Advertisement

ಕರ್ತವ್ಯನಿಷ್ಠೆಗೆ ಗೃಹರಕ್ಷಕರು ಹೆಸರುವಾಸಿ: ವಸಂತ ಕುಮಾರ್‌ 

02:40 AM Dec 12, 2018 | Team Udayavani |

ಉಡುಪಿ: ಗೃಹರಕ್ಷಕ ದಳದವರು ಕರ್ತವ್ಯನಿಷ್ಠೆಗೆ ಹೆಸರಾದವರು ಎಂದು ಜಿಲ್ಲಾ ಅಗ್ನಿಶಾಮಕಾಧಿಕಾರಿ ವಸಂತಕುಮಾರ್‌ ಬಣ್ಣಿಸಿದರು. ಜಿಲ್ಲಾ ಗೃಹರಕ್ಷಕದಳ ಕಚೇರಿಯಲ್ಲಿ ಮಂಗಳವಾರ ನಡೆದ ಅಖಿಲ ಭಾರತ ಗೃಹರಕ್ಷಕದಳ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಪೊಲೀಸ್‌, ಅಗ್ನಿಶಾಮಕ ಇಲಾಖೆಯಂತೆ ಗೃಹ ರಕ್ಷಕರೂ ಶಿಸ್ತಿನ ಸಿಪಾಯಿಗಳು. ಸರಕಾರದ ಸೌಲಭ್ಯಗಳು ಕೆಲವು ವೇಳೆ ವಿಳಂಬವಾದರೂ ಕರ್ತವ್ಯನಿಷ್ಠೆಯನ್ನು ಗೃಹರಕ್ಷಕರು ಎಂದಿಗೂ ಮರೆಯುವುದಿಲ್ಲ. ಕರ್ತವ್ಯನಿಷ್ಠೆಯನ್ನು ಮುಂದುವರಿಸಿದರೆ ಸೌಲಭ್ಯ ತಾನಾಗಿ ಬರುತ್ತದೆ ಎಂದರು.

Advertisement

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಮಾಂಡೆಂಟ್‌ ಡಾ|ಕೆ.ಪ್ರಶಾಂತ್‌ ಶೆಟ್ಟಿಯವರು ವಾರ್ಷಿಕ ವರದಿ ವಾಚಿಸಿ ಈ ವರ್ಷ 96 ಗೃಹರಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ಮಧ್ಯಪ್ರದೇಶದ ಚುನಾವಣೆಯೂ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಗೃಹರಕ್ಷಕರು ಕರ್ತವ್ಯ ನಿರ್ವಹಿಸಿದ್ದಾರೆಂದರು. ದ.ಕ., ಉಡುಪಿ ಜಿಲ್ಲಾ ಡೆಪ್ಯುಟಿ ಕಮಾಂಡೆಂಟ್‌ ರಮೇಶ್‌ ಸ್ವಾಗತಿಸಿ, ಕಾರ್ಕಳ ಘಟಕಾಧಿಕಾರಿ ಪ್ರಭಾಕರ ಸುವರ್ಣ ಪ್ರತಿಜ್ಞಾ ವಿಧಿ ಬೋಧಿಸಿದರು.

ಡೆಪ್ಯುಟಿ ಕಮಾಂಡೆಂಟ್‌ ರಮೇಶ್‌, ವಿವಿಧ ಘಟಕಗಳ ಅಧಿಕಾರಿಗಳಾದ ಪಡುಬಿದ್ರಿಯ ನವೀನ್‌ಕುಮಾರ್‌, ಕಾಪುವಿನ ಲಕ್ಷ್ಮೀನಾರಾಯಣ ರಾವ್‌, ಬ್ರಹ್ಮಾವರದ ಸ್ಟೀವನ್‌ ಪ್ರಕಾಶ್‌ ಅವರ ವಿಶೇಷ ಸೇವೆಗಾಗಿ ಸಮ್ಮಾನಿಸಲಾಯಿತು. ಸಮ್ಮಾನಿತರ ವಿವರಗಳನ್ನು ಕಚೇರಿ ಅಧೀಕ್ಷಕಿ ಕವಿತಾ ಕೆ.ಸಿ. ವಾಚಿಸಿದರು. ಬ್ರಹ್ಮಾವರದ ಘಟಕಾಧಿಕಾರಿ ಮಂಜುನಾಥ ಶೆಟ್ಟಿಗಾರ್‌ ವಂದಿಸಿದರು. ಹೈಟೆಕ್‌ ಪ್ಯಾರಾ ಮೆಡಿಕಲ್‌ ಕಾಲೇಜಿನ ವ್ಯವಸ್ಥಾಪಕ ಸಾಯಿನಾಥ್‌ ಉದ್ಯಾವರ ಕಾರ್ಯಕ್ರಮ ನಿರ್ವಹಿಸಿದರು.

ಸರ್ವ ಇಲಾಖಾ ಕಾರ್ಯತತ್ಪರರು
ಅಗ್ನಿಶಾಮಕ ಇಲಾಖೆಯವರಿಗೆ ಬೆಂಕಿ ಜತೆ ಸೆಣೆಸಾಡುವ ಕೆಲ ಗೊತ್ತಿರುತ್ತದೆ ವಿನಾ ಕಾನೂನು ಸುವ್ಯವಸ್ಥೆ ಗೊತ್ತಿರುವುದಿಲ್ಲ. ಪೊಲೀಸ್‌ ಇಲಾಖೆಗೆ ಕಾನೂನು ಸುವ್ಯವಸ್ಥೆ ಗೊತ್ತಿರುತ್ತದೆ ವಿನಾ ಬೆಂಕಿ ಜತೆ ಸೆಣೆಸಾಡುವ ಕೆಲಸ ಗೊತ್ತಿರುವುದಿಲ್ಲ. ಆದರೆ ಗೃಹರಕ್ಷಕರು ಯಾವುದೇ ಇಲಾಖೆ ಜತೆ ಸೇರಿದಾಗಲೂ ಆ ಕಲೆಯನ್ನು ಕರಗತ ಮಾಡಿಕೊಂಡು ಕರ್ತವ್ಯ ನಿರ್ವಹಿಸುತ್ತಾರೆ ಮತ್ತು ಇತರ ಇಲಾಖೆಗಳ ಕೆಲಸ ನಿರ್ವಹಣೆಗೆ ಉತ್ತೇಜಕರಾಗಿರುತ್ತಾರೆ. ಮುಂಬೈಯಲ್ಲಿ ಭಯೋತ್ಪಾದಕರ ದಾಳಿ ನಡೆದಾಗ ಪೊಲೀಸ್‌ ನಿಯಂತ್ರಣ ಕೊಠಡಿಗೆ ಮೊದಲು ಸುದ್ದಿ ರವಾನೆ ಮಾಡಿದವರು ಗೃಹರಕ್ಷಕರು.
– ವಸಂತಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next