Advertisement
· ಪ್ರತಿಯೊಬ್ಬರ ಮನೆಯಲ್ಲಿಯೂ ಅರಿಶಿನ ಇದ್ದೆ ಇರುತ್ತದೆ. ಸ್ವಲ್ಪ ಅರಿಶಿನ ಪುಡಿಯನ್ನು ಒಂದು ಪ್ಯಾನ್‌ನಲ್ಲಿ ಹಾಕಿ ಕಡು ಕಂದು ಬಣ್ಣ ಬರುವವರೆಗೂ ಹುರಿಯಿರಿ. ಬಳಿಕ ತಣ್ಣಗಾಗಲು ಬಿಡಿ ಇದಕ್ಕೆ ಜೇನುತುಪ್ಪ ಸೇರಿಸಿ ಫೇಸ್ ಪ್ಯಾಕ್ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. ಅರ್ಧ ಗಂಟೆ ಬಳಿಕ ಮುಖ ತೊಳೆಯಿರಿ. ಹೀಗೆ ವಾರದಲ್ಲಿ ಎರಡು ಬಾರಿ ಮಾಡಿ.
Related Articles
Advertisement
· ಮುಖದಲ್ಲಿನ ಕಪ್ಪು ಕಲೆಗಳನ್ನು ಹೋಗಲಾಡಿಸಲು ಸ್ಮಾಶ್ ಮಾಡಿದ ಬಾಳೆಹಣ್ಣು, ಒಂದು ಸ್ಪೂನ್ ಓಟ್ಸ್ ಮತ್ತು ಒಂದು ಸ್ಪೂನ್ ಜೇನುತುಪ್ಪ ವನ್ನು ಹಾಕಿ ಮಿಕ್ಸ್ ಮಾಡಿ ಬಳಿಕ ಮುಖಕ್ಕೆ ಹಚ್ಚಿ ನಿಧಾನಾಗಿ ಮಸಾಜ್ ಮಾಡಿ 10 ನಿಮಿಷಗಳ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದು ವ್ಯತ್ಯಾಸವನ್ನು ಕಂಡುಕೊಳ್ಳಿ
ಜಿಡ್ಡು ನಿವಾರಣೆಗೆಕಿತ್ತಳೆ ಹಣ್ಣಿನ ತಿರುಳು ಅದಕ್ಕೆ 2 ಚಮಚ ಹಾಲು ಮತ್ತು 2 ಚಮಚ ಕಹಿಬೇವಿನ ಪೇಸ್ಟ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಬಳಿಕ ಮುಖಕ್ಕೆ ಲೇಪಿಸಿ ಕೊಳ್ಳಿ 20 ನಿಮಿಷಗಳ ಬಳಿಕ ಮುಖ ತೊಳೆಯಿರಿ. – ವಿಜಿತಾ ಬಂಟ್ವಾಳ