Advertisement
ಸರಳವಾದ ಮನೆಮದ್ದಿನ ಮೂಲಕ ಇದನ್ನು ಪರಿಹರಿಸ ಬಹುದು. ಬಾಯಿ ದುರ್ಗಂಧಕ್ಕೆ ಮುಖ್ಯ ಕಾರಣ ಆಹಾರ ಸೇವನೆಯಲ್ಲಾಗುವ ಬದಲಾವಣೆ. ಸರಿಯಾದ ಸಮಯಕ್ಕೆ ಆಹಾರ ಸೇವಿಸದಿರುವುದು ಹಾಗೂ ಅನಿಯಮಿತ ಆಹಾರ ಸೇವನೆಯು ಕೂಡ ಇದಕ್ಕೆ ಕಾರಣವಾಗುತ್ತದೆ. ಅಲ್ಲದೇ ಬಾಯಿ ಒಣಗುವಿಕೆ, ನಿರ್ಜಲೀಕರಣ, ಮಾದಕ ವಸ್ತುಗಳ ಸೇವನೆ ಹಾಗೂ ಕೆಲವು ಆಹಾರಗಳು ಬಾಯಿ ವಾಸನೆಯನ್ನುಂಟು ಮಾಡುತ್ತವೆ. ಇದಕ್ಕೆ ಪರಿಹಾರ ಮನೆಯಲ್ಲೇ ಇದೆ.
ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಮೊದಲಾದ ಮಸಾಲೆ ಪದಾರ್ಥ, ಸಕ್ಕರೆಯುಕ್ತ ಆಹಾರ ಪದಾರ್ಥಗಳ ಸೇವನೆಯನ್ನು ಆದಷ್ಟು ಕಡಿಮೆಗೊಳಿಸಿ. ಆ್ಯಪಲ್, ಮೊಸರಿನಂತಹ ಪದಾರ್ಥಗಳನ್ನು ಬೆಳಗ್ಗಿನ ಆಹಾರದೊಂದಿಗೆ ಸೇವಿಸುವುದರಿಂದ ಬಾಯಿ ವಾಸ ನೆಯನ್ನು ತಡೆಗಟ್ಟಬಹುದು.
Related Articles
Advertisement
-ಸುಶ್ಮಿತಾ ಶೆಟ್ಟಿ