ತೀರ್ಥಹಳ್ಳಿ: ಮಲೆನಾಡಲ್ಲಿ ದೀಪಾವಳಿ ಸಂಭ್ರಮ ಮಳೆ ನಡುವೆಯೂ ಕಳೆಗಟ್ಟಿದೆ. ಗೋ ಪೂಜೆ ಸಂಭ್ರಮದಲ್ಲಿ ಜನ ಕಳೆದಿದ್ದು ಮನೆ ಮನೆಯಲ್ಲೂ ಗೋಪೂಜೆ, ದೀಪಾವಳಿ ಸಡಗರ ಕಂಡು ಬಂದಿತು.
ಒಂಬತ್ತು ಬಗೆಯ ಬಾಳೆಹಣ್ಣು, ಪಚ್ಚೆ ತನೆ, ಹಣ್ಣು ಅಡಿಕೆ, ಕಿತ್ತಳೆ ಎಲೆ, ಬಿದಿರಿನ ಎಲೆ, ವೀಳ್ಯದೆಲೆ,ಚಂಡೂಹೂವು,ಎಲಕ್ಕಿಕರೆ,ಚಪ್ಪೆರೊಟ್ಟಿ,ಇದರನ್ನೊಳಗೊಂಡ ಗೊಮಾಲೆಮಾಡಿ ಜೊತೆಗೆ ಹೂವಿನ ಅಲಂಕಾರದಲ್ಲಿ ಹಂಡ ಹೊಂಡ ಹಾಕಿದ ಗೋವುಗಳು ತಾಲೂಕಿನ ಎಲ್ಲೆಡೆ ಚಂದದಿಂದ ಕಾಣುತ್ತಿದ್ದವು.ಮಳೆಯ ಕಾರಣ ಈ ಬಾರಿ ಎಲ್ಲಿಯೂ ಭಾರೀ ಸಂಭ್ರಮ ಕಾಣಲಿಲ್ಲ.
ಗೋ ಪೂಜೆ ಸಂಭ್ರಮದಲ್ಲಿ ಗೃಹಸಚಿವ ಆರಗ- ಗೋಪೂಜೆ ಪ್ರಯುಕ್ತ ಮಾಲೆ, ಹೂವಿನ ಅಲಂಕಾರದಲ್ಲಿ ಗೋವುಗಳು ಚಂದದಿಂದ ಕಾಣುತ್ತಿದ್ದವು. ಗೃಹಸಚಿವ ಆರಗ ಜ್ಞಾನೇಂದ್ರ ಅವರು ಮನೆಯಲ್ಲಿ ಸಂಭ್ರಮದಿಂದ ಗೋ ಪೂಜೆ ಆಚರಿಸಲಾಯಿತು.
ಇದನ್ನೂ ಓದಿ:- ದುಬೈನಲ್ಲಿ ಟೀಂ ಇಂಡಿಯಾ ದೀಪಾವಳಿ: ಸ್ಕಾಟ್ಲೆಂಡ್ ವಿರುದ್ಧ ಭರ್ಜರಿ ಜಯ
ಈ ಸಂಭ್ರಮದಲ್ಲಿ ಕುಟುಂಬಸ್ಥರು ಭಾಗಿಯಾಗಿದ್ದರು. ಗೋವುಗಳ ರಕ್ಷಣೆಗಾಗಿಯೇ ಗೋಶಾಲೆ ನಿರ್ಮಿಸಿದ ಪುಣ್ಯಕೋಟಿ ನಾಗರಾಜ್- ಮೇಲಿನ ಕುರುವಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಹೊರಬೈಲಿನಲ್ಲಿ ಗೋವುಗಳ ರಕ್ಷಣೆಗಾಗಿ 15 ವರ್ಷಗಳ ಹಿಂದೆ ತಮ್ಮ ಮನೆಯ ಸಮೀಪವೇ ಸ್ವಲ್ಪ ಜಾಗದಲ್ಲಿ ಅಚ್ಚು ಕಟ್ಟಾಗಿ ಪುಣ್ಯಕೋಟಿ ಎಂಬ ಗೋಶಾಲೆ ಒಂದನ್ನು ನಿರ್ಮಿಸಿ ಬಗೆ ಬಗೆಯ ಜಾನುವಾರುಗಳನ್ನು ಸಾಕುತ್ತಿರುವ ಇವರಿಗೆ ಪಟ್ಟಣದಲ್ಲಿ ದೊಡ್ಡದಾದ ಗೋಶಾಲೆ ನಿರ್ಮಿಸಬೇಕೆಂಬ ಬಯಕೆ ಕೂಡ ಇವರದ್ದಾಗಿದೆ.
ಗೋ ಪೂಜೆಯ ಅಂಗವಾಗಿ ಗೋವುಗಳ ಪೂಜೆಯನ್ನು ಕಾಶಿ ಶೇಷಾದ್ರಿ ದೀಕ್ಷಿತ್ ಇವರ ಪೊರೊಹಿತ್ವದಲ್ಲಿವಿಶೇಷ ರೀತಿಯಲ್ಲಿ ನೆಡೆಸಿದ್ದು ಅದರಲ್ಲಿಯೂ ವಿಶೇಷವಾಗಿ ಸುತ್ತಲೂ ರುದ್ರಾಕ್ಷಿ ಅಲಂಕಾರ ಮಾಡಲಾಗಿ ಆ ವಾತಾವರಣ ಮದುವಣಗಿತ್ತಿಯಂತೆ ಕಂಡು ಬರುತ್ತಿತ್ತು.