Advertisement

ಐಷಾರಾಮಿ ಜೀವನಕ್ಕಾಗಿ ಮನೆಗಳ್ಳತನ : ಇಬ್ಬರ ಬಂಧನ

10:36 AM May 14, 2022 | Team Udayavani |

ಬೆಂಗಳೂರು: ಐಷಾರಾಮಿ ಜೀವನಕ್ಕಾಗಿ ಮನೆ ಕಳವು ಮಾಡುತ್ತಿದ್ದ ಇಬ್ಬರು ಕಳ್ಳರು ಗಿರಿನಗರ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ವೀರಭದ್ರನಗರ ನಿವಾಸಿ ನಾಗರಾಜು ಅಲಿಯಾಸ್‌ ಎಸಿ (24) ಮತ್ತು ಶೇಖರ್‌ ಅಲಿಯಾಸ್‌ ತಿಪ್ಪೆ (26) ಬಂಧಿತರು. ಅವರಿಂದ 2.10 ಲಕ್ಷ ರೂ. ಮೌಲ್ಯದ 23 ಗ್ರಾಂ ಚಿನ್ನಾಭರಣ, 150 ಗ್ರಾಂ ಬೆಳ್ಳಿ, 2 ಸಾವಿರ ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ 1 ದ್ವಿಚಕ್ರವಾಹನ ಜಪ್ತಿ ಮಾಡಲಾಗಿದೆ.

ಬನಶಂಕರಿ 3ನೇ ಹಂತದ ವೀರಭದ್ರನಗರದ ನಿವಾಸಿ ಆಟೋ ಚಾಲಕ ರಮೇಶ್‌ ಎಂಬುವವರು ಮೇ 2ರಂದು ಮನೆಗೆ ಬೀಗ ಹಾಕಿಕೊಂಡು ಕುಟುಂಬದ ಸಮೇತ ತಮಿಳು ನಾಡಿಗೆ ತೆರಳಿದ್ದರು. ಮೇ 2ರಂದು ತಡರಾತ್ರಿ 12.30ರ ಸುಮಾರಿಗೆ ಮನೆಗೆ ವಾಪಸ್‌ ಬಂದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.

ದುಷ್ಕರ್ಮಿಗಳು ಅಡುಗೆ ಮನೆಯ ವೆಂಟಿಲೇಟರ್‌ ವಿಂಡೋ ಕತ್ತರಿಸಿ ಮನೆ ಪ್ರವೇಶಿಸಿ ಕಬೋರ್ಡ್‌ನಲ್ಲಿದ್ದ ಚಿನ್ನಾ ಭರಣ, ನಗದು, ವಾಹನದ ದಾಖಲೆಗಳು ಕಳವು ಮಾಡಿದ್ದರು.

ಇದನ್ನೂ ಓದಿ:ಫ್ಲಿಪ್‌ ಕಾರ್ಟ್‌ ಕಸ್ಟಮರ್‌ ಕೇರ್‌ ಸಿಬ್ಬಂದಿ ಎಂದು ನಂಬಿಸಿ ಸಾವಿರಾರೂ ರೂ. ವಂಚನೆ

Advertisement

ಬೆರಳಚ್ಚು ಸುಳಿವು ಆಧರಿಸಿ ಬಂಧನ

ಘಟನಾ ಸ್ಥಳಕ್ಕೆ ಬಂದ ಬೆರಳಚ್ಚು ತಜ್ಞರು ಸಂಗ್ರಹಿಸಿದ ಸಾಕ್ಷ್ಯಗಳನ್ನು ಪರಿಶೀಲಿಸಿದಾಗ, ಆರೋಪಿ ನಾಗರಾಜನ ಬೆರಳಚ್ಚಿಗೆ ಹೋಲಿಕೆಯಾಗಿದೆ. ಈ ಸುಳಿವಿನ ಮೇರೆಗೆ ಮೊದಲಿಗೆ ನಾಗರಾಜನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಾನೆ. ಈತ ನೀಡಿದ ಮಾಹಿತಿ ಮೇರೆಗೆ ಮತ್ತೂಬ್ಬ ಆರೋಪಿ ಶೇಖರ್‌ ನನ್ನು ಬಂಧಿಸಲಾಗಿದೆ. ಅವರ ಬಂಧನದಿಂದ ಗಿರಿನಗರ ಹಾಗೂ ಬಸವನಗುಡಿ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಎರಡು ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀ ಸರು ಹೇಳಿದರು.

ಇಬ್ಬರು ಆರೋಪಿಗಳು ಅಪರಾಧ ಹಿನ್ನೆಲೆ ವುಳ್ಳವರಾಗಿದ್ದು, ಈ ಹಿಂದೆ ವಿಜಯನಗರ, ಗಿರಿನಗರಮ, ಜೆ.ಪಿ.ನಗರ, ಹನುಮಂತನಗರ ಠಾಣೆಗಳಲ್ಲಿ ಕಳ್ಳತನ ಸೇರಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಕೆಲ ಪ್ರಕರಣಗಳಲ್ಲಿ ಜೈಲು ಸೇರಿದ್ದರು ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next