬರಾಜು ಮಾಡಲಾಯಿತು. ಮುಂದಿನದು ಇತಿಹಾಸ !