Advertisement
ಅವರು ಕುಂದಾಪುರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ವೃಥಾರೋಪಗಳಿಂದ ರಾಜಕೀಯ ಲಾಭ ಪಡೆಯುವ ಉದ್ದೇಶವಲ್ಲದೆ, ನೈಜ ಆರೋಪಿ ಗಳಿಗೆ ಶಿಕ್ಷೆಯಾಗಬೇಕು ಎನ್ನುವ ಯಾವುದೆ ಕಾಳಜಿ ಕಾಣಿಸುತ್ತಿಲ್ಲ. ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಎಲ್ಲ ಆಯಾಮಗಳಲ್ಲಿಯೂ ತನಿಖೆ ನಡೆಯುತ್ತಿದೆ. ಈ ವೇಳೆಯಲ್ಲಿ ಸರಕಾರದ ಬೇರೆ ಇಲಾಖೆಯ ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ಯಾವುದಾದರೂ ಅಕ್ರಮಗಳು ಬೆಳಕಿಗೆ ಬಂದರೂ ಅದರ ವಿರುದ್ಧವೂ ವಿಸ್ತೃತ ತನಿಖೆ ನಡೆಸಲಾಗುವುದು.
ಶಾಂತಿ ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಗಂಗೊಳ್ಳಿಯಲ್ಲಿ ಮುತಾಲಿಕ್ ಕಾರ್ಯಕ್ರಮವನ್ನು ಪೊಲೀಸರು ನಿರ್ಬಂಧಿಸಿದ್ದಾರೆ. ಸರಕಾರ ಉದ್ದೇಶ ಪೂರ್ವಕ ನಿರ್ಬಂಧಿಸಿಲ್ಲ. ಈ ಆರೋಪದಲ್ಲಿ ಹುರುಳಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
Related Articles
ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅಧಿಕಾರಕ್ಕೆ ಬರುವ ಮುಂಚೆ ರೌಡಿ ಆಡಳಿತ ಜಾರಿಯಲ್ಲಿತ್ತು ಹಾಗೂ ಅದನ್ನು ಮಟ್ಟ ಹಾಕುವ ಸಲುವಾಗಿ ಬುಲ್ಡೋಜರ್ ಕ್ರಮ ಅನಿವಾರ್ಯವಾಗಿತ್ತು. ಆದರೆ ಕರ್ನಾಟಕದಲ್ಲಿ ಸದ್ಯ ಆ ರೀತಿಯ ಪರಿಸ್ಥಿತಿ ಇಲ್ಲ ಎಂದು ತಿಳಿಸಿದರು.
Advertisement
ಗೃಹ ಸಚಿವರ ಬದಲಾವಣೆ ಊಹಾಪೋಹಕೋಟ: ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆಯಾಗಲಿದೆ. ಗೃಹ ಸಚಿವರ ಬದಲಾವಣೆಯಾಗಲಿದೆ ಎನ್ನುವುದು ಕೇವಲ ಊಹಾಪೋಹ. ಗೃಹ ಇಲಾಖೆ ಸುಸ್ಥಿತಿಯಲ್ಲಿದ್ದು ಉತ್ತಮ ಕೆಲಸಗಳನ್ನು ನಿರ್ವಹಿಸುತ್ತಿದೆ. ಆದ್ದರಿಂದ ಸದ್ಯ ಯಾವುದೇ ಬದಲಾವಣೆ ಇಲ್ಲ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ವಿಶ್ವಾಸ ವ್ಯಕ್ತಪಡಿಸಿದರು. ಅವರು ಶನಿವಾರ ಸಾಲಿಗ್ರಾಮ ಗುರುನರಸಿಂಹ ದೇಗುಲಕ್ಕೆ ಭೇಟಿ ನೀಡಿದ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿದರು. ಕೃಷಿ ಸಚಿವ ಬಿ.ಸಿ. ಪಾಟೀಲ್ ಗೃಹ ಇಲಾಖೆ ಕೊಟ್ಟರೆ ನಿಭಾಯಿಸುವೆ ಎಂದಿರುವುದು ಕಾಕತಾಳೀಯ. ಗೃಹಸಚಿವರನ್ನು ಬದಲಿಸುವ ಸಲುವಾಗಿ ಈ ಮಾತು ಹೇಳಿಲ್ಲ ಎಂದರು.