Advertisement

400 ಕೋಟಿಗೂ ಅಧಿಕ ಗಳಿಕೆ ಕಂಡ ʼಕಾಂತಾರʼ ಆಸ್ಕರ್ ರೇಸ್ ನಿಂದ ಹೊರಬೀಳಲು ಈ ಅಂಶವೇ ಕಾರಣವೆಂದ ನಿರ್ಮಾಪಕ

05:16 PM Feb 02, 2023 | Team Udayavani |

ಬೆಂಗಳೂರು: ಬಾಕ್ಸ್‌ ಆಫೀಸ್‌ ನಲ್ಲಿ 400 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿ ದೊಡ್ಡ ಗೆಲುವು ಕಂಡ ʼಕಾಂತಾರʼ ಸಿನಿಮಾ ಆಸ್ಕರ್‌ ರೇಸ್‌ ಗೆ ಅರ್ಹತೆ ಪಡೆದುಕೊಂಡರೂ, ಆಸ್ಕರ್‌ ಗೆ ನಾಮಿನೇಟ್‌ ಆಗದೇ ಇದ್ದದ್ದು ಅನೇಕರಿಗೆ ನಿರಾಶೆ ಮೂಡಿಸಿತ್ತು.

Advertisement

ಈಗಾಗಲೇ ಮುಂದಿನ 5 ವರ್ಷ ಸಿನಿಮಾರಂಗದಲ್ಲಿ 3000 ಕೋಟಿ ಬಂಡವಾಳ ಹಾಕಿರುವ  ವಿಜಯ್ ಕಿರಗಂದೂರು ಹೊಂಬಾಳೆ ಫಿಲ್ಮ್ಸ್ ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು ಹಾಗೂ ಮಲಯಾಳಂ ರಂಗದಲ್ಲೂ ನಿರ್ಮಾಣದ ಹೆಜ್ಜೆಯನ್ನಿಟ್ಟಿದೆ.

ಎಲ್ಲರ ಮನ ಗೆದ್ದ ರಿಷಬ್‌ ಶೆಟ್ಟಿ ಅವರ ʼಕಾಂತಾರʼ ಪ್ರತಿಷ್ಠಿತ ಆಸ್ಕರ್‌ ರೇಸ್‌ ಗೆ ಯಾಕೆ ನಾಮಿನೇಟ್‌ ಆಗಿಲ್ಲ. ಸಿನಿಮಾ ನಿಜಕ್ಕೂ ಪ್ರಶಸ್ತಿ ಸ್ಪರ್ಧೆಗೆ ಆಯ್ಕೆಗೊಳ್ಳದಿರಲು ಕಾರಣವೇನು ಎನ್ನುವುದರ ಕುರಿತು ನಿರ್ಮಾಪಕ ವಿಜಯ್ ಕಿರಗಂದೂರು ʼಇಂಡಿಯಾ ಟುಡೇʼ  ಜೊತೆ ಮಾತನಾಡಿದ್ದಾರೆ.

ಇದನ್ನೂ ಓದಿ: 500 ಹುಡುಗಿಯರ ಜೊತೆ ಪರೀಕ್ಷೆಗೆ ಕೂತ ಏಕೈಕ ವಿದ್ಯಾರ್ಥಿ: ಅಷ್ಟೂ ಹುಡುಗಿಯರನ್ನು ನೋಡಿ ಮೂರ್ಛೆ ಹೋದ.!

ಮೊದಲು ನಾವು ಬೇರಿನ ಅಂದರೆ ನಮ್ಮ ಸ್ಥಳೀಯ ಕಥೆಗಳನ್ನು ಜಗತ್ತಿಗೆ ಹೇಳಬೇಕು. ʼಕಾಂತಾರʼ ಹಾಗೂ ʼಆರ್‌ ಆರ್‌ ಆರ್‌ʼ ಎರಡೂ ಸಿನಿಮಾಗಳು ಇದರಲ್ಲಿ ಗೆದ್ದಿದೆ. ಕೋವಿಡ್‌ ನಿಂದ ಜನ ಎಲ್ಲಾ ಬಗೆಯ ಮನರಂಜನೆಯ ಕಥೆಯನ್ನು ಓಟಿಟಿಯಲ್ಲಿ ನೋಡಿದ್ದಾರೆ. ನಿರ್ದೇಶಕರು ಈಗ ಪ್ರೇಕ್ಷಕರು ಏನನ್ನ ನೋಡಿಲ್ವೋ ಅಂಥ ಕಥೆಯನ್ನು ತೆರೆ ಮೇಲೆ ತರಬೇಕು. ನಮ್ಮ ಸಂಸ್ಕೃತಿಯನ್ನು ಮೊದಲು ದಾಖಲು ಮಾಡಬೇಕು. ʼಕಾಂತಾರʼದಲ್ಲಿ ತುಳು ಸಂಸ್ಕೃತಿಯನ್ನು ದಾಖಲು ಮಾಡಿದ ಹಾಗೆ. ಜಗತ್ತಿಗೆ ಈಗ ʼಕಾಂತಾರʼದಲ್ಲಿನ ತುಳುನಾಡಿನ ಸಂಸ್ಕೃತಿ , ಸಂಪ್ರದಾಯ ಕರ್ನಾಟಕದ ಕರಾವಳಿ ಪ್ರದೇಶದೆಂದು ತಿಳಿದಿದೆ ಎಂದು ಹೇಳಿದ್ದಾರೆ.

Advertisement

ʼಆರ್‌ ಆರ್‌ ಆರ್‌ʼ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಸ್ಕರ್‌, ಗೋಲ್ಡನ್‌ ಗ್ಲೋಬ್‌ ನಂತಹ ಪ್ರಶಸ್ತಿ ಸಮಾರಂಭದಲ್ಲಿ ಸದ್ದು ಮಾಡಿದೆ. ಹೊಂಬಾಳೆ ಕೂಡ ಪ್ರಶಸ್ತಿಗಳತ್ತ ಮುಂದೆ ನೋಡುತ್ತಿರಬಹುದೆನ್ನುವ ಪ್ರಶ್ನೆಗೆ ಉತ್ತರಿಸಿದ ನಿರ್ಮಾಪಕರು, “ಹೌದು ʼಕಾಂತಾರʼದಿಂದ ನಾವು ಅದನ್ನು ನಿರೀಕ್ಷೆ ಮಾಡಿದ್ದೆವು. ಆದರೆ ಸಿನಿಮಾ ಬಿಡುಗಡೆ ಆದ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದನ್ನು ಪ್ರಚಾರ ಮಾಡಲು ಅಷ್ಟು ಸಮಯ ಸಾಕಾಗಲಿಲ್ಲ. ʼಆರ್‌ ಆರ್‌ ಆರ್‌ʼ ಸಿನಿಮಾ ನಮ್ಮ ಚಿತ್ರಕ್ಕಿಂತ ಬೇಗನೇ ರಿಲೀಸ್‌ ಆಯಿತು. ಅವರಿಗೆ ಪ್ರಚಾರಕ್ಕೆ ಒಳ್ಳೆಯ ಸಮಯ ಸಿಕ್ಕಿತ್ತು. ನಾವು ಕನಿಷ್ಠ ಪ್ರಶಸ್ತಿಯ ವಿಚಾರವಾಗಿ 6 ತಿಂಗಳು ಮೊದಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡಲು ಯೋಚಿಸಬೇಕಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿನಿಮಾ ರಿಲೀಸ್‌ ಮಾಡಬೇಕಿತ್ತು. ಆ ಬಳಿಕ ಅಲ್ಲಿಂದ ಜನ ವೋಟ್‌ ಮಾಡುತ್ತಾರೋ ಇಲ್ವೋ ಆದರೆ ನಾವು ಸಿನಿಮಾವನ್ನು ರಿಲೀಸ್‌ ಮಾಡಬೇಕಿತ್ತು ಎಂದಿದ್ದಾರೆ.

ನಾವು ಹಿಂದಿನ ತಪ್ಪಿನಿಂದ ಪಾಠ ಕಲಿತುಕೊಂಡಿದ್ದೇವೆ. ಮುಂದೆ ಸಾಗುತ್ತಿದ್ದೇವೆ. ಖಂಡಿತ ಮುಂದೆ ಆಸ್ಕರ್‌ ಅಥವಾ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿಗಳು ನಮ್ಮ ಚಿತ್ರಗಳಿಗೆ ಸಿಗಬೇಕು ಎನ್ನುವುದು ನಮ್ಮ ಇರಾದೆ ಎಂದಿದ್ದಾರೆ.

ʼಕಾಂತಾರ-2ʼ ಸಿನಿಮಾ ಖಂಡಿತ ಪ್ರಶಸ್ತಿ ಗೆಲ್ಲಬಹುದು ಎಂದು, ಹೇಳಿ ಸಿನಿಮಾಕ್ಕೆ ಮಾರ್ಕೆಟಿಂಗ್‌ ಅನ್ನೋದು ಕೂಡ ಮುಖ್ಯ ಎಂದಿದ್ದಾರೆ ನಿರ್ಮಾಪಕರು.ಸದ್ಯ ʼಕಾಂತಾರ-2ʼ ಸಿನಿಮಾದ ಲೋಕೇಷನ್‌ ಹಾಗೂ ಸ್ಕ್ರಿಪ್ಟಿಂಗ್‌ ಕೆಲಸಗಳು ಭರದಿಂದ ಸಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next