Advertisement
ಅಲ್ಲದೇ 200 ಕೋಟಿ ರೂ. ವೆಚ್ಚದಲ್ಲಿ ಈ ವರ್ಷ 100 ಪೊಲೀಸ್ ಠಾಣೆಗಳನ್ನು ಕಟ್ಟಲಾಗುತ್ತಿದೆ. ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯ ಜಾಗದ ವಿವಾದ ಅಂತ್ಯಕ್ಕೆ ಬಂದಿದೆ. ಪೊಲೀಸರ ಭತ್ತೆ ಹಾಗೂ ಗಳಿಕೆ ರಜೆಗಳಲ್ಲಿನ ವ್ಯತ್ಯಾಸದ ಬಗ್ಗೆ ಸಹಾನೂಭೂತಿ ಇದೆ. ಈ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿ ಮತ್ತು ಡಿ ದರ್ಜೆ ನೌಕರರ ವರ್ಗಾವಣೆ ನಿಯಮಗಳು ಪೊಲೀಸ್ ಸೇವೆಗೆ ಸೇರಿಕೊಳ್ಳುವ ಮಾಜಿ ಸೈನಿಕರಿಗೂ ಅನ್ವಯವಾಗುತ್ತವೆ. ಜೆಡಿಎಸ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ವಿಷಯ ಪ್ರಸ್ತಾವಿಸಿ, ಹತ್ತಾರು ವರ್ಷಗಳ ಕಾಲ ಮನೆ, ಕುಟುಂಬದಿಂದ ದೂರ ಇದ್ದು ದೇಶಕ್ಕೆ ಸೇವೆ ಸಲ್ಲಿಸಿ ತಾಯ್ನಾಡಿಗೆ ಬಂದು ಪೊಲೀಸ್ ಸೇವೆಗೆ ಸೇರಿಕೊಳ್ಳುವ ನಿವೃತ್ತ ಸೈನಿಕರಿಗೆ ವರ್ಗಾವಣೆ ಅವಧಿಯನ್ನು 7 ವರ್ಷ ಇದ್ದದ್ದನ್ನು ಸಡಿಲಗೊಳಿಸಿ ಅವರ ತವರು ಜಿಲ್ಲೆಯಲ್ಲಿ ಕೆಲಸ ಮಾಡಲು ಅನುಕೂಲ ಮಾಡಿಕೊಡಬೇಕು. ಕಾನೂನು-ನಿಯಮಗಳಿಗಿಂತ ಇದನ್ನು ಮಾನವೀಯ ನೆಲೆಗಟ್ಟಿನಲ್ಲಿ ಪರಿಗಣಿಸಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ:ನಾವೂ ಹಿಂದೂಗಳೇ, ಭಗವದ್ಗೀತೆ ಬಗ್ಗೆ ಹೊಟ್ಟೆ ಉರಿ ಇಲ್ಲ: ಡಿಕೆಶಿ
Related Articles
ಇದಕ್ಕೆ ಉತ್ತರಿಸಿದ ಗೃಹ ಸಚಿವರು, ಸಿ ಮತ್ತು ಡಿ ದರ್ಜೆ ನೌಕರರ ವರ್ಗಾವಣೆಗೆ ನೇಮಕಾತಿ ಹೊಂದಿದ ದಿನಾಂಕದಿಂದ ಕನಿಷ್ಟ 7 ವರ್ಷಗಳ ಸೇವಾವಧಿ ನಿಗದಿಗೊಳಿಸಲಾಗಿರುತ್ತದೆ. ಆದರೆ, ಪತಿ-ಪತ್ನಿ ಪ್ರಕರಣ, ಎರಡು ವರ್ಷಗಳಲ್ಲಿ ವಯೋನಿವೃತ್ತಿ ಹೊಂದುವ ಪ್ರಕರಣಗಳಲ್ಲಿ 7 ವರ್ಷದಿಂದ ವಿನಾಯಿತಿ ನೀಡಲಾಗಿರುತ್ತದೆ. ಈ ನಿಯಮವು ಪೊಲೀಸ್ ಸೇವೆಗೆ ಸೇರುವ ಮಾಜಿ ಸೈನಿಕರಿಗೂ ಅನ್ವಯವಾಗುತ್ತದೆ ಎಂದರು.
Advertisement
ಜಿಲ್ಲಾಮಟ್ಟದಲ್ಲೇ ನೇಮಕಪೊಲೀಸ್ ನೇಮಕಾತಿಯನ್ನು ಜಿಲ್ಲಾ, ವಲಯ ಮತ್ತು ಕಮಿಷನರೇಟ್ ಮಟ್ಟದಲ್ಲಿ ನಡೆಸಲಾಗುತ್ತದೆ. ಮಾಜಿ ಸೈನಿಕರು ಸಹ ತಮ್ಮ ಸ್ವಂತ ಜಿಲ್ಲೆಗಳಿಗೆ ಅನುಕೂಲವಾಗುವಂತೆ ಅರ್ಜಿ ಸಲ್ಲಿಸಬಹುದು ಎಂದು ಸಚಿವರು ಹೇಳಿದರು.