Advertisement
ಮನೆಯ ಸೌಂದರ್ಯ ವರ್ಧನೆಗೆ ಕ್ಯಾಂಡಲ್‌ಸ್ಟಾಂಡ್ ಹೆಚ್ಚು ಆವಶ್ಯಕ. ಇತ್ತೀಚಿನ ದಿನಗಳಲ್ಲಿ ಕ್ಯಾಂಡಲ್ ಸ್ಟಾಂಡ್‌ನಲ್ಲಿ ದೀಪ ಉರಿಸಿ ಮನೆ ಮಂದಿ ಊಟ ಮಾಡುವುದು, ಪಾರ್ಟಿ ಮಾಡುವುದೆಲ್ಲ ಸಾಮಾನ್ಯವಾಗಿದೆ. ಹೊಸ ಟ್ರೆಂಡ್ ಆಗಿಯೂ ಇದು ಖ್ಯಾತಿ ಗಳಿಸುತ್ತಿದೆ.
Related Articles
ಮನೆ ಮಂದಿ ಕೂತು ಊಟ ಮಾಡುವ ಸಮಯದಲ್ಲಿ ಹೆಚ್ಚಾಗಿ ಸಾಂಪ್ರದಾಯಿಕ ಕ್ಯಾಂಡಲ್ ಸ್ಟಾಂಡ್ ಗಳನ್ನು ಉಪಯೋಗಿಸಲಾಗುತ್ತದೆ. ಇದನ್ನು ಸಾಂಪ್ರದಾಯಿಕ ಕ್ಯಾಂಡಲ್ ಎಂದು ಕರೆಯುತ್ತಾರೆ. ಕ್ಯಾಂಡಲ್ ಬೆಳಕು ಸುತ್ತಮುತ್ತಲು ಪ್ರಶಾಂತತೆಯನ್ನು ಸೂಚಿಸುತ್ತದೆ. ಆಂದಹಾಗೆ, ಸಾಂಪ್ರದಾಯಿಕ ಕ್ಯಾಂಡಲ್‌ನ್ನು ಸಾಮಾನ್ಯವಾಗಿ ಹಿತ್ತಾಳೆ, ಗಾಜು, ಕ್ರಿಸ್ಟಲ್‌ಗಳಲ್ಲಿ ಅಲುಗಾಡದಂತೆ ಜೋಡಿಸಲಾಗುತ್ತದೆ.
Advertisement
ಮಾರುಕಟ್ಟೆಯಲ್ಲಿ ಇಂದು ವಿವಿಧ ಮಾದರಿಯ ಕ್ಯಾಂಡಲ್ ಸ್ಟಾಂಡ್ ಗಳು ಇವೆ. ಅದರಲ್ಲಿ ಪ್ರಮುಖವಾದುದು ಅಂದರೆ ಮಲ್ಟಿಪಲ್ ಕ್ಯಾಂಡಲ್ ಸ್ಟಾಂಡ್. ಹೆಸರೇ ಸೂಚಿಸುವಂತೆ ಇದರಲ್ಲಿ ನಾಲ್ಕರಿಂದ ಐದು ಹೋಲ್ಡರ್‌ಗಳು ಇವೆ. ಪ್ರತಿಯೊಂದು ಹೋಲ್ಡರ್‌ನ ಒಳಗೂ ಕ್ಯಾಂಡಲ್‌ಇಡಲು ಸ್ಥಳಾವಕಾಶ ಇದೆ. ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಾನಿಕ್ ಬಲ್ಬ್ ಸೇರಿದಂತೆ ಎಲ್‌ಇಡಿ ಕ್ಯಾಂಡಲ್‌ಗಳ ಬಳಕೆ ಹೆಚ್ಚಾಗುತ್ತಿದ್ದು, ಇದೇ ಸಮಯದಲ್ಲಿ ಮಲ್ಟಿಪಲ್ ಕ್ಯಾಂಡಲ್ ಸ್ಟಾಂಡ್ ಗಳು ವಿಶೇಷ ಎಂದೆನಿಸುತ್ತವೆ.
ಚಪ್ಪಟೆ ಹೋಲ್ಡರ್ ಸ್ಟಾಂಡ್ ಕ್ಯಾಂಡಲ್ ಸ್ಟಾಂಡ್ ಗಳಲ್ಲಿ ಮತ್ತೊಂದು ವಿಧ ಅಂದರೆ ಚಪ್ಪಟೆಯಾಕಾರದ ಸ್ಟಾಂಡ್ ಗಳು. ಇದರ ಬಳಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ. ಮನೆಯ ಜತೆ ಸುತ್ತಮುತ್ತಲಿನ ವಾತಾವರಣವನ್ನು ಅಂದಗಾಣಿ ಸಲು ಇದು ಸಹಕಾರಿ. ಈ ಕ್ಯಾಂಡಲ್ ಸ್ಟಾಂಡ್ ಗೆ 2 ಇಂಚು ಅಗಲದ ಚಿಕ್ಕ ಹೋಲ್ಡರ್ ಇಟ್ಟಿರುತ್ತಾರೆ. ಇದರ ಸುತ್ತಲೂ ಗ್ಲಾಸ್‌ನಿಂದ ಆವರಿತವಾಗಿರುತ್ತದೆ. ಈ ಹೋಲ್ಡರ್ ಒಳಗಡೆ ಕ್ಯಾಂಡಲ್ ಇಡಲಾಗುತ್ತದೆ. ಬರಣಿಯಾಕಾರದ ಗ್ಲಾಸಿನ ಸ್ಟಾಂಡ್
ಅದೇ ರೀತಿ ಬರಣಿಯಾಕಾರದ ಗ್ಲಾಸಿನ ಸ್ಟಾಂಡ್ ನ್ನು ಕೂಡ ಕ್ಯಾಂಡಲ್ ಇಡಲು ಉಪಯೋಗಿಸಲಾಗುತ್ತದೆ. ಈ ಸ್ಟಾಂಡ್ ನೊಳಗೆ ಉರಿಯುತ್ತಿರುವ ಕ್ಯಾಂಡಲ್ ಆಕರ್ಷಣೆಯಿಂದ ಕಾಣುತ್ತದೆ. ಈ ಮಾದರಿಯ ಕ್ಯಾಂಡಲ್ ಸ್ಟಾಂಡ್ ಗಳನ್ನು ಸಾಮಾನ್ಯವಾಗಿ ಹೊರಾಂಗಣ ಪ್ರದೇಶಗಳಲ್ಲಿ ಉಪಯೋಗಿಸಲಾಗುತ್ತದೆ. ಅದರಲ್ಲಿಯೂ, ಮರಗಳಿಗೆ ಸರಪಳಿಯ ಮೂಲಕ ಜೋತು ಬಿಡಲಾಗುತ್ತದೆ. ಲ್ಯಾಂಟರ್ನ್ ಶೈಲಿ
ಮನೆಯ ಒಳಾಂಗಣ ಮತ್ತು ಹೊರಾಂಗಣಕ್ಕೆ ಹೊಂದಿಕೊಳ್ಳುವಂತೆ ಇರುವ ಲ್ಯಾಂಟರ್ನ್ ಶೈಲಿಯ ಕ್ಯಾಂಡಲ್ ಸ್ಟಾಂಡ್ ಗಳು ಇತ್ತೀಚಿನ ದಿನಗಳಲ್ಲಿ ಬೇಡಿಕೆ ಪಡೆಯುತ್ತಿದೆ. ಅಳವಡಿಸಿದ ಗ್ಲಾಸ್ ದೊಡ್ಡದಾಗಿರುವ ಕಾರಣ ಕ್ಯಾಂಡಲ್‌ಗಳು ಅತ್ಯಂತ ಸುರಕ್ಷಿತವಾಗಿರುತ್ತದೆ. ಇಂಟೀರಿಯರ್ ಪ್ರಮುಖ ಪಾತ್ರ
ಇತ್ತೀಚಿನ ಮನೆಗಳಲ್ಲಿ ಕ್ಯಾಂಡಲ್ ಸ್ಟಾಂಡ್ ಗಳ ಬಳಕೆ ಹೆಚ್ಚಾಗುತ್ತಿದೆ. ಅದೊಂದು ಪ್ರತಿಷ್ಠೆಯಾಗಿ ಬೆಳೆದು ಬಂದಿದೆ. ಹಿಂದೆಲ್ಲ ಮನೆಯಲ್ಲಿ ವಿದ್ಯುತ್ ಇಲ್ಲದಿದ್ದರೆ ಕ್ಯಾಂಡಲ್ ಬೆಳಕು ಉಪಯೋಗಿಸುತ್ತಿದ್ದರು. ಆದರೆ ಇದೀಗ ಐಷಾರಾಮಿ ಮನೆಗಳಿಗೂ ಕ್ಯಾಂಡಲ್ ಬೇಕೇ ಬೇಕು. ಕ್ಯಾಂಡಲ್‌ಗಳನ್ನು ಇಡಲೆಂದು ಸಾವಿರಾರು ರೂ. ಖರ್ಚು ಮಾಡಿ ವಿವಿಧ ಮಾದರಿಯ ಸ್ಟಾಂಡ್ ಗಳನ್ನು ಖರೀದಿಸುತ್ತಾರೆ. ನವೀನ್ ಭಟ್ ಇಳಂತಿಲ