Advertisement

ದೋವಲ್‌,ಗೃಹಕಾರ್ಯದರ್ಶಿ ಜತೆ ಸಭೆ ನಡೆಸಿದ ಅಮಿತ್‌ ಶಾ

05:24 PM Aug 05, 2019 | Team Udayavani |

ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದ ಪ್ರಸಕ್ತ ವಿದ್ಯಮಾನಗಳ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ರವಿವಾರ ಸಭೆ ನಡೆಸಿದರು. ಸಂಸತ್ತಿನಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿದ್‌ ದೋವಲ್‌, ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್‌ ಗೌಬಾ ಅವರೊಂದಿಗೆ ಈ ಸಭೆ ನಡೆಯಿತು.

Advertisement

ಪಾಕಿಸ್ಥಾನ ಗಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉಗ್ರರನ್ನು ಗಡಿಯೊಳಕ್ಕೆ ನುಗ್ಗಿಸಲು ಯುತ್ನಿಸುತ್ತಿರುವುದು, ಕಾಶ್ಮೀರದಲ್ಲಿ ಕೈಗೊಂಡ ಭದ್ರತೆ ಇತ್ಯಾದಿ ವಿಚಾರಗಳ ಚರ್ಚೆಗೆ ಬಂದಿವೆ ಎನ್ನಲಾಗಿದೆ. ಸಭೆಯ ಕುರಿತ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ. ಇನ್ನು ಸಂಸತ್ತಿನ ಕಲಾಪಕ್ಕೆ ಸಂಪೂರ್ಣ ತೆರೆಬಿದ್ದ ಬಳಿಕ ಮುಂದಿನ ಎರಡು ದಿನಗಳಲ್ಲಿ ಅಮಿತ್‌ ಶಾ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ಖುದ್ದು ಭೇಟಿ ನೀಡಲಿದ್ದಾರೆ ಎಂದು ಹೇಳಲಾಗಿದೆ. ಇದೇ ವೇಳೆ ಅತ್ತ ಕಾಶ್ಮೀರದಲ್ಲಿ ಕೇಂದ್ರ ತ್ವರಿತ ಪ್ರಹಾರ ದಳವನ್ನು ನಿಯೋಜಿಸಲಾಗಿದೆ. ಇದರೊಂದಿಗೆ ಸೋಮವಾರ ಬೆಳಗ್ಗೆ 9.30ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ಕೇಂದ್ರ ಸಂಪುಟ ಸಭೆ ಆಯೋಜಿಸಲಾಗಿದೆ ಎಂದು ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next