ಮಂಗಳೂರು: ಕೆಥೋಲಿಕ್ ಧರ್ಮಸಭೆಯ ಕ್ಯಾರಿಜ್ಮ್ಯಾಟಿಕ್ ನವೀಕರಣದ ಸ್ವರ್ಣಮಹೋತ್ಸವದ ಅಂಗವಾಗಿ ನಗರದ ರೊಜಾರಿಯೊ ಕೆಥೆಡ್ರಲ್ ಆವರಣದಲ್ಲಿ ನಡೆದ 4 ದಿನಗಳ ಕರ್ನಾಟಕ ರಾಜ್ಯ ಮಟ್ಟದ ಸಮ್ಮೇಳನ “ಪವಿತ್ರಾತ್ಮ ಅಭಿಷೇಕೋತ್ಸವ 2017′ ರವಿವಾರ ಸಮಾರೋಪಗೊಂಡಿತು.
ಸಮಾರೋಪದಲ್ಲಿ ಬೆಂಗಳೂರು ಮಹಾ ಧರ್ಮಪ್ರಾಂತದ ಆರ್ಚ್ ಬಿಷಪ್ ರೆ|ಡಾ| ಬರ್ನಾರ್ಡ್ ಮೊರಾಸ್ ಅವರು ಬಿಷಪರಾದ ರೈ| ರೆ| ಡಾ| ಅಲೋಶಿಯಸ್ ಪಾವ್ಲ್ ಡಿ’ಸೋಜಾ (ಮಂಗಳೂರು), ರೈ| ರೆ| ಡಾ| ಜೆರಾಲ್ಡ್ ಐಸಾಕ್ ಲೋಬೊ(ಉಡುಪಿ), ರೈ| ರೆ| ಡಾ| ಲಾರೆನ್ಸ್ ಮುಕುಝಿ (ಬೆಳ್ತಂಗಡಿ) ಹಾಗೂ ಮಂಗಳೂರು ಧರ್ಮಪ್ರಾಂತದ ಪ್ರಧಾನ ಗುರು ಮೊ| ಡೆನಿಸ್ ಮೊರಾಸ್ ಪ್ರಭು ಅವರ ಸಹಭಾಗಿತ್ವದಲ್ಲಿ ಇತರ 110 ಧರ್ಮಗುರುಗಳ ಜತೆ ಬಲಿ ಪೂಜೆ ಅರ್ಪಿಸಿದರು.
ಪವಿತ್ರಾತ್ಮ ಅಭಿಷೇಕೋತ್ಸವದ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದ ಆರ್ಚ್ ಬಿಷಪ್‌ಕ್ಯಾರಿಜ್ಮಾ$Âಟಿಕ್ ನವೀಕರಣದ ಸ್ವರ್ಣಮಹೋತ್ಸದ ನೆನಪಿಗಾಗಿ 50 ಬೆಲೂನ್‌ಗಳನ್ನು ಗಾಳಿಯಲ್ಲಿ ತೇಲಿ ಬಿಟ್ಟರು.
ರೈ| ರೆ| ಡಾ| ಬರ್ನಾರ್ಡ್ ಮೊರಾಸ್ ಅವರು ತಮ್ಮ ಪ್ರವಚನದಲ್ಲಿ, ಕ್ಯಾರಿಜ್ಮಾಟಿಕ್ ನವೀಕರಣದಿಂದಾಗಿ ಧರ್ಮಸಭೆಯಲ್ಲಿ ಅಪಾರ ಒಳಿತಾ ಗಿದೆ. ಧರ್ಮಗುರುಗಳು, ಧರ್ಮಭಗಿನಿಯರು ಮತ್ತು ಶ್ರೀ ಸಾಮಾನ್ಯ ಭಕ್ತರು ತಮ್ಮ ಆಧ್ಯಾತ್ಮಿಕ ಜೀವನದ ಅರ್ಥವನ್ನು ಕಂಡುಕೊಂಡಿದ್ದಾರೆ ಹಾಗೂ ತಮ್ಮ ಜೀವನದಲ್ಲಿ ಅದನ್ನು ಅಳವಡಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ದೇವರ ಅಪಾರ ಆಶೀರ್ವಾದಗಳನ್ನು ಪಡೆದುಕೊಳ್ಳಲು ಸಹಕಾರಿಯಾದ ಈ ನವೀಕರಣಕ್ಕಾಗಿ ದೇವರಿಗೆ ಆಭಾರಿಯಾಗಿದ್ದೇವೆ ಎಂದರು.
ಬಿಶಪ್ ಲಾರೆನ್ಸ್ ಮುಕ್ಕುಝಿ ಅವರು ಪವಿತ್ರಾತ್ಮರ ಅದ್ಭುತ ಶಕ್ತಿಯ ಬಗ್ಗೆ ಪ್ರವಚನ ನೀಡಿದರು. ಫಾ| ಫ್ರಾಂಕ್ಲಿನ್ ಡಿ’ಸೋಜಾ ಅವರು ಮಾತೆ ಮೇರಿ ಅವರು ಯೇಸು ಸ್ವಾಮಿಯನ್ನು ಅನುಸರಿಸುವಲ್ಲಿ ಆದರ್ಶರಾಗಿದ್ದಾರೆ ಎಂದರು. ಫಾ| ಜೋಸ್ ವೆಟ್ಟಿಯಾಂಕಲ್ ಅವರು ಆರಾಧನೆಯನ್ನು ನಡೆಸಿಕೊಟ್ಟರು.
ಕೊನೆಯ ದಿನದ ಧ್ಯಾನಕೂಟದಲ್ಲಿ ಸುಮಾರು 25,000 ಜನರು ಪಾಲ್ಗೊಂಡಿದ್ದರು. ಸಮ್ಮೇಳನದ ಸಂಚಾಲಕ ಫಾ| ಓನಿಲ್ ಡಿ’ಸೋಜಾ ಕಾರ್ಯಕ್ರಮ ನಿರ್ವಹಿಸಿದರು. ಫಾ| ಮೆಲ್ವಿನ್ ನೊರೊನ್ಹಾ ವಂದಿಸಿದರು. ಮಂಗಳೂರು ಧರ್ಮ ಪ್ರಾಂತದ ಪಾಲನಾ ಪರಿಷತ್ ಕಾರ್ಯದರ್ಶಿ ಎಂ.ಪಿ. ನೊರೋನ್ಹಾ ಉಪಸ್ಥಿತರಿದ್ದರು.