Advertisement
ಮಂಗಳೂರಿನ ಕುದ್ರೋಳಿ ದೇವಸ್ಥಾನದ ದಸರಾ ಶೋಭಾಯಾತ್ರೆ ಹಾಗೂ ಮಂಗಳಾದೇವಿ ದೇವಸ್ಥಾನದಲ್ಲಿ ನವರಾತ್ರಿ ರಥೋತ್ಸವವೂ ಇದ್ದ ಕಾರಣ ಜನರ ಓಡಾಟ ಹೆಚ್ಚಾಗಿತ್ತು. ಮಲ್ಪೆ ಬೀಚ್‌ಗೆ ಬೆಂಗಳೂರು, ಮೈಸೂರು, ಮಂಡ್ಯ ಹಾಸನ ಜಿಲ್ಲೆಗಳಿಂದಲೂ ಅಪಾರ ಸಂಖ್ಯೆಯ ಪ್ರವಾಸಿಗರು ಅಗಮಿಸಿದ್ದು, ಬೀಚ್ ಸಂಪರ್ಕದ ರಸ್ತೆಯಲ್ಲೂ ವಾಹನದಟ್ಟಣೆ ಕಂಡುಬಂತು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ 10 ಸಾವಿರಕ್ಕಿಂತಲೂ ಹೆಚ್ಚಿನ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.
ಬೇಲೂರು, ಹಳೆಬೀಡು ಪಟ್ಟಣಗಳಲ್ಲಿ ಹಾಗೂ ಸಕಲೇಶಪುರ ತಾಲೂಕಿನ ರೆಸಾರ್ಟ್‌ಗಳು, ಹೋಂ ಸ್ಟೇಗಳು, ಹೋಟೆಲ್‌ಗಳು ತುಂಬಿ ಹೋಗಿದ್ದವು. ಸಕಲೇಶಪುರ ಪಟ್ಟಣದಲ್ಲಿ ಹಾಸನ ಸಮೀಪದ ಶಾಂತಿಗ್ರಾಮ ಟೋಲ್‌ಗೇಟ್‌ನಲ್ಲಿ ರಾತ್ರಿವರೆಗೂ ಟ್ರಾಫಿಕ್ ಜಾಮ್ ಉಂಟಾಗಿತ್ತು.
Related Articles
ಕೋಲಾರ ಜಿಲ್ಲೆಯ ಹೆಸರಾಂತ ಪ್ರವಾಸಿ ತಾಣ ಕೋಟಿಲಿಂಗೇ ಶ್ವರ ಸ್ವಾಮಿ ಸ ನ್ನಿ ಧಿಗೆ ರವಿವಾರ 10 ಸಾವಿರಕ್ಕೂ ಹೆಚ್ಚು ಮಂದಿ ಪ್ರ ವಾ ಸಿ ಗರು ಭೇಟಿ ನೀಡಿದ್ದಾರೆ. ಕೋಲಾರದ ಅಂತ ರಗಂಗೆ, ಕಾಶಿ ವಿಶ್ವೇಶ್ವರ ದೇವಾಲಯ, ಮುಳಬಾಗಿಲು ತಾ ಲೂ ಕಿನ ಕುರುಡು ಮಲೆ ಗಣೇಶ ದೇವಾಲಯಗಳಿಗೆ ಹೆಚ್ಚು ಭ ಕ್ತರು ಈ ವಾರಾಂತ್ಯದಲ್ಲಿ ಭೇಟಿ ಕೊಟ್ಟಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಕೋಟೆ, ಟಿಪ್ಪು ಜನ್ಮಸ್ಥಳ, ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ, ಮಧುರೆ, ನೆಲಮಂಗಲ ತಾಲೂಕಿನ ಶಿವಗಂಗೆ, ರಾಮದೇವರ ಬೆಟ್ಟ ಮತ್ತಿತರ ಕಡೆ ಸಾಮಾನ್ಯ ದಿನಗಳಿಗಿಂತಲೂ 3 ದಿನಗಳಲ್ಲಿ ಪ್ರವಾಸಿಗರು ಹೆಚ್ಚಿದ್ದರು.
Advertisement
ವಿಶ್ವವಿಖ್ಯಾತ ಹಂಪಿಗೆ ಸಹಸ್ರಾರು ಸಂಖ್ಯೆಯ ಪ್ರವಾಸಿಗರು ಭೇಟಿ ನೀಡಿ, ಪ್ರಮುಖ ಸ್ಮಾರಕ ವೀಕ್ಷಿಸುತ್ತಿದ್ದಾರೆ. ಹೊಸಪೇಟೆ, ಕಮಲಾಪುರ ಹಾಗೂ ಹಂಪಿ ಸುತ್ತಮುತ್ತಲಿನ ಹೋಟೆಲ್‌ಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದವು. 40 ಸಾವಿರಕ್ಕೂ ಅಧಿಕ ಭಕ್ತರಿಂದ ದರ್ಶನ
ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ರವಿವಾರ 40 ಸಾವಿರಕ್ಕೂ ಅಧಿ ಕ ಭಕ್ತರು ಮಠಕ್ಕೆ ಭೇಟಿ ಆಗಮಿಸಿ ರಾಯರ ದರ್ಶನ ಪಡೆದರು.
3 ಕೋಟಿ ರೂ. ಗೂ ಅಧಿಕ ವಹಿವಾಟು ಉತ್ತರ ಕನ್ನಡದ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿತ್ತು. ಮುರುಡೇಶ್ವರ, ಗೋಕರ್ಣ, ದಾಂಡೇಲಿ ಮತ್ತು ಶಿರಸಿಗೆ ಅತೀ ಹೆಚ್ಚು ಪ್ರವಾಸಿಗರು ಆಗಮಿಸಿದ್ದರು. ಗೋಕರ್ಣ, ಮುರುಡೇಶ್ವರ ಮತ್ತು ಶಿರಸಿಯಲ್ಲಿ ಮಾರಿಕಾಂಬೆ ದೇವಸ್ಥಾನಗಳ ಪರಿಸರದಲ್ಲಿ 3 ಕೋಟಿ ರೂ. ಮಿಕ್ಕಿ ವ್ಯಾಪಾರ ವಹಿವಾಟು ಆಗಿದೆ. ಕಾಫಿನಾಡಿಗೆ ಪ್ರವಾಸಿಗರ ದಂಡು
ಕಾಫಿನಾಡು ಚಿಕ್ಕಮಗಳೂರಿನ ಪ್ರವಾಸಿ ತಾಣ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸಿಗರು ಮತ್ತು ಭಕ್ತರ ದಂಡೇ ಹರಿದು ಬಂದಿತ್ತು. ಶೃಂಗೇರಿ ಶಾರದಾಂಬಾ ದೇವಸ್ಥಾನ, ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ, ಕಳಸೇಶ್ವರ ದೇವಸ್ಥಾನ ಸೇರಿದಂತೆ ಇತರೆ ದೇವಾಲಯಗಳಿಗೆ ರಾಜ್ಯದ ಮೂಲೆ- ಮೂಲೆಯಿಂದ ಆಗಮಿಸಿದ ಭಕ್ತರು ದೇವರ ದರ್ಶನ ಪಡೆದರು. ಶಿವಮೊಗ್ಗ ಜಿಲ್ಲೆಯ ಪ್ರವಾಸಿ ತಾಣಗಳಾದ ಜೋಗ, ಸಿಗಂದೂರು, ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮ, ಸಕ್ರೆಬೈಲು ಆನೆ ಬಿಡಾರದಲ್ಲಿ ಭಾರೀ ಸಂಖ್ಯೆಯ ಪ್ರವಾಸಿಗರು ಕಂಡುಬಂದರು. ಶನಿವಾರ 9 ಸಾವಿರಕ್ಕೂ ಅಧಿ ಕ, ಭಾನುವಾರ 8 ಸಾವಿರಕ್ಕೂ ಅಧಿಕ ಪ್ರವಾಸಿಗರು ಜೋಗಕ್ಕೆ ಭೇಟಿ ಕೊಟ್ಟಿದ್ದರು.
ವಿಜಯಪುರ ಜಿಲ್ಲೆಯ ಗೋಳಗುಂಬಜ್, ಬಾರಾಕಮಾನ್, ಇಬ್ರಾಹಿಂ ರೋಜಾ ಸೇರಿದಂತೆ ಅನೇಕ ಪ್ರವಾಸಿ ತಾಣಗಳಲ್ಲಿ ಕಳೆದ ಎರಡೂ¾ರು ದಿನಗಳಲ್ಲಿ ಎಂದಿಗಿಂತ ಹೆಚ್ಚಿನ ಸಂಖ್ಯೆಯ ಜನರು ಕಂಡು ಬಂದರು. ಅಲ್ಲದೇ, ಆಲಮಟ್ಟಿ ಜಲಾಶಯ ಹಾಗೂ ಉದ್ಯಾನವನ ವೀಕ್ಷಣೆಗೂ ಪ್ರವಾಸಿಗರು ಅ ಧಿಕ ಸಂಖ್ಯೆಯಲ್ಲಿ ಆಗಮಿಸಿದ್ದರು. ಬಂಡೀಪುರ ಸಫಾರಿಗೆ 15 ಲಕ್ಷ ರೂ. ಅಧಿಕ ಆದಾಯ
ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ಗೋಪಾಲಸ್ವಾಮಿ ಬೆಟ್ಟ ಹಾಗೂ ಬಂಡೀಪುರದಲ್ಲಿ ಪ್ರವಾಸಿಗರು ಕಿಕ್ಕಿರಿದು ನೆರೆದಿದ್ದರು. ಜಿಟಿಜಿಟಿ ಮಳೆ ಸುರಿಯುತ್ತಿದ್ದರೂ ಸಾವಿರಾರು ಮಂದಿ ಪ್ರವಾಸಿಗರು ಬಂಡೀಪುರ ಸಫಾರಿ ಹಾಗೂ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು, ಪ್ರಕೃತಿ ಸೊಬಗು ಕಣ್ತುಂಬಿಕೊಂಡರು. ಬಂಡೀಪುರ ಸಫಾರಿಗೆ ಶುಕ್ರವಾರ, ಶನಿವಾರ ಮತ್ತು ರವಿವಾರ 3 ದಿನವೂ ಪ್ರತಿನಿತ್ಯ 2 ಸಾವಿರಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡಿದ್ದಾರೆ. ಇದರಿಂದ 15 ಲಕ್ಷಕ್ಕೂ ಅಧಿಕ ಆದಾಯ ಬಂದಿದೆ ಎಂದು ಆರ್‌ಎಫ್ಓ ಮಲ್ಲೇಶ್ ತಿಳಿಸಿದರು. ವಿದೇಶಿ ಪ್ರವಾಸಿಗರಿಂದ ಕೆಆರ್‌ಎಸ್ ವೀಕ್ಷಣೆ
ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯ ಹಾಗೂ ಬೃಂದಾವನ ನೋಡಲು ದೇಶ-ವಿದೇಶಗಳಿಂದ ಪ್ರವಾಸಿಗರು ಆಗಮಿಸಿದ್ದರು. ಕೆಆರ್‌ಎಸ್ ಜಲಾಶಯ ಹಾಗೂ ಬೃಂದಾವನಕ್ಕೆ ಶ್ರೀರಂಗಪಟ್ಟಣ ದಸರಾ ಹಿನ್ನೆಲೆಯಲ್ಲಿ ಆಕರ್ಷಕ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಮಳವಳ್ಳಿಯ ಗಗನಚುಕ್ಕಿ ಜಲಪಾತ ಹಾಗೂ ಶ್ರೀರಂಗಪಟ್ಟಣದ ರಂಗನತಿಟ್ಟು ಪ್ರವಾಸಿ ತಾಣಗಳಿಗೆ ಪ್ರತಿದಿನ 3ರಿಂದ 4 ಸಾವಿರ ಮಂದಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಧರ್ಮಸ್ಥಳದಲ್ಲಿ ಜನಸಂದಣಿ: ಬಿಎಂಟಿಸಿ ವಿಶೇಷ ಬಸ್ ಸೇವೆ
ದಸರಾ ರಜೆಯಿಂದಾಗಿ ರಾಜ್ಯದೆಲ್ಲೆಡೆಯಿಂದ ಭಕ್ತರು ಬೆಳ್ತಂಗಡಿ ತಾಲೂಕಿನ ಪ್ರವಾಸಿ ತಾಣ, ಧಾರ್ಮಿಕ ಸ್ಥಳಗಳಿಗೆ ಆಗಮಿಸಿದ ಪರಿಣಾಮ ಭಕ್ತರ ಸಂಖ್ಯೆ ದ್ವಿಗುಣವಾಗಿದೆ. ರಜೆ ಪ್ರಯುಕ್ತ ಕಳೆದ ಎರಡು ದಿನಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳ, ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರ, ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನ ಸಹಿತ ಇತರ ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಬಸ್‌ಗಳ ಕೊರತೆ ಕಂಡು ಬಂದಿದ್ದು, ಇದಕ್ಕಾಗಿ ಸುಮಾರು 200 ಬಿಎಂಟಿಸಿ ಬಸ್‌ಗಳನ್ನು ಎಲ್ಲ ಧಾರ್ಮಿಕ ಸ್ಥಳಗಳಿಗೆ ಹೆಚ್ಚುವರಿಯಾಗಿ ಬಿಡಲಾಗಿರುವ ಪರಿಣಾಮ ಧರ್ಮಸ್ಥಳದಲ್ಲಿ ರವಿವಾರ ಈ ಬಸ್‌ಗಳು ಕಂಡಿಬಂದವು. ಧರ್ಮಸ್ಥಳ ಸನ್ನಿಧಾನದಲ್ಲಿ ಸಾವಿರಾರು ಭಕ್ತರು ಆಗಮಿಸಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಅನ್ನಪ್ರಸಾದ ಸ್ವೀಕರಿಸಿದರು. ಕ್ಷೇತ್ರದಲ್ಲಿ ನವರಾತ್ರಿ ಪ್ರಯುಕ್ತ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಸಮ್ಮುಖದಲ್ಲಿ ಅಮ್ಮನವರ ಉತ್ಸವ ವಿಶೇಷವಾಗಿ ನೆರವೇರಿತು. ಧರ್ಮಸ್ಥಳದಲ್ಲಿ ಶನಿವಾರ ಹಾಗೂ ರವಿವಾರ ರಸ್ತೆಯುದ್ದಕ್ಕೂ ಹಾಗೂ ಬಸ್ ನಿಲ್ದಾಣಗಳಲ್ಲಿ ಹಲವಾರು ಬಿಎಂಟಿಸಿ (ಬೆಂಗಳೂರು ಸಾರಿಗೆ) ಬಸ್‌ಗಳು ಸಾಲಾಗಿ ನಿಂತಿರುವುದು ಕಂಡು ಬಂತು. ದೇಗುಲ, ಗೊಮ್ಮಟ ಬೆಟ್ಟ, ಮ್ಯೂಸಿಯಂ, ಪಾರ್ಕಿಂಗ್, ಸಹಿತ ಎಲ್ಲೆಡೆ ಭಕ್ತರು ಕಂಡುಬಂದರು. ವಸತಿಗೃಹಗಳು ಭರ್ತಿಯಾಗಿ ಉಜಿರೆ, ಬೆಳ್ತಂಗಡಿ ವರೆಗೆ ಬೇಡಿಕೆ ಕಂಡುಬಂದಿತ್ತು.