Advertisement

ಸತತ ನಾಲ್ಕನೇ ಬಾರಿ ರೆಪೋ ದರ ಇಳಿಸಿದ ಆರ್ ಬಿಐ, ಗೃಹ, ವಾಹನ ಸಾಲ ಅಗ್ಗ ಸಾಧ್ಯತೆ

08:52 AM Aug 08, 2019 | |

ನವದೆಹಲಿ:ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರನ್ನೊಳಗೊಂಡ ಆರು ಸದಸ್ಯರ ಹಣಕಾಸು ನೀತಿ ಸಮಿತಿಯು ಬುಧವಾರ ಸತತ ನಾಲ್ಕನೇ ಬಾರಿಗೆ ರೆಪೋ ದರವನ್ನು ಶೇ.5.40ಕ್ಕೆ ಇಳಿಕೆ ಮಾಡಿದೆ.

Advertisement

2019-20ನೇ ಸಾಲಿನ ಎರಡು ತಿಂಗಳ ಹಣಕಾಸು ನೀತಿಯ ಸಭೆಯ ಬಳಿಕ ಆರ್ ಬಿಐ ರೆಪೋ ದರ ಕಡಿತಗೊಳಿಸಿರುವ ಬಗ್ಗೆ ಘೋಷಿಸಿದೆ. ಇದರೊಂದಿಗೆ ಸತತ ನಾಲ್ಕನೇ ಬಾರಿ ರೆಪೋ ದರ ಕಡಿತಗೊಳಿಸಿದಂತಾಗಿದೆ.

ಆರ್ ಬಿಐನ ಈ ಕ್ರಮದಿಂದಾಗಿ ಬ್ಯಾಂಕ್ ಗಳಲ್ಲಿ ಪಡೆಯುವ ಗೃಹ ಸಾಲ, ಕಾರುಗಳ ಸಾಲದ ಬಡ್ಡಿದರ ಇಳಕೆಯಾಗುವ ನಿರೀಕ್ಷೆ ಇದೆ. ಅಷ್ಟೇ ಅಲ್ಲ ಕಾರ್ಪೋರೇಟ್ ಸಾಲಗಾರರಿಗೂ ಅನುಕೂಲವಾಗಲಿದೆ ಎಂದು ವರದಿ ತಿಳಿಸಿದೆ.

ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದ ಸಮಿತಿ ರೆಪೋ ದರವನ್ನು ಶೇ.0.35 ಬೇಸಿಸ್ ಪಾಯಿಂಟ್ಸ್ ಗಳಷ್ಟು ಇಳಿಕೆ ಮಾಡುವ ಮೂಲಕ ಶೇ.5.75ರಿಂದ ಶೇ.5.40ಕ್ಕೆ ಇಳಿಕೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next