Advertisement

ಕಷಾಯ ಪುಡಿ ವಿತರಣೆಗೆ ಚಾಲನೆ

04:51 PM May 07, 2020 | Suhan S |

ಗದಗ: ಮಾರಕ ಕೋವಿಡ್ 19 ನಿಯಂತ್ರಣ ಹಾಗೂ ಮಾನವನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಹೋಮಿಯೋಪಥಿ ಔಷಧಿಗಳ ವಿತರಣೆಗೆ ಮುಂದಾಗಿರುವ ಜಿಲ್ಲಾ ಆಯುಷ್‌ ಇಲಾಖೆ ಕ್ರಮ ಸ್ವಾಗತಾರ್ಹ ಎಂದು ಶಾಸಕ ಎಚ್‌.ಕೆ. ಪಾಟೀಲ ಹೇಳಿದರು.

Advertisement

ಕಂಟೇನ್ಮೆಂಟ್‌ ಮತ್ತು ಸೀಲ್‌ಡೌನ್‌ ಪ್ರದೇಶಗಳಲ್ಲಿ ಹೋಮೀಯೋಪಥಿ ಔಷಧಿ ವಿತರಣಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕೋವಿಡ್ 19 ರೋಗಕ್ಕೆ ಯಾವುದೇ ಔಷಧಿ ದೊರೆತಿಲ್ಲ. ಜಿಲ್ಲೆಯ ಆಯುಷ್‌ ಇಲಾಖೆ ಈ ರೋಗ ಬರದಂತೆ ತಡೆಯಲು, ಬಂದಿದ್ದರೇ ನಿವಾರಿಸುವ ಶಕ್ತಿ ಹೊಂದಿರುವ ಆಯುರ್ವೇದ ಕಷಾಯ ಪುಡಿ, ಹೋಮೀಯೋಪಥಿ ಔಷಧಿಯನ್ನು ತಯಾರಿಸಿದೆ. ಸಾರ್ವಜನಿಕರು ಕಷಾಯ ಸೇವಿಸಿ, ಕೋವಿಡ್ 19 ದಿಂದ ದೂರವಿರಬೇಕು ಎಂದರು.

ಡಾ| ಸುಜಾತಾ ಪಾಟೀಲ ಮಾತನಾಡಿ, ಕೋವಿಡ್ 19 ವಾರಿಯರ್ಗೆ ರೋಗ ನಿರೋಧಕ ಶಕ್ತಿ ವೃದ್ಧಿಸಲು ಹೋಮಿಯೋಪತಿ ಔಷಧ ಹಾಗೂ ಕಷಾಯ ಪುಡಿ ವಿತರಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು. ಜಿಪಂ ಅಧ್ಯಕ್ಷ ಸಿದ್ದು ಪಾಟೀಲ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next