ಶಹಾಬಾದ: ಕೊರೊನಾ ಸೋಂಕು ತಡೆಗಟ್ಟು ವ ನಿಟ್ಟಿನಲ್ಲಿ ಹೊನಗುಂಟಾ ಗ್ರಾಮ ಪಂಚಾಯಿತಿ ಅವಿರತವಾಗಿ ಶ್ರಮಿಸುತ್ತಿದೆ. ಆರೋಗ್ಯ ಇಲಾಖೆ ಸೂಚಿಸಿರುವ ಮುಂಜಾಗ್ರತ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವ ಕುರಿತು ಗ್ರಾಪಂನ ಟಾಸ್ಕ್ಫೋರ್ಸ್ ಪಡೆ ಗ್ರಾಪಂ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಜಾಗೃತಿ ಮೂಡಿಸಿದೆ.
ಕೊರೊನಾ ರೋಗ ಹರಡದಂತೆ ವಿಶೇಷ ಕಾಳಜಿ ವಹಿಸಿದೆ. ಗ್ರಾಪಂನಲ್ಲಿ ಒಟ್ಟು 17 ಸದಸ್ಯ ಬಲವಿದ್ದು, ಇದರ ವ್ಯಾಪ್ತಿಯಲ್ಲಿ ಹೊನಗುಂಟಾ, ವಡ್ಡರವಾಡಿ, ಕಡೆಹಳ್ಳಿ ಗ್ರಾಮಗಳು ಬರುತ್ತವೆ. ಸಾರ್ವಜನಿಕರಿಗೆ ಕಡ್ಡಾಯ ಮಾಸ್ಕ್ ಧರಿಸುವಂತೆ, ಸಾಮಾಜಿಕ ಅಂತರ ಪಾಲಿಸುವಂತೆ, ಕೈಗಳನ್ನು ಸ್ವತ್ಛ ಇಟ್ಟುಕೊಳ್ಳುವಂತೆ, ಸ್ಯಾನಿಟೈಸರ್ ಬಳಸುವಂತೆ ಸೂಚಿಸಲಾಗುತ್ತಿದೆ. ವಾರ್ಡ್‌ಗಳ ವ್ಯಾಪ್ತಿಯಲ್ಲಿ ದ್ರಾವಣ ಸಿಂಪಡಿಸಲಾಗಿದೆ.
ಗ್ರಾಮಸ್ಥರು ಅನಾವಶ್ಯಕ ಹೊರಗಡೆ ಬರದಂತೆ ಅರಿವು ಮೂಡಿಸುವ ಕಾರ್ಯವನ್ನು ಗ್ರಾಪಂ ಸದಸ್ಯರು ಹಾಗೂ ಗ್ರಾಪಂ ಎಲ್ಲಾ ಸಿಬ್ಬಂದಿಯವರು ಕಂದಾಯ, ಆರೋಗ್ಯ, ಪೊಲೀಸ್, ಆಶಾ, ಅಂಗನವಾಡಿ ಮೇಲ್ವಿಚಾರಕಿ ಹಾಗೂ ಕಾರ್ಯಕರ್ತರೊಟ್ಟಿಗೆ ಮಾಡುತ್ತಿದ್ದಾರೆ. ಕೊರೊನಾ ಲಸಿಕೆ ಹಾಕಿಸಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಿ ಕೊರೊನಾ ಮುಕ್ತ ಗ್ರಾಮ ಪಂಚಾಯಿತಿಯಾಗಿಸುವತ್ತ ಗ್ರಾಪಂ ಸದಸ್ಯರು ಮಹತ್ವದ ಹೆಜ್ಜೆ ಇಟ್ಟಿದ್ದಾರೆ.
ಮಾಸ್ಕ್-ಸ್ಯಾನಿಟೈಸರ್ ಹಂಚುವ ಮೂಲಕ ಕಡ್ಡಾಯವಾಗಿ ಮಾಸ್ಕ್ ಧರಿಸಲು ಅರಿವು ಮೂಡಿಸಿದ್ದಾರೆ. ಕಂದಾಯ, ಆರೋಗ್ಯ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸ್ ಅ ಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಸೇರಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಟಾಸ್ಕ್ಪೋರ್ಸ್ ಸಭೆ ನಡೆಸಿ ಗ್ರಾಪಂ ಮಟ್ಟದಿಂದಲೇ ಕೊರೊನಾ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದಾರೆ. ಮುಂಜಾಗ್ರತೆ ಕ್ರಮಗಳ ಪಾಲನೆಗೆ ಹೆಚ್ಚು ಒತ್ತು ನೀಡುವಂತೆ ಮನವರಿಕೆ ಮಾಡಿದ್ದಾರೆ. ಗ್ರಾಮೀಣ ಮಟ್ಟದ ಕಾರ್ಯಪಡೆ ಅತ್ಯಂತ ಮುತುವರ್ಜಿ ವಹಿಸಿ ಕರ್ತವ್ಯ ನಿರ್ವಹಿಸುತ್ತಿದೆ. ಈ ನಿಟ್ಟಿನಲ್ಲಿ ಕೊರೊನಾ ಸರಪಳಿ ತುಂಡರಿಸಿ ಕೊರೊನಾ ಮುಕ್ತ ಗ್ರಾಮ ಮಾಡುವತ್ತ ದಿಟ್ಟ ಹೆಜ್ಜೆ ಇಡಲಾಗಿದೆ.
ವಾರ್ಡ್ ವ್ಯಾಪ್ತಿಯ ಮನೆಗಳಿಂದ ಸಂಗ್ರಹವಾಗುವ ಕಸ ವಿಲೇವಾರಿ ಮಾಡಿ ಗ್ರಾಮವನ್ನು ಕಸಮುಕ್ತ, ಸ್ವತ್ಛ ಗ್ರಾಮವಾಗಿಸಲು ಕ್ರಮ ವಹಿಸಿದ್ದಾರೆ. ಸಾರ್ವಜನಿಕರಿಗೆ ಅಗತ್ಯ ಮೂಲಸೌಕರ್ಯ ಒದಗಿಸಲು ಗ್ರಾಪಂನ ಪಿಡಿಒ ರಾಜಶೇಖರ ಬಾಳಿ, ಕಾರ್ಯದರ್ಶಿ ಜಗನ್ನಾಥ, ಬಿಲ್ ಕಲೆಕ್ಟರ್, ಕಂಪೂÂಟರ್ ಆಪ್‌ರೇಟರ್, ವಾಟರ್‌ವೆುನ್, ಸ್ವತ್ಛತಾಕರ್ಮಿಗಳು ಸೇರಿ ಇತರೆ ಸಿಬ್ಬಂದಿ ಕೊರೊನಾ ನಿಯಂತ್ರಣಕ್ಕೆ ವಿಶೇಷ ಕಾಳಜಿ ವಹಿಸುವ ಮೂಲಕ ಕೊರೊನಾ ಮುಂಚೂಣಿ ಯೋಧರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.