Advertisement
ಜಿಲ್ಲೆಯ ಸುಬ್ರಹ್ಮಣ್ಯ ಘಟಕದಲ್ಲಿ 6 ಮಂದಿ, ಬಂಟ್ವಾಳ ಘಟಕ-4, ಸುಳ್ಯ ಘಟಕ-2, ಕಡಬ ಘಟಕ-5, ಮಂಗಳೂರು ಘಟಕ -4, ಮೂಲ್ಕಿ ಘಟಕ-15 ಹಾಗೂ ಉಪ್ಪಿನಂಗಡಿ ಘಟಕ- 3 ಮಂದಿಯ ತಂಡದ ನಿರ್ವಹಣೆಗೆ ಪ್ರತಿ ಘಟಕಕ್ಕೂ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಸುರೇಶ್ ಶೇಟ್ ಮತ್ತು ಸನತ್ ಆಳ್ವ (ಮಂಗಳೂರು), ಜಯಂತ ಶೆಟ್ಟಿ ಮತ್ತು ಗಫೂರ್ (ಸುಳ್ಯ) ಮನ್ಸೂರ್ ಅಹಮ್ಮದ್ (ಮೂಲ್ಕಿ), ಗೋಪಾಲ ಎಚ್.ಕೆ. ಮತ್ತು ಕೀತೇìಶ್ (ಕಡಬ), ಶ್ರೀನಿವಾಸ್ ಆಚಾರ್ಯ (ಬಂಟ್ವಾಳ), ರಾಮಣ್ಣ ಆಚಾರ್ಯ (ಉಪ್ಪಿನಂಗಡಿ), ವಿಶ್ವನಾಥ (ಸುಬ್ರಹ್ಮಣ್ಯ) ಇವರು ಆಯಾ ಘಟಕದ ಪ್ರಮುಖರು. ಎಲ್ಲರೂ ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಡಾ| ಮರಳೀ ಮೋಹನ್ ಚೂಂತೂರು ಅವರ ನಿರ್ದೇಶನದಡಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕೇವಲ ಪ್ರಕೃತಿ ವಿಕೋಪದ ಸಮಯದಲ್ಲಿ ಮಾತ್ರ ಈ ಈಜುಗಾರರು ಕಾರ್ಯ ನಿರ್ವಹಿಸುತ್ತಿಲ್ಲ. ಬದಲಾಗಿ ಇತರ ಸಂದರ್ಭಗಳಲ್ಲೂ ನದಿಯ ಸೆಳೆತಕ್ಕೆ ಒಳಗಾದವರನ್ನು ರಕ್ಷಿಸುತ್ತಿದ್ದಾರೆ. ಮೂಲ್ಕಿ ಘಟಕದ ಗೃಹರಕ್ಷಕ ದಳದ ಜಾಕಿರ್, ಸಾದಿ ಕ್, ಹಸನ್, ಜಾವೇದ್, ಮಹಮ್ಮದ್ ವಾಸೀಂ (ಪಣಂಬೂರು ಠಾಣೆಯಲ್ಲಿ ಖಾಯಂ ಕರ್ತವ್ಯ) ಅವರ ಸ್ನೇಹಿತರ ತಂಡವು 13 ವರ್ಷಗಳಿಂದ ಅನೇಕ ಅವಘಡಗಳಲ್ಲಿ ದುಡಿದಿದ್ದಾರೆ. ಬೆಂಗಳೂರಿನ ಮಾಸ್ತಿಗುಡಿ ಸಿನಿಮಾದಲ್ಲಿನ ಸಾಹಸ ಸನ್ನಿವೇಶ ಚಿತ್ರೀಕರಣ ಸಂದರ್ಭದ ದುರಂತ, ಉಡುಪಿ ಭಾಸ್ಕರ ಶೆಟ್ಟಿ ದೇಹದ ಕುರುಹುಗಳ ತಪಾಸಣೆ, ಪುತ್ತೂರಿನ ಪತಿ-ಪತ್ನಿಯರ ಕಳೇಬರ, ಉಳ್ಳಾಲದ ಬಾರ್ಜ್ ದುರಂತವಲ್ಲದೆ, ಈ ಹಿಂದೆ ಶಿವಮೊಗ್ಗ, ಸಾಗರ, ಉಪ್ಪಿನಂಗಡಿ, ಪಣಂಬೂರು ನದಿ ತೀರದಲ್ಲಿ ಹಲವು ದುರಂತಗಳಲ್ಲಿ ಜೀವ ರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದರು.
Related Articles
ಗೃಹರಕ್ಷಕ ದಳದ ಈಜುಗಾರರ ತಂಡದಲ್ಲಿ 5 ಮಂದಿ ಮುಳುಗು ತಜ್ಞರಿದ್ದಾರೆ. ಜತೆಗೆ 10 ಮಂದಿ ಅನು ಭವಿ ಮೀನುಗಾರರೂ ಮೂಲ್ಕಿಯಲ್ಲಿದ್ದಾರೆ. ಇವರೆಲ್ಲ ಅನಿ ವಾರ್ಯ ಸಂದರ್ಭಗಳಲ್ಲಿ ಅಗತ್ಯ ನೆರವು ಒದಗಿಸುವರು. ಫೈಬರ್ ಬೋಟ್‌ನ್ನು ಉಪ್ಪಿನಂಗಡಿ ಮತ್ತು ಬಂಟ್ವಾಳದಲ್ಲಿ ಸಜ್ಜುಗೊಳಿಸಲಾಗಿದೆ. ಈ ಬಾರಿ ಇನಾ#ಟೇಬಲ್ ಬೋಟ್ ಮತ್ತಿತರ ಉಪಕರಣಗಳಿಗೆ ಬೇಡಿಕೆ ಇಟ್ಟಿದ್ದೇವೆ. ಯಾವುದೇ ಸಮಯದಲ್ಲಿ ರಕ್ಷಣಾ ಕಾರ್ಯಪಡೆ ಜಿಲ್ಲೆಯಲ್ಲಿ ಸಿದ್ಧವಾಗಿದೆ.
-ರಮೇಶ್, ಡೆಪ್ಯುಟಿ ಕಮಾಂಡೆಂಟ್, ಗೃಹರಕ್ಷಕ ದಳ
Advertisement
– ನರೇಂದ್ರ ಕೆರೆಕಾಡು