Advertisement

ಮಕ್ಕಳ ಮನಸ್ಸಿನಲ್ಲಿ ಮತಾಂಧದ ವಿಷ ಬೀಜ ಬಿತ್ತುವವರನ್ನು ಸುಮ್ಮನೆ ಬಿಡಲ್ಲ:ಗೃಹ ಸಚಿವ ಎಚ್ಚರಿಕೆ

12:07 PM Feb 19, 2022 | Team Udayavani |

ಕಲಬುರಗಿ : ಮಕ್ಕಳ ಮನಸ್ಸಿನಲ್ಲಿ ಮತಾಂಧ ವಿಷ ಬೀಜ ಬಿತ್ತುವವರವರನ್ನು ಹಾಗೆ ಬಿಡಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಖಡಕ್ ಎಚ್ಚರಿಕೆ ಸಂದೇಶವನ್ನು ನೀಡಿದ್ದಾರೆ.

Advertisement

ನಗರದ ಪೊಲೀಸ್ ತರಬೇತಿ ಮಹಾವಿದ್ಯಾಲಯದಲ್ಲಿ ಪಿಎಸ್ಐ ಸೇರಿ ವಿವಿಧ ಪೊಲೀಸ್ ಅಧಿಕಾರಿಗಳ ನಿರ್ಗಮನ ಪಂಥಸಂಚಲನ ಪರಿವೀಕ್ಷಣೆ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ರಾಜ್ಯದ ಕೆಲವೆಡೆ ಮಾತ್ರವೇ ಹಿಜಾಬ್ ಸಂಬಂಧ ಗಲಾಟೆ ಉಂಟಾಗುತ್ತಿದೆ. ಇದರ ಹಿಂದೆ ಮತಾಂಧ ಶಕ್ತಿಗಳು ಸೇರಿಕೊಂಡಿವೆ. ಇಂತಹ ಶಕ್ತಿಗಳಿಗೆ ಎಚ್ಚರಿಕೆ ಕೊಡುವ ಕೆಲಸ ಮಾಡಲಾಗುತ್ತದೆ ಎಂದರು.

ಹಿಜಾಬ್ ವಿವಾದ ಕುರಿತ ತನಿಖೆ ನಿಟ್ಟಿನಲ್ಲಿ ಕೆಲ ಅಲ್ಪಸಂಖ್ಯಾತ ಶಾಸಕರು ನನ್ನನ್ನು ಭೇಟಿ ಮಾಡಿ ಮನವಿ ನೀಡಿದ್ದಾರೆ. ಈ ಸ್ಥಿತಿಯಿಂದ ನಮ್ಮ ಮಕ್ಕಳನ್ನು ಹೊರತರಬೇಕಿದೆ. ಸಮವಸ್ತ್ರ ಅಂದರೆ ಅದು ಸಮಾನತೆ, ಶಾಲೆಗಳು ಅಂದರೆ ಸಂಸ್ಕಾರ ತುಂಬುವ ಕೇಂದ್ರಗಳು. ಹೀಗಾಗಿ ನಮ್ಮ ಧರ್ಮ, ಜಾತಿ ಬೇರೆ -ಬೇರೆ ಎಂಬುದು ತೋರಿಸುವುದು ಆಗಬಾರದು ಎಂದರು.

ವಿವಾದ ಹೆಚ್ಚಾದ ಕಾಲೇಜುಗಳ ಸುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಅದನ್ನು ಮೀರಿ ಶಾಂತಿ ಭಂಗ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಅತಿರೇಕಕ್ಕೆ ಹೋದರೆ ಸುಮ್ಮನಿರಲು ಆಗಲ್ಲ. ಮಕ್ಕಳ ಮನಸ್ಸಿನಲ್ಲಿ ಮತಾಂಧ ವಿಷ ಬೀಜ ಬಿತ್ತುವವರವರನ್ನು ಹಾಗೆ ಬಿಡಲ್ಲ ಎಂದು ಎಚ್ಚರಿಸಿದರು.

Advertisement

ಇದನ್ನೂ ಓದಿ :

ಹಿಜಾಬ್ ವಿವಾದಕ್ಕೆ ಅಂತ್ಯ ಹಾಡಲು ಸರ್ಕಾರ ಎಲ್ಲ ರೀತಿಯ ಕ್ರಮ ವಹಿಸುತ್ತಿದೆ. ಇದಕ್ಕಾಗಿ ನ್ಯಾಯಾಲಯದ ಮಧ್ಯಂತರ ಆದೇಶವನ್ನು ಪಾಲಿಸುತ್ತಿದ್ದೇವೆ.
ಅಂತಿಮ ತೀರ್ಪಿಗಾಗಿ ಕಾಯುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಪಿಎಫ್ಐನಂತಹ ಸಂಘಟನೆಗಳ ನಿಷೇಧ ವಿಚಾರ ಕುರಿತಾಗಿ ಪ್ರಕ್ರಿಯಿಸಿದ ಗೃಹ ಸಚಿವ, ಇಂತಹ ಸಂಘಟನೆಗಳನ್ನು ನಿರ್ಜೀವ ಮಾಡಲು ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದರು.

ಕಾಂಗ್ರೆಸ್ ಗೆ ಹುಲ್ಲು ಕಡ್ಡಿ ಆಸರೆ: ಕಾಂಗ್ರೆಸ್ ಮುಳುಗುವ ಪಕ್ಷ. ಹೀಗಾಗಿ ಅಭಿವೃದ್ಧಿ ವಿಚಾರದ ಬಗ್ಗೆ ಚರ್ಚಿಸುವುದು ಮರೆತು ಈಶ್ವರಪ್ಪನವರ ಹೇಳಿಕೆಯನ್ನು ಮುಂದಿಟ್ಟುಕೊಂಡು ಹುಲ್ಲು ಕಡ್ಡಿ ಆಸರೆ ಪಡೆಯಲು ಪ್ರಯತ್ನಿಸುತ್ತಿದೆ ಎಂದು ಆರಗ ಜ್ಞಾನೇಂದ್ರ ಲೇವಡಿ ಮಾಡಿದರು.

ಈಶ್ವರಪ್ಪನವರು ಎಲ್ಲೂ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುವ ಹೇಳಿಕೆ ಕೊಟ್ಟಿಲ್ಲ. ಸದನದಲ್ಲಿ
ಕಾಂಗ್ರೆಸ್ ಪ್ರತಿಭಟನೆ ಬರೀ ಬೋಗಸ್ ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next