Advertisement

ಹೋಲಿಯಾಗುತ್ತಿರುವ ಹೋಳಿ ಹುಣ್ಣಿಮೆ

03:41 PM Mar 29, 2021 | Team Udayavani |

ಧಾರವಾಡ: ಶೃಂಗಾರ ಕಾವ್ಯಗಳ ಬದಲು ಸಿನಿಮಾಹಾಡುಗಳು, ಲಬೋ ಲಬೋ ಎಂದು ಬಾಯಿಬಡಿದುಕೊಳ್ಳುತ್ತ ಸಂಭ್ರಮಿಸುವ ಬದಲುಬಾಯಲ್ಲೊಂದು ಸದ್ದು ಮಾಡುವ ಪಿಂಯಾ,ಮೋಜಿಗೊಂದಿಷ್ಟು ಬಣ್ಣದ ಬದಲು ಎಲ್ಲರಕೈಯಲ್ಲೂ ಮದ್ಯದ ಬಾಟಲಿ. ಒಟ್ಟಾರೆ ಹೋಳಿ ಹುಣ್ಣಿಮೆ ಸ್ವರೂಪವೇ ಅದಲು ಬದಲು. ಸಂಭ್ರಮದಿಂದ ಹೋಳಿಹುಣ್ಣಿಮೆ ಆಚರಿಸುವಬದಲು ಎಲ್ಲರೂ ಜಸ್ಟ್‌ ಹ್ಯಾಪಿ ಹೋಲಿಎನ್ನುವಲ್ಲಿಗೆ ತೃಪ್ತರಾಗುತ್ತಿದ್ದಾರೆ.

Advertisement

ಹೌದು. ಕಳೆದ 30 ವರ್ಷಗಳಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಕಾಮಣ್ಣನ ಹಬ್ಬ ಹೋಳಿ ಹುಣ್ಣಿಮೆ ತನ್ನ ಸ್ವರೂಪದಲ್ಲಿಬದಲಾವಣೆಯಾಗುತ್ತಲೇ ಸಾಗಿದೆ. ಆದರೂಮೂಲ ಹೋಳಿಹಬ್ಬದ ಆಶಯ ಮೈ ಮರೆತು,ಮೈದುಂಬಿ, ಮನದುಂಬಿ, ಹೃದಯ ತುಂಬಿಸಂಭ್ರಮಿಸುವುದೇ ಆಗಿದೆ. ಅದು ಬಣ್ಣದ ಆಟವಾಗಲಿ,ಹೋಳಿ ಶೃಂಗಾರಕಾವ್ಯ ಹಾಡುವುದಾಗಲಿ, ಹಳ್ಳಿಗಳಲ್ಲಿಜಿದ್ದಾಜಿದ್ದಿನ ಕೆಲಸಗಳೇ ಆಗಲಿ, ಕಾಮಣ್ಣನ ನೆಪದಲ್ಲಿಒಟ್ಟಾಗಿ ಸೇರಿ ವಿಪರೀತ ಹಾಸ್ಯ, ಅಪಹಾಸ್ಯಕ್ಕೆ ಮನ್ನಣೆ ಸದಾ ಇರುತ್ತಿತ್ತು.

ಆದರೀಗ ಬರೀ ಡಿಜೆ ಕುಣಿತ, ನೀರಿನ ಜಳಕ,ಅತಿಯಾದ ಮದ್ಯ ಸೇವನೆ ಹೊರತು ಪಡಿಸಿದರೆ ಬೇರೆಏನನ್ನೂ ಹೊಸ ಪೀಳಿಗೆ ನೋಡುತ್ತಲೇ ಇಲ್ಲ. ಇದೀಗಕಾಮಣ್ಣನ ಹಬ್ಬ ಇತರೆ ಹಬ್ಬಗಳಂತೆ ಒಂದು ರಜಾಮಜಾ ಆಗಿ ಮಾತ್ರ ಪರಿಣಮಿಸುತ್ತಿದೆಯೇ ಹೊರತುಅದರ ಮೂಲ ಆಶಯವಾದ ಸಾಮಾಜಿಕ ಸಹಬಾಳ್ವೆ, ಕಾಮಪ್ರೇರಣೆ, ಶೃಂಗಾರ ಸಾಹಿತ್ಯದ ಹಾಡುಗಾರಿಕೆ ಮಾತ್ರ ಕಣ್ಮರೆಯಾಗುತ್ತಿದೆ.

ಹಲಗಿ ಹಬ್ಬ ಜೀವಂತ: ಇನ್ನು ಇದೆಲ್ಲದಕ್ಕೂ ವಿಭಿನ್ನ ಎಂಬಂತೆ ಧಾರವಾಡದಲ್ಲಿ ಜಾನಪದ ಕಲಾಸಕ್ತರ ಬಳಗವೊಂದು ಕಳೆದ ಮೂರು ವರ್ಷಗಳಿಂದ ಹಲಿಗೆಹಬ್ಬವನ್ನು ಹೋಳಿಹುಣ್ಣಿಮೆ ನಿಮಿತ್ತ ಅದ್ಧೂರಿಯಾಗಿ ಆಚರಿಸುತ್ತಿದೆ. ಕಾಮನಕಟ್ಟಿ ವೀರಭದ್ರೇಶ್ವರದೇವಸ್ಥಾನದಲ್ಲಿ ನಡೆಯುವ ಈ ಹಲಗಿ ಹಬ್ಬಕ್ಕೆ ಮಾಳಾಪೂರ, ಹೊಸಯಲ್ಲಾಪೂರ ಸೇರಿದಂತೆಗ್ರಾಮೀಣ ಸೊಗಡು ಉಳಿಸಿಕೊಂಡಿರುವ ಧಾರವಾಡದನಗರ ಪ್ರದೇಶದ ಅನೇಕರು ಸಾಥ್‌ ನೀಡುತ್ತಾರೆ.ಅಷ್ಟೇಯಲ್ಲ, ಧಾರವಾಡದ ಮುರುಘಾಮಠ, ಕಮಲಾಪೂರ, ನವಲೂರು ಚೌಣಿಗಳಲ್ಲಿ ಇಂದಿಗೂಕಾಮಣ್ಣನ ಹಬ್ಬ ತನ್ನ ವೈಶಿಷ್ಟ್ಯತೆ ಉಳಿಸಿ ಕೊಂಡಿದೆ. ಹೊಸ ತಲೆಮಾರು ಕಾಮಣ್ಣನ ಸಾಂಪ್ರದಾಯಿಕ ಹಬ್ಬದ ಸ್ವರೂಪದಿಂದ ಸಂಪೂರ್ಣ ಹೊರಗೆಹೋಗುತ್ತಿರುವ ಸಂದರ್ಭದಲ್ಲಿ ಹಲಗಿ ಬಡಿಯುತ್ತಲೇ ಹೋಳಿ ಹುಣ್ಣಿಮೆ ಆಚರಿಸುವ ಪದ್ಧತಿಯನ್ನು ಸಂಘಟನಾತ್ಮಕವಾಗಿ ಇಲ್ಲಿ ಜೀವಂತವಾಗಿಡುವ ಪ್ರಯತ್ನ ನಡೆದಿದ್ದು ಶ್ಲಾಘನೀಯ. ಇದಕ್ಕೆ ರಾಜಕೀಯಗಣ್ಯರು ಕೂಡ ಕೈಜೋಡಿಸಿ ಇದನ್ನು ಸಾರ್ವಜನಿಕ ಆಚರಣೆಯನ್ನಾಗಿ ಮಾಡಿದ್ದು ಹಲಗಿ ಹಬ್ಬಕ್ಕೆ ಇನ್ನಷ್ಟು ಮೆರಗು ತಂದಂತಾಗಿದೆ.

ಶೃಂಗಾರ ಕಾವ್ಯ ರಮ್ಯ: ಜನಪದ ಬಾಯಲ್ಲಿ ಮೌಖೀಕಪರಂಪರೆಯಿಂದ ಬಂದಿರುವ ಹೋಳಿಹುಣ್ಣಿಮೆ ಹಾಡುಗಳು ಅರ್ಥಾರ್ಥ ಶೃಂಗಾರ ಸಾಹಿತ್ಯವೆಂದುಕರೆಯಲ್ಪಡುವ ಏಕೈಕ ಪ್ರಕಾರ ಉತ್ತರ ಕರ್ನಾಟಕದಹೋಳಿ ಹಾಡುಗಳು. ಯುವಕರು ಅದರಲ್ಲೂ ಹದಿಹರೆಯದವರ ಕಾಮೋತ್ಸಾಹವನ್ನು ಹೊರ ಹಾಕಲುಬಳಸುವ ಈ ಕಾವ್ಯ ಪ್ರಕಾರಕ್ಕೆ ಐತಿಹಾಸಿಕ ಹಿನ್ನೆಲೆಯೂಉಂಟು. ಹರಿಹರನ ಗಿರಿಜಾ ಕಲ್ಯಾಣದಲ್ಲಿನ ಅನೇಕ ಪ್ರಣಯ ಪ್ರಸಂಗ ಗಳನ್ನು ಜಾನಪದರು ತಮ್ಮ ಹಾಡುಗಳಮೂಲಕ ಹೋಳಿ ಹಬ್ಬದಲ್ಲಿ ರತಿ-ಕಾಮಣ್ಣರ ಎದುರು ಹಾಡುವ ಸಂಪ್ರದಾಯವಿತ್ತು. ಅದಕ್ಕೆ ಸಾಕ್ಷಿ ಎನ್ನುವಂತೆಈಗಲೂ ಕೆಲ ಹಳ್ಳಿಗಳಲ್ಲಿ ಕಾಮಣ್ಣನ ಎದುರು ಹೋಳಿ ಪದಗಳನ್ನು ಹಾಡುತ್ತಾರೆ. ಕಾಲಾಂತರದಲ್ಲಿ ಅದು ಕಣ್ಮರೆಯಾಗಿದೆ.

Advertisement

ಹೋಳಿಹುಣ್ಣಿಮೆ ಹಾಡುಗಳು ಎಂದೇ ಪ್ರಸಿದ್ಧಿಪಡೆದಿರುವ ಈ ಹಾಡುಗಳಲ್ಲಿ ಯುವಕ ಯುವತಿಯನ್ನುನೋಡಿ ಅವಳ ಚೆಲುವನ್ನು ಮೆಚ್ಚಿಕೊಳ್ಳುವ ಮತ್ತುಅವಳ ಮೈಮಾಟ ವರ್ಣಿಸುವ ಬಗೆಯೇ ಹೆಚ್ಚು. ಆಮೂಲಕ ಕಾಮವನ್ನು ನೋಡಿ, ಮಾಡಿ ಮತ್ತು ಹಾಡಿ ಅನುಭವಿಸಬೇಕೆನ್ನುವ ಜನಪದರ ಆಶಯಗಳಿಗೆ ಇಲ್ಲಿ ಮನ್ನಣೆಯಿತ್ತು. ಈ ಭಾಗದಲ್ಲಿ ಅಂತಹ 30 ಸಾವಿರಕ್ಕೂಹೆಚ್ಚು ಶೃಂಗಾರ ಹಾಡುಗಳಿದ್ದವು ಎನ್ನುತ್ತಾರೆ ಜಾನಪದತಜ್ಞರು. ಆದರೆ ಹೋಳಿ ಆಚರಣೆಯಲ್ಲಾದ ಬದಲಾವಣೆಶೃಂಗಾರ ಸಾಹಿತ್ಯಕ್ಕೆ ಕುತ್ತು ತುಂದಿದೆ ಎಂಬುದು ಅನೇಕ ಜಾನಪದೀಯ ಅಧ್ಯಯನಗಳಿಂದ ದೃಢಪಟ್ಟಿದೆ.

ಒಂದು ವರ್ಷದಲ್ಲಿ ಒಂದು ದಿನವನ್ನುಕಾಮಪ್ರೇರಣೆ ಮತ್ತು ಪಡ್ಡೆ ಹುಡುಗರಹುಡುಗಾಟಕ್ಕೆ ಮೀಸಲಿಡಲಾಗಿತ್ತು. ಜಾನಪದ ಅಂದಿನ ಸಮಾಜದಕೊಡುಕೊಳ್ಳುವಿಕೆಯನ್ನುತೆಗೆದುಕೊಳ್ಳುತ್ತದೆ. ಬದಲಾವಣೆ ಎಲ್ಲಕ್ಷೇತ್ರಗಳಲ್ಲಿ ಇರುವಂತೆ ಇಲ್ಲಿಯೂಸಾಮಾನ್ಯ. ಆದರೆ ಕಾಮಣ್ಣನ ಹಬ್ಬಮಾದರಿ ಆಚರಣೆಯಾಗುವಂತೆಎಲ್ಲರೂ ನೋಡಿಕೊಳ್ಳಬೇಕಿದೆ. ಡಾ| ವಿ.ಎಲ್‌. ಪಾಟೀಲ, ಜಾನಪದ ತಜ್ಞ

 ಹೋಳಿ ಹುಣ್ಣಿಮೆ ದಿನ ಹಳ್ಳಿಯ ಯುವಕರುಸಿನಿಮಾ ನೋಡಿ, ಸಾರಾಯಿ ಕುಡಿದುಒಂದಿಷ್ಟು ಬಣ್ಣ ಎರಚುತ್ತಿದ್ದಾರಷ್ಟೆ. ಜನಪದರದೃಷ್ಟಿಯಲ್ಲಿ ಹೋಳಿಹುಣ್ಣಿಮೆ ಶೃಂಗಾರಪದಗಳನ್ನುಹಾಡಿ ಸಂಭ್ರಮಿಸುವ ಹಬ್ಬ. ಅದು ಮತ್ತೆ ಪುನರುತ್ಥಾನವಾಗಬೇಕಿದೆ. – ಡಾ| ರಾಮು ಮೂಲಗಿ, ಜಾನಪದ ವಿದ್ವಾಂಸ

 

ಡಾ| ಬಸವರಾಜ್‌ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next