Advertisement

ಹಗ್ಗದಿಂದ ಮನೆಯ ಅಲಂಕಾರ

09:58 PM Oct 04, 2019 | mahesh |

ಮನೆಯನ್ನು ಅಂದಗೊಳಿಸುವುದು ಸುಲಭದ ಮಾತಲ್ಲ. ಹಲವರು ವಿಭಿನ್ನ ರೀತಿಯಲ್ಲಿ ಮನೆಯನ್ನು ಸುಂದರವಾಗಿರಿಸಿಕೊಳ್ಳಲು ನೋಡುತ್ತಾರೆ. ಇದೀಗ ಹಲವು ಮನೆಗಳಲ್ಲಿ ರೋಪ್‌ ಟ್ರೆಂಡ್‌ ಮನೆಯ ಅಂದವನ್ನು ಇಮ್ಮಡಿಗೊಳಿಸುತ್ತಿದೆ ಎಂದರೆ ತಪ್ಪಾಗಲಾರದು. ಏನಿದು ರೋಪ್‌ ಟ್ರೇಂಡ್‌ ಎನ್ನುವವರಿಗೆ ಹಗ್ಗಗಳಿಂದ ಸುಲಭವಾಗಿ ಮನೆಯನ್ನು ಅಂದಗೊಳಿಸುವ ಪರಿಯನ್ನು ಬಗೆ ಬಗೆಯಲ್ಲಿ ವಿವರಿಸಬಹುದು.

Advertisement

ಮನೆಯಲ್ಲಿ ಬೇಡ ಎಂದು ಬದಿಗಿಟ್ಟ ಹಗ್ಗಗಳಿರುತ್ತವೆ. ಅವನ್ನು ಬಿಸಾಡಲು ಆಗದೆ ಜಾಗ ತಿನ್ನುತ್ತದೆ ಎಂಬ ಅಳುಕಿರುತ್ತದೆ ಅಂಥವರು ಹಗ್ಗಗಳನ್ನು ಬಳಸಿಕೊಂಡು ಮನೆಯನ್ನು ಸುಂದರವಾಗಿ ಇಟ್ಟುಕೊಳ್ಳಬಹುದು. ಸಾಮಾನ್ಯವಾಗಿ ಒಳಾಂಗಣ ಅಲಂಕಾರಕ್ಕೆ ತಕ್ಕಂತೆ ವಿವಿಧ ಆಯ್ಕೆಗಳನ್ನೊಳಗೊಂಡ ರೋಪ್‌ ಅಲಂಕಾರ ಲಭ್ಯವಿದ್ದು ಮನೆಗಳಲ್ಲಿ ನೀವು ಮಾಡುವುದಲ್ಲದೆ ಅದನ್ನು ಮಾರುಕಟ್ಟೆಗಳಿಂದ ಕೊಂಡು ತಂದು ಮಾಡಬಹುದಾಗಿದೆ. ಅದರಲ್ಲಿ ರೋಪ್‌ ಗೊಂಚಲುಗಳು ಜನರ ಮನಸೂರೆಗೊಂಡಿದ್ದು ಇದನ್ನು ಹಾಲ್‌ ಅಥವಾ ಲಿವಿಂಗ್‌ ರೂಮ್‌ಗಳಲ್ಲಿ ಬಳಸಿಕೊಳ್ಳಬಹದು.

ಈಗ ಅತಿ ಹೆಚ್ಚು ಟ್ರೆಂಡಿಂಗ್‌ ಅಲಂಕಾರಗಳಲ್ಲಿ ಒಂದಾದ ಕನ್ನಡಿಗೆ ಈ ರೋಪ್‌ ಅಲಂಕಾರ ಕಾಲಿಟ್ಟಿದ್ದು, ಅತಿ ಹೆಚ್ಚು ಬೇಡಿಕೆಯಲ್ಲಿದೆ. ಕನ್ನಡಿಗಳ ಸುತ್ತ ಹಗ್ಗಗಳನ್ನು ಸುತ್ತಿ ನೇತು ಹಾಕಬಹುದು, ಅಥವಾ ಕನ್ನಡಿಯ ಮೇಲೆ ಹಗ್ಗದಿಂದ ಅಲಂಕಾರ ಮಾಡಬಹುದು ಹೀಗೆ ಇದನ್ನು ಮನೆಗಳಲ್ಲಿ ಆಯತ, ಚೌಕಾಕೃತಿಯಲ್ಲಿ ವಿನ್ಯಾಸ ಮಾಡಿಕೊಂಡರೆ ಮನೆ ಇನ್ನಷ್ಟು ಸುಂದರವಾಗಿ ಕಾಣಿಸುತ್ತವೆ.

ಮಟ್ಟಿಲುಗಳಿಗೆ ಹಗ್ಗದ ಹ್ಯಾಂಡಲ್‌
ಸಾಮಾನ್ಯವಾಗಿ ಮನೆಗಳಲ್ಲಿ ವಿಭಿನ್ನ ರೀತಿಯ ಮಟ್ಟಿಲುಗಳನ್ನು ಮಾಡುತ್ತಾರೆ ಅದಲ್ಲದೆ ಅದಕ್ಕೆ ಒಪ್ಪುವಂತಹ ಹ್ಯಾಂಡಲ್‌ಗ‌ಳನ್ನು ಮಾಡಿರುತ್ತಾರೆ. ಇದರಿಂದ ಮಟ್ಟಿಲುಗಳು ಚೆಂದವಾಗಿ ಕಾಣುತ್ತದೆ. ಆದರೆ ಈಗ ಇದಕ್ಕೆ ಬದಲಾಗಿ ಕಡಿಮೆ ಖರ್ಚಿನಲ್ಲಿ ಸುಂದರವಾದ ಹೀಡಿಕೆಗಳನ್ನು ಮಾಡಬಹುದಾಗಿದ್ದು ಇದರಿಂದ ಮಟ್ಟಿಲುಗಳು ವಿಭಿನ್ನವಾಗಿ ತೋರುವುದಲ್ಲದೆ ಮೆಟ್ಟಿಲಿನ ಅಂದವನ್ನು ಹೆಚ್ಚಿಸುತ್ತವೆೆ. ಅದಲ್ಲದೆ ಇದಕ್ಕೆ ಹೆಚ್ಚಿನ ಖರ್ಚು ಸಹ ತಗಲುವುದಿಲ್ಲ.

ಇದನ್ನು ಮುಖ್ಯವಾಗಿ ಮನೆಯನ್ನು ವಿಭಾಗಿಸುವುದರಲ್ಲಿ ಬಳಸಲಾಗುತ್ತಿದ್ದು ಇದು ದೊಡ್ಡದಾದ ರೂಮ್‌ಗಳನ್ನು ವಿಭಾಗಿಸುವುದಲ್ಲದೆ ಬೇರೆಯವುಗಳಿಗಿಂತ ಚೆನ್ನಾಗಿ ವಿಭಜಿಸುತ್ತದೆ. ಆದ್ದರಿಂದ ಇದು ಉಸಿರುಗಟ್ಟುವ ಹಾಗೆ ಮಾಡುವುದು ಇಲ್ಲ. ಆದ್ದರಿಂದ ಇದನ್ನು ಹೆಚ್ಚು ಹೆಚ್ಚು ಮನೆಗಳಲ್ಲಿ ಬಳಸುತ್ತಾರೆ. ಅದಲ್ಲದೆ ಮಕ್ಕಳ ಕೋಣೆಗಳನ್ನು ವಿಭಾಗಿಸಲು ಕೂಡ ಇದನ್ನು ಬಳಸಲಾಗುತ್ತದೆ ಇದರಿಂದ ಅವರಿಗೆ ಹೆಚ್ಚಿನ ಸ್ಪೇಸ್‌ ದೊರಕುವುದಲ್ಲದೆ ಕೋಣೆಗಳೂ ಕೂಡ ಸುಂದರವಾಗಿ ಕಾಣುತ್ತವೆ.

Advertisement

ಚೆಂದದ ಕಪಾಟುಗಳು
ಅಡುಗೆ ಕೋಣೆ ಅಥವಾ ಬೆಡ್‌ ರೂಮ್‌ಗಳಲ್ಲಿ ಇದನ್ನು ಬಳಸಲಾಗುತ್ತಿದ್ದು ಇದನ್ನು ಕಪಾಟ್‌ಗಳಾಗಿ ಮಾಡಿ ಅದರಲ್ಲಿ ಬೇಕಾದ ಸಾಮಗ್ರಿಗಳನ್ನು ಇರಿಸಿಕೊಳ್ಳಬಹುದಾಗಿದೆ. ಇದನ್ನು ಮನೆಗಳಲ್ಲಿ ಕೂಡ ಮಾಡಬಹುದಾಗಿದ್ದು ಮರದ ಹಲಗೆಗಳಿಗೆ ಬಳ್ಳಿಯನ್ನು ಜೋಡಿಸಿ ಎರಡು ಅಥವಾ ಮೂರು ಹಲಗೆಗಳನ್ನು ಒಂದರ ಮೇಲೊಂದರಂತೆ ಜೋಡಿಸಿಕೊಳ್ಳಬಹುದು. ಇದು ಕೋಣೆಗಳಿಗೆ ಸುಂದರವಾದ ಲುಕ್‌ ನೀಡುವುದಲ್ಲದೆ ಮನೆಯ ಅಂದವನ್ನು ಹೆಚ್ಚಿಸುತ್ತದೆ. ಹೀಗೆ ಹತ್ತು ಹಲವಾರು ರೀತಿಗಳಲ್ಲಿ ರೋಪ್‌ಗ್ಳನ್ನು ಬಳಸಿಕೊಳ್ಳಲಾಗುತ್ತಿದೆ.

ಇದನ್ನು ಹೊರಾಂಗಣಗಳಲ್ಲಿಯೂ ಕೂಡ ಹಲವು ರೀತಿಯಲ್ಲಿ ಉಪಯೋಗಿಸುತ್ತಿದ್ದಾರೆ. ಪಾರ್ಟಿ ಅಥವಾ ಚಿಕ್ಕ ಚಕ್ಕ ಮನೆಯ ಸಮಾರಂಭಗಳಿಗೆ ಮನೆಯ ಗಾರ್ಡನ್‌ ಇನ್ನಿತರ ಹೊರಗಿನ ಗೋಡೆಗಳಿಗೆ ರೋಪ್‌ಗ್ಳನ್ನು ಬಳಸಿ ಅದಕ್ಕೆ ಲೈಟ್‌ಗಳನ್ನು ಅಳವಡಿಸಿ ಮನೆಯ ಮೆರುಗನ್ನು ಹೆಚ್ಚಿಸುತ್ತಿದ್ದಾರೆ. ಹೀಗೆ ರೋಪ್‌ಗ್ಳನ್ನು ಬಳಸಿಕೊಳ್ಳಲಾಗುತ್ತಿದೆ.

ವಿನೂತನ ರೀತಿಯ ಆಸನಮನೆಯಲ್ಲಿ ವಿವಿಧ ರೀತಿಯ ಚೇರ್‌, ಸ್ಟೂಲ್‌, ಸೋಫಾಗಳಿರುವುದು ಸಾಮಾನ್ಯ. ಆದರೆ ರೋಪ್‌ಗ್ಳಿಂದ ಕುಳಿತುಕೊಳ್ಳಲು ವಿನೂತನ ರೀತಿಯ ಆಸನ ಮಾಡುವುದು ಈಗ ಹೊಸದಾಗಿದೆ. ಕುಳಿತುಕೊಳ್ಳಲೂ ಹಗ್ಗಗಳಿಂದ ಆಸನ ಮಾಡಿಕೊಳ್ಳಬಹುದು ಅಥವಾ ಅದನ್ನು ನಮಗೆ ಬೇಕಾದಂತೆ ಮರದಿಂದ ಮಾಡಿಸಿಕೊಂಡು ಅದಕ್ಕೆ ಬಳ್ಳಿಯಿಂದ ಅಲಂಕರಿಸಲುಬಹುದು ಇದು ಮನೆಯನ್ನು ವಿಶೇಷ ರೀತಿಯಲ್ಲಿ ಬಿಂಬಿಸುವುದಲ್ಲದೆ ಎಲ್ಲ ಮನೆಗಳಿಗಿಂತ ವಿಭಿನ್ನವಾಗಿ ಕಾಣುತ್ತದೆ.

ಹಗ್ಗದಿಂದ ಹೂದಾನಿ
ಮನೆಯಲ್ಲಿ ವಿವಿಧ ರೀತಿಯ ಹೂದಾನಿಗಳಿರುತ್ತವೆ ಅವಕ್ಕೆ ಹಗ್ಗದಿಂದ ಅಲಂಕರಿಸಿ ಅದಕ್ಕೆ ಬಣ್ಣ ಬಣ್ಣದ ಪೇಂಟ್‌ ಕೊಡಬಹುದು ಇಲ್ಲವಾದಲ್ಲಿ ಸಿಂಪಲ್‌ ಆಗಿ ಅದಕ್ಕೆ ಒಂದು ಡಿಸೈನ್‌ ಮಾಡಿಕೊಳ್ಳಬಹುದು. ಇದರಿಂದ ಹೂದಾನಿ ಇನ್ನಷ್ಟು ಚೆಂದವಾಗಿ ಕಾಣುತ್ತದೆ. ಅದಲ್ಲದೆ ಇವುಗಳು ಮನೆಯ ಆಕರ್ಷಕ ಕೇಂದ್ರ ಬಿಂದುವಾಗಿರುತ್ತವೆ.

-  ಪ್ರೀತಿ ಭಟ್‌ ಗುಣವಂತೆ

Advertisement

Udayavani is now on Telegram. Click here to join our channel and stay updated with the latest news.

Next