Advertisement

ಶಿವಮೊಗ್ಗ ಪರಿಸ್ಥಿತಿ ವಿಚಾರವಾಗಿ ಸಿಎಂ ಬೊಮ್ಮಾಯಿ ಭೇಟಿ ಮಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ

09:37 AM Feb 24, 2022 | Team Udayavani |

ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ಪರಿಸ್ಥಿತಿ ವಿಚಾರವಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.

Advertisement

ಆರ್ ಟಿ ನಗರದ ನಿವಾಸದಲ್ಲಿ ಸಿಎಂ ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಆರಗ ಜ್ಞಾನೇಂದ್ರ, “ಇಂದು ಶಿವಮೊಗ್ಗಕ್ಕೆ ಹೋಗುತ್ತಿದ್ದೇನೆ. ಸಿಎಂ ಬೊಮ್ಮಾಯಿ ಜೊತೆಗೆ ಸುಮಾರು ಒಂದು ಗಂಟೆಗಳ ಕಾಲ ಚರ್ಚೆ ಮಾಡಿದ್ದೇನೆ. ಶಿವಮೊಗ್ಗದಲ್ಲಿ ಸದ್ಯ ಪರಿಸ್ಥಿತಿ ಹೇಗೆ ವಿವರಿಸಲಾಗಿದೆ” ಎಂದರು.

ಇದನ್ನೂ ಓದಿ:ಮತ್ತೆ ಬದಲಾಯ್ತು ಬೇಸಿಗೆ ರಜೆ; ಬೇಗನೇ ಶಾಲೆ ಆರಂಭಿಸಲು ಸರ್ಕಾರದ ನಿರ್ಧಾರ: ಎಂದಿನಿಂದ ಆರಂಭ?

ಈ ಬಜೆಟ್ ನಲ್ಲಿ ಪೊಲೀಸ್ ಇಲಾಖೆ ಕುರಿತಾಗಿ ಸಿಎಂ ಜೊತೆ ಚರ್ಚೆ ಮಾಡಿದ್ದೇನೆ. ಹೊಸದಾಗಿ ಎಫ್ಎಸ್ಎಲ್, ಕಾರಾಗೃಹ, ಗೃಹಗಳ ಬಗ್ಗೆ ಚರ್ಚೆ ನಡೆಸಿ, ಇವುಗಳಿಗೆ ಹಣಕಾಸು ಬಿಡುಗಡೆ ಮನವಿ ಮಾಡಿದ್ದೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next