Advertisement
ಬೇಕಾಗುವ ಸಾಮಗ್ರಿಸಣ್ಣಗೆ ಹೆಚ್ಚಿದ ಎಲೆಕೋಸು – 1 ಬೌಲ್
ಪುಟಾಣಿ ಪುಡಿ- 3 ಚಮಚ
ಅರಿಶಿನ ಪುಡಿ – 1 ಚಿಟಿಕೆ
ಏಲಕ್ಕಿ ಪುಡಿ – 1 ಅರ್ಧ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ -3 ಚಮಚ
ಮೈದಾ ಹಿಟ್ಟು – 1ಬೌಲ್
ಬೆಲ್ಲ – 1 ಬೌಲ್
ಮೈದಾ ಹಿಟ್ಟಿಗೆ ಉಪ್ಪು, ಅರಿಶಿನ ಪುಡಿ, ನೀರು ಹಾಕಿ ಕಲಸಿ ಇಡಿ. ಎಲೆಕೋಸನ್ನು ಒಂದು ಕುದಿ ಬೇಯಿಸಿ ಮಿಕ್ಸಿಯಲ್ಲಿ ರುಬ್ಬಿ ಇಟ್ಟುಕೊಳ್ಳಿ, ಅನಂತರ ಒಂದು ಪಾತ್ರೆಯಲ್ಲಿ ಬೆಲ್ಲವನ್ನು ಕುದಿಯಲು ಇಡಿ. ಅದು ಕುದಿಯುತ್ತಿರುವಾಗ ರುಬ್ಬಿದ ಎಲೆಕೋಸು ಹಾಕಿ ತಿರುವಿಕೊಂಡು, ಪುಟಾಣಿ ಪುಡಿ ಮತ್ತು ಏಲಕ್ಕಿ ಪುಡಿಯನ್ನು ಕುದಿಯುತ್ತಿರುವ ಎಲೆಕೋಸಿಗೆ ಹಾಕಿ ಚೆನ್ನಾಗಿ ತಿರುವಿ ಕೆಳಗಿಳಿಸಿಡಿ. ಈ ಮಿಶ್ರಣ ಆರಿದ ಅನಂತರ ಮೈದಾ ಹಿಟ್ಟಿನಿಂದ ಉಂಡೆ ಮಾಡಿ ಅದರೊಳಗೆ ಎಲೆಕೋಸಿನ ಹೂರಣ ತುಂಬಿಸಿ ಲಟ್ಟಿಸಿ ಕಾದ ತವಾದಲ್ಲಿ ಬೇಯಿಸಿದರೆ ರುಚಿ ರುಚಿಯಾದ ಎಲೆಕೋಸಿನ ಹೋಳಿಗೆ ಸವಿಯಲು ಸಿದ್ಧ. ಪ್ರೀತಿ ಭಟ್ ಗುಣವಂತೆ (ಸಂಗ್ರಹ)