Advertisement
ಹೊಂಬಾಳೆ ಫಿಲಂಸ್‌ನ ಸಂಸ್ಥಾಪಕ ವಿಜಯ್ ಕಿರಗಂದೂರು ಮಾತನಾಡಿ, ”ಕಂಪನಿಯು ಎಲ್ಲಾ ದಕ್ಷಿಣ ಭಾಷೆಗಳಲ್ಲಿ ಚಲನಚಿತ್ರಗಳನ್ನು ನಿರ್ಮಿಸಲು ಯೋಜಿಸುತ್ತಿದೆ.ಭಾರತದಲ್ಲಿ ಮನರಂಜನಾ ಉದ್ಯಮದಲ್ಲಿ ಮುಂದಿನ ಐದು ವರ್ಷಗಳವರೆಗೆ 3,000 ಕೋಟಿ ರೂಪಾಯಿ ಹೂಡಿಕೆ ಮಾಡಲು ನಾವು ಉದ್ದೇಶಿಸಿದ್ದೇವೆ. ಮನರಂಜನಾ ಉದ್ಯಮವು ಹೆಚ್ಚು ಹೆಚ್ಚು ಬೆಳೆಯುತ್ತದೆ ಎಂದು ನಾವು ನಂಬುತ್ತೇವೆ” ಎಂದಿದ್ದಾರೆ.
Related Articles
Advertisement
”ಅವರು ತಮ್ಮ ಮುಂಬರುವ ಚಿತ್ರಗಳಲ್ಲಿ ವರನಟ ರಾಜ್‌ಕುಮಾರ್ ಅವರ ಮೊಮ್ಮಗ ಯುವ ರಾಜ್‌ಕುಮಾರ್ ಅವರ ಚಿತ್ರವನ್ನು ಸಂತೋಷ್ ಆನಂದರಾಮ್ ನಿರ್ದೇಶಿಸಲಿದ್ದು, 2023 ರ ಅಂತ್ಯಕ್ಕೆ ಬಿಡುಗಡೆಯಾಗಲಿದೆ.ಮುಂದಿನ ವರ್ಷ ನಮ್ಮ ಬಳಿ ನಾಲ್ಕರಿಂದ ಐದು ಸಿನಿಮಾಗಳು ಮತ್ತು ಇನ್ನೆರಡು ವರ್ಷಕ್ಕೆ 12ರಿಂದ 14 ಸಿನಿಮಾಗಳು ಇರುತ್ತವೆ” ಎಂದು ಕಿರಗಂದೂರು ಹೇಳಿದರು.
2024 ರಲ್ಲಿ, ಪೃಥ್ವಿರಾಜ್ ಸುಕುಮಾರನ್ ಅವರೊಂದಿಗೆ “ಟೈಸನ್” ಎಂಬ ಸಾಮಾಜಿಕ ಥ್ರಿಲ್ಲರ್, ರಕ್ಷಿತ್ ಶೆಟ್ಟಿಯೊಂದಿಗೆ “ರಿಚರ್ಡ್ ಆಂಟನಿ” ಮತ್ತು “ಸೂರರೈ ಪೊಟ್ರು” ಖ್ಯಾತಿಯ ನಿರ್ದೇಶಕಿ ಸುಧಾ ಕೊಂಗರ ಅವರೊಂದಿಗೆ ಚಲನಚಿತ್ರ ನಿರ್ಮಾಣ ಮಾಡಲಾಗುತ್ತಿದೆ.
2013 ರಲ್ಲಿ ಸ್ಥಾಪನೆಯಾದ ಹೊಂಬಾಳೆ ಫಿಲ್ಮ್ಸ್, 2018 ರಲ್ಲಿ ಯಶ್ ಅಭಿನಯದ ಅವಧಿಯ ಆಕ್ಷನ್ “ಕೆ.ಜಿ.ಎಫ್: ಅಧ್ಯಾಯ 1” ರೊಂದಿಗೆ ಪ್ಯಾನ್-ಇಂಡಿಯಾ ಯಶಸ್ಸನ್ನು ಪಡೆಯಿತು.. ಈ ಸಂಸ್ಥೆ ನಿರ್ಮಿಸಿದ ಮೊದಲ ಚಿತ್ರ ಪುನೀತ್ ರಾಜ್‌ಕುಮಾರ್ ನಾಯಕರಾಗಿದ್ದ “ನಿನ್ನಿಂದಲೇ”.
ಈ ವರ್ಷ ಬ್ಯಾನರ್ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ “ಕೆಜಿಎಫ್ 2” ಮತ್ತು “ಕಾಂತಾರ” ದೊಡ್ಡ ಯಶಸ್ಸನ್ನು ಗಳಿಸುವುದರೊಂದಿಗೆ ಗೋಲ್ಡನ್ ರನ್ ಗಳಿಸಿತು. ಎರಡೂ ಚಿತ್ರಗಳು ವಿಶ್ವಾದ್ಯಂತ 2,000 ಕೋಟಿ ರೂ. ಗಿಂತಲೂ ಹೆಚ್ಚು ಗಳಿಸಿವೆ ಎಂದು ವರದಿಯಾಗಿದೆ.