Advertisement

ಗೃಹ ಸಾಲದ ಮಾಸಿಕ ಕಂತಿನಲ್ಲಿ 2000 ರೂ.ಕಡಿತ!

12:29 PM Mar 24, 2017 | Team Udayavani |

ಹೊಸದಿಲ್ಲಿ: ಸ್ವಂತ ಮನೆ ಹೊಂದುವ ಕನಸು ಕಾಣುತ್ತಿರುವ ಮಧ್ಯಮ ವರ್ಗಕ್ಕೆ ಇದು ಸಿಹಿಸುದ್ದಿ. ಮಧ್ಯಮ ವರ್ಗಕ್ಕೆ ನೆರವಾಗುವ ವಿನೂತನ ಸಾಲ ಆಧಾರಿತ ಸಹಾಯ ಧನ ಯೋಜನೆ ಜನವರಿ 1ರಿಂದ ಅನ್ವಯವಾಗುವಂತೆ ಜಾರಿಗೆ ಬಂದಿದ್ದು, ಯೋಜನೆಯಡಿ ಸಾಲದ ಮಾಸಿಕ ಕಂತಿನಲ್ಲಿ 2000 ರೂ.ಕಡಿಮೆಯಾಗಲಿದೆ.

Advertisement

ಕಳೆದ ವರ್ಷ ಡಿ.31ರಂದು ಮಧ್ಯಮ ವರ್ಗದವರಿಗಾಗಿ ವಿನೂತನ ಸಾಲ ಆಧಾರಿತ ಸಹಾಯಧನ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು. ಅದರಂತೆ, 12 ಲಕ್ಷ ವಾರ್ಷಿಕ ಆದಾಯ ಇರುವವರು ಪಡೆಯುವ 9 ಲಕ್ಷ ರೂ. ಗೃಹಸಾಲದ ಬಡ್ಡಿ ಮೇಲೆ ಶೇ.4ರಷ್ಟು, 18 ಲಕ್ಷ ವಾರ್ಷಿಕ ಆದಾಯ ಹೊಂದಿರುವವರು ಪಡೆಯುವ 12 ಲಕ್ಷ ಗೃಹ ಸಾಲದ ಬಡ್ಡಿ ಮೇಲೆ ಶೇ.3ರಷ್ಟು ಸಹಾಯಧನವನ್ನು ಈ ಯೋಜನೆ ಅಡಿಯಲ್ಲಿ ನೀಡಲಾಗುತ್ತದೆ. ಮಧ್ಯಮ ಪ್ರಮಾಣ ಆದಾಯ ಹೊಂದಿದ ಸಮುದಾಯದ ಫ‌ಲಾನುಭವಿಗಳು ಯೋಜನೆಯಡಿ ಸಾಲ ಮರುಪಾವತಿ ಮಾಡುವಾಗ ಕಂತಿನ ಹೊರೆಯಲ್ಲಿ  2000 ರೂ.ಗಳಷ್ಟು ಕಡಿತವಾಗಲಿದೆ,’ ಎಂದು ರಾಷ್ಟ್ರೀಯ ಗೃಹ ಬ್ಯಾಂಕ್‌ ಸಿಇಒ ಶ್ರೀರಾಮ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next