Advertisement

ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ICU ಬೆಡ್/ಆಕ್ಸಿಜನ್ ಘಟಕ ಸ್ಥಾಪನೆಗೆ ವಿಜಯ್ ಕಿರಗಂದೂರು ಒಲವು

06:49 PM May 10, 2021 | Team Udayavani |

ಮಂಡ್ಯ: ಮನುಕುಲವನ್ನೇ ಬುಡಮೇಲು ಮಾಡುತ್ತಿರುವ ಕೊರೊನಾ 2ನೇ ಅಲೆಯ ಸಂಕಷ್ಟವನ್ನು ದೂರ ಮಾಡಲು ಸರ್ಕಾರ ಸಾಕಷ್ಟು ಶ್ರಮ ವಹಿಸುತ್ತಿದ್ದು, ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಅಗತ್ಯವಾಗಿರುವ ಐಸಿಯು ಅಥವಾ ಆಮ್ಲಜನಕ ಘಟಕ ಸ್ಥಾಪನೆಗೆ ಮುಂದಾಗಿರುವುದಾಗಿ ಹೊಂಬಾಳೆ ಗ್ರೂಪ್‌ನ ವಿಜಯ್ ಕಿರಗಂದೂರು ತಿಳಿಸಿದ್ದಾರೆ.

Advertisement

ಜಿಲ್ಲಾಧಿಕಾರಿಗೆ ಇ-ಮೇಲ್ ಮಾಡಿರುವ ಅವರು, ಮಂಡ್ಯ ಜಿಲ್ಲಾಸ್ಪತ್ರೆಯ ರೋಗಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಅತ್ಯಾಧುನಿಕ 50 ಹಾಸಿಗೆವುಳ್ಳ ಐಸಿಯು ಬೆಡ್ ಅಥವಾ 500 ಎಲ್‌ಪಿಎಂ ಸಾಮರ್ಥ್ಯದ ಎರಡು ಆಕ್ಸಿಜನ್ ಘಟಕ ನೀಡಲು ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ.

ಜಿಲ್ಲಾಡಳಿತ ಅಥವಾ ಆರೋಗ್ಯ ಇಲಾಖೆ ಯಾವುದನ್ನು ಸೂಚಿಸುತ್ತದೆಯೋ ಅದಕ್ಕೆ ಸಂಬಂಧಿಸಿದಂತೆ ಆರ್ಥಿಕ ನೆರವು ನೀಡಲಾಗುವುದು. ಇದನ್ನು ಸದ್ಬಳಕೆ ಮಾಡಿಕೊಂಡು ಐಸಿಯು ಘಟಕದ 50 ಬೆಡ್ ಅಳವಡಿಕೆ ಅಥವಾ ಆಮ್ಲಜನಕ ಘಟಕ ಸ್ಥಾಪಿಸುವಂತೆ ವಿಜಯ್ ಕಿರಗಂದೂರು ಕೋರಿದ್ದಾರೆ.

ಇದನ್ನೂ ಓದಿ :ಸಾಲ ಕಂತು ಪಾವತಿಗೆ ಕೃಷಿಕರಿಗೆ ನೋಟಿಸ್‌ : ಅವಧಿ ವಿಸ್ತರಿಸುವಂತೆ ಸಿಎಂ ಗೆ ಸಚಿವ ಕೋಟ ಮನವಿ

Advertisement

Udayavani is now on Telegram. Click here to join our channel and stay updated with the latest news.

Next