Advertisement
ಎರಡು ಯೋಜಿತ ಉತ್ಪಾದನಾ ಮಾದರಿಗಳು ಮತ್ತು ಮೂರು ಪರಿಕಲ್ಪನೆ ಮಾದರಿಗಳ ಹೋಂಡಾ-ಬ್ರಾಂಡ್ ಎಲೆಕ್ಟ್ರಿಕ್ ವಾಹನಗಳ (EV) ವಿಶ್ವ ಪ್ರೀಮಿಯರ್ ಕಾರ್ಯಕ್ರಮವನ್ನು ಹೋಂಡಾ ಕಂಪನಿ ನಡೆಸಿತ್ತು.
Related Articles
Advertisement
ಇನ್ನು 5 ವರ್ಷದ ಒಳಗೆ ಮಾರಾಟವನ್ನು ಆರಂಭಿಸುವ ಗುರಿಯೊಂದಿಗೆ ಮೂರು ಪರಿಕಲ್ಪನೆಯ ಮಾದರಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಹೋಂಡಾ ಚೀನಾದಲ್ಲಿ ತನ್ನ ಮಾರಾಟ ಜಾಲವನ್ನು ಹೆಚ್ಚಿಸಲು ಆರಂಭಿಸಿದ್ದು, ಪೂರ್ಣ ಪ್ರಮಾಣದ ಎಲೆಕ್ಟ್ರಿಕ್ ವಾಹನಗಳ ವ್ಯಾಪಾರ ಆರಂಭಕ್ಕೆ ತಯಾರಿ ನಡೆಸುತ್ತಿದೆ. ಸದ್ಯಕ್ಕೆ ಇವುಗಳ ಮಾರಾಟವನ್ನು ಈಗಿರುವ ಮಾರುಕಟ್ಟೆಗಳ ವ್ಯಾಪ್ತಿಯಲ್ಲಿ ನಡೆಸಲಾಗುವುದು. ಆದರೆ, ಭವಿಷ್ಯದಲ್ಲಿ ಇ: ಎನ್ ಸರಣಿ ಮಾರಾಟ ವ್ಯಾಪ್ತಿಯನ್ನು ಇತರ ಪ್ರದೇಶಗಳಿಗೆ ವಿಸ್ತರಿಸಲಾಗುವುದು ಮತ್ತು ಪ್ರಮುಖ ನಗರಗಳಲ್ಲಿ ಇ: ಎನ್ ಡೀಲರ್‌ಶಿಪ್ ಸ್ಥಳಗಳನ್ನು ಪ್ರಾರಂಭಿಸಲಾಗುವುದು ಎಂದು ಕಂಪನಿ ತಿಳಿಸಿದೆ.
ಡಾಂಗ್ಫಾಂಗ್ ಹೋಂಡಾ(Dongfeng Honda) ಮತ್ತು ಜಿಎಸಿ (GAC Honda) ವಾಹನಗಳ ಉತ್ಪಾದನೆಯನ್ನು 2024ರಲ್ಲಿ ಪ್ರಾರಂಭಿಸುವ ಉದ್ದೇಶಗಳೊಂದಿಗೆ ಇವುಗಳ ಉತ್ಪಾದನೆಗಾಗಿಯೇ ಹೊಸ ಉತ್ಪಾದನಾ ಘಟಕಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಿದೆ.
ಹೋಂಡಾ ಸೆನ್ಸಿಂಗ್ 360, ಓಮ್ನಿಡೈರೆಕ್ಷನಲ್ ಅಡ್ವಾನ್ಸ್ಡ್ ಡ್ರೈವರ್-ಅಸಿಸ್ಟೆನ್ಸ್ ಸಿಸ್ಟಮ್ (ADAS)ಅನ್ನು 2022ಕ್ಕೆ ಚೀನಾದಲ್ಲಿ ಆರಂಭಿಸಲಿದೆ. ಹೋಂಡಾ ಅಪ್ಲಿಕೇಶನ್ ಅನ್ನು ಜಾಗತಿಕವಾಗಿ ವಿಸ್ತರಿಸುವುದನ್ನು ಮುಂದುವರಿಸುತ್ತದೆ ಮತ್ತು ಎಲ್ಲಾ ಆಟೋಮೊಬೈಲ್ ಮಾದರಿಗಳಿಗೆ ಅನ್ವಯಿಸಲು ಆಗುವಂತೆ ಆ ಅಪ್ಲಿಕೇಷನ್ ಗಳನ್ನು ಅಬಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು. 2030 ರ ವೇಳೆಗೆ ಚೀನಾ ಸೇರಿದಂತೆ ವಿಶ್ವದ ಪ್ರಮುಖ ಅಟೋಮೊಬೈಲ್ ಮಾರುಕಟ್ಟೆಗಳು ಈ ಅಪ್ಲಿಕೇಷನ್ ಮಾದರಿಗಳನ್ನು ಹೊಂದಲಿವೆ ಎಂದು ಕಂಪನಿ ತಿಳಿಸಿದೆ.