ಮದುವೆಯಾದ ಹೊಸತು, ನಾನಾ ಕಾರಣಗಳಿಂದ, ನಾವು ಗಂಡ- ಹೆಂಡತಿ ತುಂಬು ಕುಟುಂಬದಿಂದ ಹೊರಬರಬೇಕಾಯಿತು. ನಮ್ಮವರ ಫೋಟೋಗ್ರಫಿ ವೃತ್ತಿ ನಮಗೆ ಆಸರೆಯಾಯಿತು. ಇದರ ನಡುವೆ ಪುಟ್ಟ ಕಂದಮ್ಮ ಮನೆ ಮನಸ್ಸುಗಳನ್ನ ತುಂಬಿದಳು. ಅವಳ ಪಾಲನೆ ಪೋಷಣೆಯಲ್ಲಿಯೇ ಸಮಯ ಓಡತೊಡಗಿತು. ಎಲ್ಲವೂ ಒಂದು ಗತಿಯಲ್ಲಿ ಅದರ ಪಾಡಿಗದು ಸಾಗುತ್ತಿದ್ದಾಗಲೇ ಕೋವಿಡ್ ಬಂದು ನಮ್ಮಗಳ ನೆಮ್ಮದಿಯ ಕಸಿದುಕೊಂಡು ಬಿಟ್ಟಿತು. ನಮ್ಮದು ಹೊನ್ನಾವರ. ಇವರ ಫೊಟೋಗ್ರಫಿ ಕೆಲಸದಿಂದಲೇ ನಮ್ಮ ಕುಟುಂಬದ ಹೊಟ್ಟೆಪಾಡು ನಡೆಯುತ್ತಿತ್ತು. ಇನ್ನೇನು ಮದುವೆ ಸೀಸನ್ ಶುರುವಾಗಿ ಫೋಟೋಗ್ರಫಿಗೆ ಬೇಡಿಕೆ ಬರುತ್ತದೆಅನ್ನುವ ಹೊತ್ತಿಗೆ ಲಾಕ್ ಡೌನ್ ಬಂದು ಎಲ್ಲವೂ ಸ್ತಬ್ಧವಾಯಿತು.
ಮಕ್ಕಳಿಗೆಂದು ತಯಾರಿಸಿದ್ದು… : ಕುಟುಂಬ ನಿರ್ವಹಣೆಯ ಸಲುವಾಗಿ ನಾನು ದುಡಿಯಲೇಬೇಕೆಂಬ ಹಟ ಆಗ ತಲೆಯಲ್ಲಿ ಹೊಕ್ಕಿತು. ಫೇಸ್‌ಬುಕ್ ನಲ್ಲಿ ಮಹಿಳಾ ಮಾರುಕಟ್ಟೆ ಎಂಬ ಗುಂಪೊಂದುಶುರುವಾಗಿ ತಿಂಗಳು ಕಳೆದಿತ್ತು. ಅದೇ ಹೊತ್ತಿಗೆ ನನ್ನಿಬ್ಬರು ಕಸಿನ್‌ಗಳು, ಪುಟ್ಟ ಮಕ್ಕಳಿಗೆ ತಿನ್ನಿಸೋ ರಾಗಿಸರಿ ಹಿಟ್ಟು ಬೇಕಿತ್ತು ಕಣೇ. ನೀನು ಮಾಡ್ಕೋತೀಯಲ್ಲ ನಿನ್ನ ಮಗಳಿಗೆ? ಅದರಲ್ಲೇ ಸ್ವಲ್ಪ ಕೊಡ್ತೀಯಾ ಅಂತ ಕಾಲ್ ಮಾಡಿ ಕೇಳಿದ್ರು. ಇದನ್ನೇ ಯಾಕೆ ಹೊಟ್ಟೆ ಪಾಡಿನ ವೃತ್ತಿಯನ್ನಾಗಿ ಮಾಡಿಕೊಳ್ಳಬಾರದು? ಎಂಬ ಯೋಚನೆ ಬಂದದ್ದೇ ಆಗ. ನಾನು ತಡ ಮಾಡಲಿಲ್ಲ. ಮರುದಿನದಿಂದಲೇ ಆ ಕೆಲಸದಲ್ಲಿ ತೊಡಗಿಕೊಂಡೆ. ಮಕ್ಕಳಿಗೆ ತಿನ್ನಿಸೋ ರಾಗಿಸರ್ರಿ ಹಿಟ್ಟು, ಎಲ್ಲ ವಯೋಮಾನದವರಿಗೂ ಹೊಂದುವಂತ ನಾಲ್ಕೈದು ಬಗೆಯ ಪೌಡರ್‌ಗಳನ್ನ ಕೇಸರಿ ಏಲಕ್ಕಿ ವೆನಿಲ್ಲಾ ನಾಲ್ಕಾರು ಫ್ಲೇವರುಗಳಲ್ಲಿ ತಯಾರಿಸಿದೆ. ಡಯಾಬಿಟೀಸ್ ಇರುವವರಿಗೆ, ಸುಸ್ತು ನಿಶ್ಯಕ್ತಿಗಳಿರುವವರಿಗೆ ಬೆಳೆಯುವ ಮಕ್ಕಳಿಗೆ ಸಂಪ್ಲಿಮೆಂಟರಿ ಹೆಲ್ತ್‌ಮಿಕ್ಸ್ ಗಳನ್ನ ಸಿದ್ಧಪಡಿಸಿದೆ. ಈ ಉತ್ಪನ್ನಗಳಿಗೆ ಯಾವುದೇ ಕೆಮಿಕಲ್ ಪ್ರಿಸರ್ವೇಟಿವ್ ಕಲರ್ ಬಳಸದೇ ಶುದ್ಧ, ಸ್ವಸ್ಥ ಆಹಾರ ತಯಾರುಮಾಡಿದೆ. ಅಲ್ಲಿಂದ ತಿರುಗಿ ನೋಡಲಿಲ್ಲ. ಹತ್ತಿಪ್ಪತ್ತು ಕೆ.ಜಿ.ರಾಗಿ ಸರ್ರಿ ಪೌಡರ್‌ಗೆ ಬೇಡಿಕೆ ಬರಬಹುದೇನೋ ಎಂಬ ನಿರೀಕ್ಷೆಯಲ್ಲಿ ನಾನಿದ್ದೆ.
ಆದರೆ, ಅದರ ನಾಲ್ಕು ಪಟ್ಟು ಆರ್ಡರ್ ಬಂತು. ಈಗ ತಿಂಗಳಿಗೆ ಎರಡು ಕ್ವಿಂಟಾಲ್ ಪೌಡರ್‌ಗೆ ಡಿಮ್ಯಾಂಡ್ ಇದೆ. ಮೊದಲು ಮಕ್ಕಳಿಗೆಂದು ಮಾತ್ರ ಶುರುಮಾಡಿದ್ದು, ಇವತ್ತು ಎಲ್ಲ ವಯೋಮಾನದವರಿಗೂ ಹೊಂದುವಂಥ ನಾಲ್ಕೈದು ಬಗೆಯ ಪೌಡರ್‌ಗಳನ್ನು ಕೇಸರಿ, ಏಲಕ್ಕಿ, ವೆನಿಲ್ಲಾ ಮುಂತಾದ ಫ್ಲೇವರ್‌ಗಳಲ್ಲಿ ತಯಾರು ಮಾಡ್ತಿದ್ದೇನೆ.
ವಿದೇಶಕ್ಕೋ ಹೋಗಿದೆ! :
ಹತ್ತು ಕೆ.ಜಿ.ಯಿಂದ ಪ್ರಾರಂಭವಾದ ನನ್ನ ಗೃಹ ಉದ್ಯಮ, ಇವತ್ತು ನಾಲ್ಕು ಜನಕ್ಕೆ ಕೆಲಸ ಕೊಡುವ ಹಂತಕ್ಕೆ ಬೆಳೆದಿದೆ. ನನ್ನ ಖರ್ಚುಗಳನ್ನು ಕಳೆದು ಮನೆಯ ಜವಾಬ್ದಾರಿಗಳಿಗೂ ಹೆಗಲಾಗಿದ್ದೇನೆ. ಹೊಸಕಾರು ಕೊಳ್ಳುವ ನನ್ನವರ ಆಸೆ ಈ ವ್ಯವಹಾರದಿಂದಕೈಗೂಡಿದೆ. ಎಲ್ಲದಕ್ಕೂ ಭದ್ರ ಬುನಾದಿ ಮಾತ್ರ ಮಹಿಳಾ ಮಾರುಕಟ್ಟೆ. ಕರಾವಳಿಯಮೂಲೆಯೊಂದರಲ್ಲಿ ಇದ್ದುಕೊಂಡು ಏನೋ ಮಾಡಹೊರಟ ನನಗೆ ಈ ಮಾರುಕಟ್ಟೆ ಇಷ್ಟು ಬೇಗಇಷ್ಟೆಲ್ಲ ಕೊಟ್ಟಿàತೆಂಬ ಸುಳಿವು ಸಹ ಇರಲಿಲ್ಲ. ಜೀವನದಲ್ಲಿ ನಾನೆಂದಾದರೂ ವಿಮಾನ ಹತ್ತುವೆನೋ ಇಲ್ಲವೋ ಖಾತ್ರಿಯಿಲ್ಲ. ನನ್ನ ಪ್ರಾಡಕ್ಟು ಆಗಲೇ ವಿದೇಶದ ಅಂಗಳ ತಲುಪಿದೆ. ಮೊದಲ ಅಂತಾರಾಷ್ಟ್ರೀಯ ಪಾರ್ಸಲ್ ಇಲ್ಲಿಂದ ಅಲ್ಲಿಗೆ ತಲುಪುವಾಗ ನಾನೇ ಮೊದಲ ಬಾರಿಗೆ ವಿದೇಶ ಪ್ರವಾಸ ಮಾಡಿದಷ್ಟು ಪುಳಕ ಗೊಂಡಿದ್ದೇನೆ. ಸದಾ ನನ್ನ ಕೆಲಸಗಳಿಗೆ ಹೆಗಲಾಗುವ ನನ್ನ ಯಜಮಾನರಾದ ರಾಮಕೃಷ್ಣ ಹೆಗ್ಡೆಯವರ ಸಹಕಾರ ನನ್ನ ಅತಿದೊಡ್ಡ ಶಕ್ತಿ. Fssai ಸಿಕ್ಕ ತಕ್ಷಣ ನನ್ನ ಉತ್ಪನ್ನಕ್ಕೊಂದು ಚಂದದ ಹೆಸರಿಟ್ಟು ಅದನ್ನು ಮಾರುಕಟ್ಟೆಗೆ ಪರಿಚಯಿಸಬೇಕೆಂಬುದು ನನ್ನ ಸದ್ಯದ ಹಂಬಲ ಅನ್ನುತ್ತಾರೆ ಆಶಾ ಹೆಗ್ಡೆ.
ಮಹಿಳಾ ಮಾರುಕಟ್ಟೆ ಗುರಿ ತೋರುವ ದೀವಟಿಗೆ :
ಹೆಚ್ಚು ಓದಿಲ್ಲ, ಇಂಗ್ಲಿಷ್ ಮಾತನಾಡಲುಬರೋದಿಲ್ಲ ಅಂತ ಕೀಳರಿಮೆಯಲ್ಲಿನರಳ್ಳೋ ಎಷ್ಟೋ ಹೆಣ್ಣುಮಕ್ಕಳಿಗೆ ಮಹಿಳಾ ಮಾರುಕಟ್ಟೆ ಒಂದು ಬದುಕಿನ ಗುರಿ ತೋರುವ ದೀವಟಿಗೆಯ ಬೆಳಕಾಗಿದೆ. ಕೈಯಲ್ಲೊಂದು ಮೊಬೈಲಿದ್ದರೆ ಅದರಿಂದ ಎಷ್ಟೆಲ್ಲ ಕಲಿಯಬಹುದು. ವಿದೇಶದ ಅಂಗಳದ ತನಕ ತಲುಪಬಹುದು ಎಂಬುದಕ್ಕೆ ನನಗಿಂತ ಹೆಚ್ಚಿನ ನಿದರ್ಶನ ಇನ್ನೇನುಕೊಡಲಿ? ಮಹಿಳಾ ಮಾರುಕಟ್ಟೆಯ ಅಡ್ಮಿನ್‌ಗಳು ನನ್ನ ಯಶಸ್ಸಿನ ಹಿಂದಿದ್ದಾರೆ. ಅವರ ನೆರವನ್ನು, ಪೋ›ತ್ಸಾಹವನ್ನು ಹೃತ್ಪೂರ್ವಕವಾಗಿ ಸ್ಮರಿಸುತ್ತೇನೆ.
– ರೋಹಿಣಿ ರಾಮ್ ಶಶಿಧರ್