Advertisement

Udupi: ಬಡವರ ಅನುಕೂಲಕ್ಕೆ ಇರುವ ಗ್ಯಾರಂಟಿ ಯೋಜನೆ ನಿಲ್ಲದು: ಸಚಿವ ಪರಮೇಶ್ವರ್

09:50 AM Jun 07, 2024 | Team Udayavani |

ಉಡುಪಿ: ಬಡವರ ಅನುಕೂಲಕ್ಕೆ ಇರುವ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ನಗರ ಪ್ರದೇಶದ ಜನರಿಗೆ ಇದರ ಅಗತ್ಯ ಇರದಿದ್ದರೂ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಗೆ ಇದು ಬೇಕು. ಬಡತನ ನಿರ್ಮೂಲನೆಗಾಗಿ ಗ್ಯಾರಂಟಿ ಜಾರಿಗೊಳಿಸಿರುವುದಾಗಿ ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ಹೇಳಿದರು.

Advertisement

ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣ ದಲ್ಲಿ ಗುರುವಾರ ಮಾಧ್ಯಮ ದವರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಬಹಳಷ್ಟು ಕಡೆ ನಾವು ಸೋತಿದ್ದೇವೆ. ಈ ಸೋಲಿನ ವಿಶ್ಲೇಷಣೆ, ಆತ್ಮವಲೋಕನ ಮಾಡು ನಿಟ್ಟಿನಲ್ಲಿ ಹಿರಿಯರ ನೇತೃತ್ವದಲ್ಲಿ ಸಮಿತಿ ರಚಿಸಲು ನಿರ್ಧರಿಸಿದ್ದೇವೆ. ಗ್ಯಾರಂಟಿ ಯೋಜನೆಗಳು ಎಷ್ಟು ಪ್ರಭಾವ ಬೀರಿದೆ ಎಂಬುದನ್ನು ಚರ್ಚಿಸಲಾಗುವುದು. ರಾಜಕೀಯಕ್ಕೆ ಸಂಬಂಧಿಸಿದ ತೀರ್ಮಾನವನ್ನು ಕೆಪಿಸಿಸಿ ಅಧ್ಯಕ್ಷರು ಹಾಗೂ ಸಂಪುಟ ಪುನಾರಚನೆ ನಿರ್ಧಾರವನ್ನು ಮುಖ್ಯ ಮಂತ್ರಿಯವರು ಕೈಗೊಳ್ಳುವರು. ಆ ಬಗ್ಗೆ ನನ್ನಲ್ಲಿ ಮಾಹಿತಿ ಇಲ್ಲ ಎಂದರು.

ಸುರ್ಜೆವಾಲ್‌ ರಾಜ್ಯ ಉಸ್ತುವಾರಿ ಯಾಗಿರುವುದರಿಂದ ಸಹಜವಾಗಿಯೇ ಸೋಲಿಗೆ ಕಾರಣ ಕೇಳಿರಬಹುದು. ಆದರೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ ಮತಗಳಿಕೆ ಪ್ರಮಾಣ ಏರಿಕೆಯಾಗಿದೆ. ಬಿಜೆಪಿಯದ್ದು ಸುಮಾರು 60 ಸೀಟು ಕಡಿಮೆಯಾಗಿದೆ. ನಾವು 1 ಸೀಟಿನಿಂದ 9 ಸೀಟು ಗಳಿಸಿದ್ದೇವೆ. ಆದರೂ ಸೋಲಿಗೆ ಕಾರಣವಾದ ಅಂಶಗಳ ಬಗ್ಗೆ ಆತ್ಮಾವಲೋಕನ ಮಾಡಿ ಕೊಳ್ಳಲಿದ್ದೇವೆ ಎಂದು ಹೇಳಿದರು.

ಪಕ್ಷ ಸಂಘಟನೆ ಅಗತ್ಯ
ಕರಾವಳಿಯಲ್ಲೂ ಪಕ್ಷ ಸಂಘ ಟನೆಯ ಕಾರ್ಯ ಆಗಬೇಕಿದೆ. ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿನ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊ ಳ್ಳುತ್ತೇವೆ. ರಾಜಕೀಯ ವ್ಯವಸ್ಥೆ ಬೇರೆ, ಆಡಳಿತಾತ್ಮಕ ವ್ಯವಸ್ಥೆ ಬೇರೆ. ರಾಜಕೀಯ ವ್ಯವಸ್ಥೆಯಲ್ಲಿ ಉಸ್ತುವಾರಿ ಸಚಿವರು ಬರುವುದಿಲ್ಲ. ಹೀಗಾಗಿ ಉಡುಪಿಯ ಸೋಲಿಗೂ ಉಸ್ತುವಾರಿ ಸಚಿವರಿಗೂ ಸಂಬಂಧವಿಲ್ಲ ಎಂದರು.

ಅಧಿಕೃತ ದೂರು ಬಂದಿಲ್ಲ
ವಾಲ್ಮೀಕಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಗೆ ನಾವು ಎಸ್‌ಐಟಿ ರಚಿಸಿದ್ದೇವೆ. ಬ್ಯಾಂಕ್‌ ವಂಚನೆ ಪ್ರಕರಣ ಆಗಿದ್ದ ರಿಂದ ಸಿಬಿಐ ಕೂಡ ತನಿಖೆ ನಡೆ ಸುತ್ತಿದೆ. ಭೋವಿ ನಿಗಮದಲ್ಲಿ ಭ್ರಷ್ಟಾಚಾರ ಆಗಿರುವ ಬಗ್ಗೆ ಗೂಳಿಹಟ್ಟಿ ಚಂದ್ರಶೇಖರ್‌ ದೂರು ನೀಡಲಿ ಅದ ರಂತೆ ತನಿಖೆ ನಡೆಸುತ್ತೇವೆ ಎಂದರು.

Advertisement

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿದೆ. ಯಾವುದೇ ಸಂಘ ರ್ಷ ಆಗಿಲ್ಲ. ಎಲ್ಲ ಉತ್ಸವಗಳು ಶಾಂತಿಯು ತವಾಗಿ ನಡೆದಿವೆ. ಬಿಜೆಪಿ ಸರಕಾರ ಇದ್ದಾಗ ಅಪರಾಧ ಎಷ್ಟಾಗಿದೆ ಎಂಬ ಮಾಹಿತಿಯೂ ಇದೆ. ನಮ್ಮ ಬಳಿಯಿದೆ. ಕಾನೂನು ಸುವ್ಯವಸ್ಥೆ ಹೇಗೆ ಹಾಳಾಗಿದೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next