Advertisement

ನಿರ್ಬಂಧ ಕೇವಲ ಮನಸ್ಸಿನ ಭ್ರಮೆ :ವಿಪಕ್ಷಗಳ ವಿರುದ್ಧ ಗೃಹ ಸಚಿವ ಅಮಿತ್‌ ಶಾ ಕಿಡಿ

09:57 AM Oct 01, 2019 | Team Udayavani |

ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ನಿರ್ಬಂಧ ವಿಧಿಸಲಾಗಿದೆ ಎಂದು ಆರೋಪಿ ಸುತ್ತಿರುವ ವಿಪಕ್ಷಗಳನ್ನು ಗೃಹ ಸಚಿವ ಅಮಿತ್‌ ಶಾ ತರಾಟೆಗೆ ತೆಗೆದು ಕೊಂಡಿದ್ದಾರೆ. ಹೊಸದಿಲ್ಲಿ ಯಲ್ಲಿ ಆರ್‌ಎಸ್‌ಎಸ್‌ ರವಿವಾರ ಆಯೋಜಿಸಿದ್ದ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು, ನಿರ್ಬಂಧ ಎನ್ನುವುದು ನಿಮ್ಮ ಮನಸ್ಸಿನ ಭಾವನೆ ಎಂದು ಟೀಕಿಸಿದರು.

Advertisement

“ಕಣಿವೆ ರಾಜ್ಯದಲ್ಲಿ ನಿರ್ಬಂಧವೇ ಇಲ್ಲ. ಈ ನಿಟ್ಟಿನಲ್ಲಿ ವಿಪಕ್ಷಗಳು ರಾಜಕೀಯ ಮಾಡುತ್ತಿವೆ. ಮುಂದಿನ 5-7 ವರ್ಷಗಳ ಅವಧಿಯಲ್ಲಿ ಅದೊಂದು ಅತ್ಯಂತ ಹೆಚ್ಚು ಅಭಿವೃದ್ಧಿ ಹೊಂದಿದ ರಾಜ್ಯ ವಾಗಿ ಮಾರ್ಪಾಡಾಗಲಿದೆ. ನಿರ್ಬಂಧ ಇರುವುದು ಕೇವಲ ನಿಮ್ಮ ಮನಸ್ಸಿನಲ್ಲಿ. ಈ ನಿಟ್ಟಿನಲ್ಲಿ ಸುಳ್ಳು ಮಾಹಿತಿ ಹರಡಲಾಗುತ್ತದೆ’ ಎಂದು ಟೀಕಿಸಿದರು. ಇಡೀ ವಿಶ್ವವೇ ಕೇಂದ್ರ ಸರಕಾರದ ನಿರ್ಧಾರವನ್ನು ಸಮರ್ಥಿಸಿ ಕೊಳ್ಳುತ್ತಿದೆ ಎಂದಿದ್ದಾರೆ ಅಮಿತ್‌ ಶಾ.

ಭಾರೀ ತಪ್ಪು: ಕಾಶ್ಮೀರ ವಿಚಾರವನ್ನು ವಿಶ್ವಸಂಸ್ಥೆಯ ವರೆಗೆ ತೆಗೆದುಕೊಂಡು ಹೋಗಿದ್ದ ಮೊದಲ ಪ್ರಧಾನಿ ಜವಾಹರ್‌ಲಾಲ್‌ ನೆಹರೂ ತಪ್ಪು ಹಿಮಾಲಯಕ್ಕಿಂತ ಬೃಹದಾಕಾರದ್ದು. ಆ ತಪ್ಪು ಸರಿಪಡಿಸಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ 370 ವಿಧಿ ರದ್ದು ಮಾಡಿದ ಬಗೆಗಿನ ಇತಿಹಾಸವನ್ನು ಪುನರ್‌ ರಚಿಸಬೇಕಾಗಿದೆ ಎಂದರು. ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಚಾರ ಪ್ರಸ್ತಾವಿಸುವ ಬಗ್ಗೆ ನೆಹರೂ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದರು ಎಂದು ಟೀಕಿಸಿದರು. “ಸರಿಯಾದ ಚರಿತ್ರೆಯನ್ನು ಬರೆಯ ಬೇಕಾದವರೇ ತಪ್ಪು ಹೆಜ್ಜೆ ಇರಿಸಿದ್ದರು. ಅದಕ್ಕಾಗಿಯೇ ಸರಿಯಾದ ಅಂಶವನ್ನು ಜನರಿಂದ ಮರೆ ಮಾಚಲಾಗಿತ್ತು. ಈಗ ಅದನ್ನು ಸರಿಪಡಿಸಿ ನಿಜವಾದ ಇತಿಹಾಸವನ್ನು ಜನರ ಮುಂದೆ ಇರಿಸಬೇಕಾದ ಕಾರ್ಯ ಆಗಬೇಕಾಗಿದೆ’ ಎಂದು ಹೇಳಿದ್ದಾರೆ.

ಒಂದೇ ರಾಜ್ಯ ವಿಲೀನ: ನೆಹರೂ ಜಮ್ಮು ಮತ್ತು ಕಾಶ್ಮೀರವನ್ನು ವಿಲೀನಗೊಳಿಸಿದ್ದರೆ, ದೇಶದ ಮೊದಲ ಗೃಹ ಸಚಿವ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ 630 ಪ್ರಾಂತ್ಯ ಗಳನ್ನು ವಿಲೀನಗೊಳಿಸಿದ್ದರು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next