Advertisement

ಧೂಳಿನಿಂದ ದೂರವಾಗಿರಲಿ ಮನೆ

02:43 AM May 18, 2019 | mahesh |

ನಿತ್ಯವೂ ಎಷ್ಟೇ ಸ್ವಚ್ಛಗೊಳಿಸಿದರೂ ಮನೆಯೊಳಗೆ ಧೂಳು ಸದಾ ತುಂಬಿಕೊಂಡೇ ಇರುತ್ತದೆ. ಮನೆಯೊಳಗೆ ಧೂಳು ಸಾಮಾನ್ಯವಾಗಿ ಬರುವುದು ಕಿಟಕಿ, ಬಾಗಿಲುಗಳಿಂದ. ಹೀಗಾಗಿ ಮನೆ ನಿರ್ಮಾಣದ ವೇಳೆ ಮುಖ್ಯ ರಸ್ತೆ ಇಲ್ಲವೇ, ತೆರೆದ ಸ್ಥಳಗಳಿಂದ ಮನೆಯೊಳಗೆ ಧೂಳಿನ ಸಮಸ್ಯೆ ಎದುರಾಗಬಹುದು. ಅದಕ್ಕಾಗಿ ಈ ದಿಕ್ಕಿನಲ್ಲಿ ದೊಡ್ಡ ಕಿಟಕಿಗಳನ್ನು ಇಡಬಾರದು.

Advertisement

ರಸ್ತೆಗೆ ಕೋನದಲ್ಲಿರುವಂತೆ ಮನೆಯ ವಿನ್ಯಾಸ ಮಾಡಿದರೆ ಅತಿ ಹೆಚ್ಚು ಧೂಳು ಮನೆಯನ್ನು ಪ್ರವೇಶಿಸದಂತೆ ತಡೆಯಬಹುದು. ನಾನಾ ಕಾರಣಗಳಿಂದ ಇಡೀ ಮನೆಯನ್ನು ಕೋನದಲ್ಲಿ ಪ್ಲ್ಯಾನ್‌ ಮಾಡಲು ಸಾಧ್ಯ ಆಗದಿದ್ದರೂ, ಕಡೇ ಪಕ್ಷ ಕಿಟಕಿಗಳನ್ನಾದರೂ ಹೊರಚಾಚಿದಂತೆ ವಿನ್ಯಾಸ ಮಾಡಿ ಮುಖ್ಯ ರಸ್ತೆಗೆ ಒಂದು ಕೋನದಲ್ಲಿ, ಬರುವಂತೆ ಮಾಡಿ, ನೇರವಾಗಿ ಧೂಳು ಮನೆಯನ್ನು ಪ್ರವೇಶಿಸದಂತೆ ತಡೆಯಬಹುದು.

ಮಧ್ಯಭಾಗದಲ್ಲಿ ತೆರೆದಂತಿರುತ್ತಿದ್ದ ಮನೆ ವಿನ್ಯಾಸಗಳಲ್ಲಿ ಹೊರಗಿನ ಧೂಳು ಒಳಗೆ ಪ್ರವೇಶಿಸುವ ಸಾಧ್ಯತೆ ಕಡಿಮೆ ಇತ್ತು. ಈಗಲೂ ನಾವು ನಮ್ಮ ಮನೆಯ ಕಿಟಕಿಗಳ ಮುಂದೆ ಸ್ವಲ್ಪವಾದರೂ ತೆರೆದ ಸ್ಥಳ ಇರುವಂತೆ ಮಾಡಿಕೊಂಡು, ಒಂದಷ್ಟು ಹಸುರನ್ನು ಬೆಳೆಸಿದರೆ, ಧೂಳಿನ ಸಮಸ್ಯೆ ಬಹುಪಾಲು ಕಡಿಮೆ ಆಗುತ್ತದೆ.

ಹಸುರೆಲೆಗಳಿಗೆ ಧೂಳನ್ನು ಆಕರ್ಷಿಸುವ ವಿಶೇಷ ಗುಣ ಇರುತ್ತದೆ. ಮನೆಯ ಕಿಟಕಿಗಳ ಮುಂದೆ ಸಣ್ಣದೊಂದು ಪ್ಲಾಂಟರ್‌- ಉದ್ದನೆಯ ಹೂಕುಂಡ ವಿನ್ಯಾಸ ಮಾಡಿಕೊಂಡು ಒಂದಷ್ಟು ಗಿಡಗಳನ್ನು ಬೆಳೆಸಿದರೆ, ನೋಡಲು ಚಿತ್ತಾಕರ್ಷಕವಾಗಿ ಇರುವಂತೆಯೇ ಧೂಳನ್ನೂ ತಡೆಯಬಹುದು. •

Advertisement

Udayavani is now on Telegram. Click here to join our channel and stay updated with the latest news.

Next