Advertisement

“ಮನೆ-ಮನೆಗೆ ಗಂಗೆ’ಕಾಲಮಿತಿಯಲ್ಲೇ ಜಾರಿ: ಸಚಿವ ಕೆ.ಎಸ್‌.ಈಶ್ವರಪ್ಪ

11:44 PM Dec 17, 2021 | Team Udayavani |

ಬೆಳಗಾವಿ: ಜಲಜೀವನ್‌ ಮಿಷನ್‌ ಯೋಜನೆಯಡಿ ಕೈಗೆತ್ತಿಕೊಂಡಿರುವ ಮನೆ- ಮನೆಗೆ ಗಂಗೆ ಯೋಜನೆ ಯನ್ನು ಕಾಲ ಮಿತಿಯೊಳಗೆ ಜಾರಿ ಗೊಳಿಸಲಾಗು ವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ತಿಳಿಸಿದರು.

Advertisement

ಬಿಜೆಪಿಯ ರವಿಕುಮಾರ್‌ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆರಂಭದಲ್ಲಿ 23 ಲಕ್ಷ ಮನೆಗಳಿಗೆ ಮಾತ್ರ ನೀರಿನ ಸಂಪರ್ಕವಿತ್ತು. 2020-21ನೇ ಸಾಲಿನಲ್ಲಿ 3 ಲಕ್ಷ, 2021-22ನೇ ಸಾಲಿ ನಲ್ಲಿ 25 ಲಕ್ಷ ಮನೆಗಳಿಗೆ ಕುಡಿವ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಪ್ರತಿ ದಿನ 10 ಸಾವಿರ ಮನೆಗಳಿಗೆ ನಳದ ಸಂಪರ್ಕ ನೀಡ ಲಾಗುತ್ತಿದ್ದು, 2023-24ರಲ್ಲಿ 97 ಲಕ್ಷ ಮನೆಗಳಿಗೆ ಶುದ್ಧ ಕುಡಿವ ನೀರು ಪೂರೈಸಲಾಗುವುದು ಎಂದರು.

ಇದನ್ನೂ ಓದಿ:ನೆರೆ ಪರಿಹಾರಕ್ಕೆ ಕೇಂದ್ರದಿಂದ ಹೆಚ್ಚು ಹಣ ಬಿಡುಗಡೆ ಮಾಡಿಸಿ : ಎಸ್ ಆರ್ ಪಾಟೀಲ್ ಆಗ್ರಹ

ಪಿಡಿಒಗಳಿಗೆ ವಸತಿಗೃಹ ಕಟ್ಟಲು ಚಿಂತನೆ
ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳು ಆಯಾ ಕೇಂದ್ರ ಸ್ಥಾನದಲ್ಲಿ ದೊರೆಯುವಂತೆ ಪೂರಕವಾಗಲು ವಸತಿಗೃಹಗಳನ್ನು ನಿರ್ಮಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ತಿಳಿಸಿದರು.

ಬಿಜೆಪಿಯ ಡಾ| ತಳವಾರ್‌ ಸಾಬಣ್ಣ ಕೇಳಿದ ಪ್ರಶ್ನೆಗೆ ಉತ್ತರಿಸಿ, ಗ್ರಾ.ಪಂ.ಸಿಬಂದಿಗೆ ಕಚೇರಿಯಲ್ಲಿರುವಂತೆ ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಜನರಿಗೆ ಲಭ್ಯವಾಗಿಲ್ಲವೆಂಬ ದೂರು ಬಂದರೆ, ಶಿಸ್ತು ಕ್ರಮ ಜರಗಿಸಲಾಗುವುದು ಎಂದರು. ಸಭಾಪತಿ ಹೊರಟ್ಟಿ ಅವರು, ಮೊದಲು ವಸತಿಗೃಹ ಕಟ್ಟಿಸಿಕೊಡಿ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next