ರಷ್ಯಾದ ಮ್ಯಾಕ್ಸಿಮ್ ಮ್ಯಾಟ್ಲಕೋವ್ ವಿರುದ್ಧ ವಿಶ್ವನಾಥನ್ ಆನಂದ್ ಜಯ ಸಾಧಿಸಿದ್ದಾರೆ.
Advertisement
ಎದುರಾಳಿಯ ಚೆಕ್ ಮೇಟ್ ಸವಾಲನ್ನು ನಿಭಾಯಿಸಿಯೂ ಆನಂದ್ ಗೆದ್ದು ಬಂದದ್ದು ವಿಶೇಷ. ಇದು 14 ಆಟಗಾರರನ್ನೊಳಗೊಂಡ 13 ಸುತ್ತುಗಳ ಸ್ಪರ್ಧೆಯಾಗಿದೆ. ಭಾರತದ ಮತ್ತೂಬ್ಬ ಆಟಗಾರ ಬಿ.ಅಧಿಬನ್ ರಷ್ಯಾದ ಪೀಟರ್ ಸ್ವಿಡ್ಲರ್ ವಿರುದ್ಧ ಡ್ರಾ ಸಾಧಿಸಿದರು. ಕಳೆದ ಬಾರಿ ಇಲ್ಲಿ ನಡೆದ ಸ್ಪರ್ಧೆಯಲ್ಲಿ ಅಧಿಬನ್ ಸ್ಟಾರ್ ಆಟಗಾರರ ಸವಾಲನ್ನು ಮೆಟ್ಟಿನಿಂತು ತೃತೀಯ ಸ್ಥಾನಿಯಾಗಿದ್ದರು.