Advertisement

ಗೃಹ ರಕ್ಷಕರ ಸೇವೆ ಅನನ್ಯ: ಲಾವಣ್ಯ

04:58 PM Dec 21, 2018 | Team Udayavani |

ಬಳ್ಳಾರಿ: ಗೃಹ ರಕ್ಷಕ ದಳದವರರು ಪೊಲೀಸ್‌ ಇಲಾಖೆಯೊಂದಿಗೆ ಸಹಾಯಕ ಪಡೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಪ್ರಾಮಾಣಿಕತೆ ಮತ್ತು ಕೆಲಸದಲ್ಲಿ ಅವರ ಮೇಲಿರುವ ಶ್ರದ್ಧೆ ಅನನ್ಯವಾದುದು ಎಂದು ಹೆಚ್ಚುವರಿ ಪೊಲೀಸ್‌ ಅಧೀಕ್ಷಕಿ ಬಿ.ಎನ್‌.ಲಾವಣ್ಯ ಹೇಳಿದರು.

Advertisement

ಜಿಲ್ಲಾ ಗೃಹ ರಕ್ಷಕದಳದ ವತಿಯಿಂದ ನಗರದ ಜಿಲ್ಲಾ ಗೃಹರಕ್ಷಕ ದಳದ ಕಚೇರಿ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ಗೃಹರಕ್ಷಕ ದಳದ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗೃಹ ರಕ್ಷಕರ ಸೇವೆ ಸಾರ್ವಜನಿಕರಿಗೆ ಅತಿ ಅವಶ್ಯಕವಾಗಿದೆ. ಅವರು ಚುನಾವಣೆ ಮತ್ತು ಇನ್ನಿತರೆ ತುರ್ತು ಸಂದರ್ಭದಲ್ಲಿ ಬಂದೋಬಸ್ತ್ ಹಾಗೂ ತುರ್ತು ಸಂದರ್ಭಗಳಲ್ಲಿ ನಮ್ಮ ಸಿಬ್ಬಂದಿಗಿಂತಲೂ ಹೆಚ್ಚಿನ ಪ್ರಮಾಣದ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸುತ್ತಾರೆ. ತಮ್ಮ ಆರೋಗ್ಯದ ಕಡೆಯೂ ಹೆಚ್ಚಿನ ಕಾಳಜಿ ವಹಿಸಿ ಮತ್ತು ಆರೋಗ್ಯ ಕಾಪಾಡಿಕೊಳ್ಳಬೇಕೆಂದರು.
 
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟ ಎಂ.ಎ.ಷಕೀಬ್‌, ಶಿಸ್ತು ಮತ್ತು ನಿಯೋಜನೆ ವಿಷಯದಲ್ಲಿ ಬಳ್ಳಾರಿಯ ಗೃಹ ರಕ್ಷಕದಳದ ಘಟಕ ಇಡೀ ರಾಜ್ಯದಲ್ಲಿಯೇ ಮಾದರಿಯಾಗಿದೆ. ಕಳೆದ 6 ವರ್ಷಗಳಿಂದ ನಮ್ಮ ಜಿಲ್ಲೆ ಕ್ರೀಡೆಗಳಲ್ಲಿ ಚಾಂಪಿಯನ್‌ಶಿಪ್‌ ತೆಗೆದುಕೊಂಡು ಬರುತ್ತಿದೆ. ನಮ್ಮ ಗೃಹರಕ್ಷಕರು ಸಲ್ಲಿಸುತ್ತಿರುವ ಸೇವೆ ಅತ್ಯಂತ ಅಮೋಘವಾಗಿದ್ದು, ಅವರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದರು.

ಪ್ರಾದೇಶಿಕ ಅಗ್ನಿಶಾಮಕ ದಳದ ಅಧಿಕಾರಿ ಎಸ್‌.ರವಿಪ್ರಸಾದ್‌, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ ಇದ್ದರು. ಇದಕ್ಕೂ ಮುಂಚೆ ಸ್ಮಾರಕಕ್ಕೆ ಅತಿಥಿಗಳು ಪುಷ್ಪನಮನ ಸಲ್ಲಿಸಿ ನಮಿಸಿದರು. ಸೇವೆಯಲ್ಲಿರುವಾಗಲೇ ಸಾವನ್ನಪ್ಪಿದ 6 ಜನ ಗೃಹ ರಕ್ಷಕರಿಗೆ ಇದೇ ಸಂದರ್ಭದಲ್ಲಿ ನೆನಪಿಸಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಗೃಹರಕ್ಷಕ ದಳದ ಘಟಕಾಧಿಕಾರಿಗಳು, ಗೃಹ ರಕ್ಷಕರು, ನಿವೃತ್ತ ಘಟಕಾಧಿಕಾರಿಗಳು ಮತ್ತು ಸಾರ್ವಜನಿಕರು ಇದ್ದರು. ಎಚ್‌.ತಿಪ್ಪೇಸ್ವಾಮಿ ಸ್ವಾಗತಿಸಿದರು. ಎಸ್‌.ಎಂ.ಗಿರೀಶ್‌ ಪ್ರತಿಜ್ಞಾ ವಿಧಿ ಬೋಧಿಸಿದರು. ಬಿ.ಕೆ.ಬಸವಲಿಂಗ ಗೌರವ ವಂದನೆ ಸಲ್ಲಿಸಿದರು.ಬಿ.ಎನ್‌.ಗೋಪಿನಾಥ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next