Advertisement

ಮಳೆಗೆ ಧರೆಗೊರಗಿದ ಮನೆಗಳು

09:43 AM Jul 31, 2019 | Suhan S |

ಹುಬ್ಬಳ್ಳಿ: ಕಳೆದ ಎರಡು ದಿನಗಳಿಂದ ಬಿಟ್ಟು ಬಿಡದೆ ಮಳೆ ಸುರಿಯುತ್ತಿದ್ದು, ನಗರದ ವಿವಿಧೆಡೆ 4 ಮನೆಗಳು ಬಿದ್ದಿರುವುದು ವರದಿಯಾಗಿದೆ. ದೇಸಾಯಿ ಓಣಿಯಲ್ಲಿ ಎರಡು ಮನೆಗಳು ಬಿದ್ದಿರುವ ಘಟನೆ ನಡೆದಿದ್ದರೆ, ಹಳೇ ಹುಬ್ಬಳ್ಳಿ ಆನಂದ ನಗರದಲ್ಲಿ 2 ಮನೆಗಳ ಗೋಡೆಗಳು ಕುಸಿದಿವೆ. ದೇಸಾಯಿ ಓಣಿಯ ಅನಿಲಕುಮಾರ ಬೆಟಗೇರಿ ಎಂಬುವರು ಮನೆ ಬಹುತೇಕ ಕುಸಿದಿದೆ ಹಾಗೂ ಇದೇ ಓಣಿಯ ಕಾಶಿಮಸಾಬ್‌ ಮುಜಾವರ ಎಂಬುವರ ಮನೆ ಭಾಗಶಃ ಕುಸಿದಿದೆ. ಆನಂದ ನಗರದ ರಘು ಹೊನ್ನಳ್ಳಿ ಹಾಗೂ ಬಿಬಿಜಾನ್‌ ನರೇಗಲ್ ಅವರ ಮನೆ ಗೋಡೆ ಕುಸಿದಿವೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಹಶೀಲ್ದಾರ್‌ ಶಶಿಧರ ಮಾಡ್ಯಾಳ ತಿಳಿಸಿದ್ದಾರೆ. ಹುಬ್ಬಳ್ಳಿ ಹೋಬಳಿಯಲ್ಲಿ 20.4 ಮಿಮೀ, ಛಬ್ಬಿ 37.8 ಮಿಮೀ, ಶಿರಗುಪ್ಪಿ 21.4 ಮಿಮೀ ಹಾಗೂ ಬ್ಯಾಹಟ್ಟಿ ಹೋಬಳಿಯಲ್ಲಿ 25.4 ಮಿಮೀ ಮಳೆಯಾಗಿದೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next