ನವದೆಹಲಿ: ಎಲೆಕ್ಟ್ರಿಕ್ ವಾಹನ ತಯಾರಿಕಾ ಕ್ಷೇತ್ರಕ್ಕೆ ಧುಮುಕಿರುವ ಹೊಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿ (HMSI) ತನ್ನ ಗುರಿಯನ್ನು ಹೆಚ್ಚುಗೊಳಿಸುವ ಉದ್ದೇಶದಿಂದ ಕರ್ನಾಟಕದ ನರಸಾಪುರದಲ್ಲಿರುವ ತನ್ನ ಪ್ಲಾಂಟ್‌ನಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗಾಗಿ ನೂತನ ಘಟಕವೊಂದನ್ನು ತೆರೆಯುವ ಬಗ್ಗೆ ಬುಧವಾರ ಮಾಹಿತಿ ಹಂಚಿಕೊಂಡಿದೆ.
ಈ ಘಟಕದಲ್ಲಿ ಉತ್ಪಾದಿಸಲ್ಪಟ್ಟ ವಾಹನಗಳು ಮುಂದಿನ ಆರ್ಥಿಕ ವರ್ಷದಿಂದಲೇ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ ಎಂದು ಕಂಪನಿ ತಿಳಿಸಿದೆ.
ಅಲ್ಲದೆ 2030 ರ ವೇಳೆಗೆ 10 ಲಕ್ಷ ಎಲೆಕ್ಟ್ರಿಕ್ ವಾಹನ ತಯಾರಿಕೆಯ ಗುರಿಯನ್ನು ಹೊಂದಿರುವ ಹೊಂಡಾ ಕಂಪನಿಗೆ ಈ ಘಟಕ ಸಹಕಾರಿಯಾಗಲಿದೆ.
ʻಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು ಇದು ಭಾರತದ ವಾಣಿಜ್ಯ ವ್ಯವಸ್ಥೆಗೂ ಭಾರೀ ಬೆಂಬಲ ನೀಡುತ್ತದೆ. ಎಲೆಕ್ಟ್ರಿಕ್ ವ್ಯವಸ್ಥೆಯಲ್ಲಿ ನಾವು ಇನ್ನಷ್ಟು ಬೆಳೆಯುವ ಉದ್ದೇಶದಿಂದ ನಾವು ನರಸಾಪುರದಲ್ಲಿ ನೂತನ ಎಲೆಕ್ಟ್ರಿಕ್ ವಾಹನ ತಯಾರಿಕಾ ಘಟಕ ತೆರೆಯಲಿದ್ದೇವೆʼ ಎಂದು ಹೊಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿ (HMSI)ಯ ಎಂಡಿ, ಅಧ್ಯಕ್ಷ ಮತ್ತು ಸಿಇಒ ಅಟ್ಸುಷಿ ಒಗಾಟಾ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:
ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಮೇಲೆ ಬೊಲೆರೊ!