Advertisement
ಪ್ರಾರ್ಥನೆ ವೇಳೆ ಜಾಮಿಯಾ ಮಸೀದಿ ಅದ್ಯಕ್ಷ ಎಂ.ಎಸ್.ಅಬ್ದುಲ್ ಲತೀಫ್ ಮಾತನಾಡಿ, ಕೊರೊನಾ ಸಂಕಷ್ಟದ ಬಳಿಕ ಉತ್ತಮ ಮಳೆಯಾಗಿ ಬೆಳೆಯಾಗಿ ಜನ ಜಾನುವಾರುಗಳಿಗೆ ಕುಡಿಯುವ ನೀರು ಸಿಗಲಿ ಮುಂಗಾರು ಬೆಳೆಗಳು ಉತ್ತಮವಾಗಿ ಬೆಳೆಯಲಿ ಎಂದು ದೇವರಲ್ಲಿ ಹರಿಕೆ ಮಾಡಿಕೊಂಡಿರುವುದಾಗಿ ತಿಳಿಸಿದರು.
ಸಮೀವುಲ್ಲ, ಸರ್ಕಾರಿ ಮುಖ್ಯ ಶಿಕ್ಷಕ ಜಿಲಾನ್ ಬಾಷ, ಶಿಕ್ಷಕ ಹೈದರ್‌ಸಾಬೀ, ಎಸ್.ಅಹಮ್ಮದ್ ಬಾಷ, ಖಾದರ್, ಬಟ್ಟೆ ಅಂಗಡಿ ಮಾಲಿಕ ಇಮ್ರಾನ್ ಕರವೇ ಸದಸ್ಯ ಬುಲೇಟ್‌ಬಾಬು, ಎಸ್.ಎಫ್.ಸಾದೀಕ್‌ಫಯಾಜ್ ಇತರರಿದ್ದರು. ತಾಲ್ಲೂಕಿನ ಪ್ರಮುಖ ಗ್ರಾ.ಪಂ.ಗಳಾದ ನಲ್ಲಗುಟ್ಲಪಲ್ಲಿ, ಚಾಕವೇಲು, ಬಿಳ್ಳೂರು, ಪೋಲನಾಯಕನಹಳ್ಳಿ, ಜೂಲಪಾಳ್ಯ, ಪಾಳ್ಯಕೆರೆ, ನಾರೇಮದ್ದೇಪಲ್ಲಿ, ಕುರುಬರಹಳ್ಳಿ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸದರು. ಚೇಳೂರು ವೃತ್ತದ ಸರ್ಕಲ್ ಇನ್ಸ್‌ಪೆಕ್ಟರ್ ಸಿ.ರವಿಕುಮಾರ್ ಆದೇಶದಂತೆ ಪ್ರೋ.ಪಿಎಸ್‌ಐ ಹರೀಶ್ ಪಾತಪಾಳ್ಯ ನಾರಾಯಣಸ್ವಾಮಿ ಎರಡು ಠಾಣೆಗಳ ಪರೀದಿಯಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.