Advertisement

ಮನಸೂರೆಗೊಳ್ಳುವ ಹೋಳಿ ಪದಗಳು

12:12 PM Mar 30, 2021 | Team Udayavani |

ಮುಧೋಳ: ಹೋಳಿ ಹುಣ್ಣಿಮೆ…ಹೀಗೆಂದ ಕೂಡಲೇ ಗಂಡಸರೆಲ್ಲ ಸೇರಿಬಾಯಿ ಬಡೆದುಕೊಳ್ಳುವ ಚಿತ್ರಣಒಂದು ಕ್ಷಣ ನಮ್ಮ ಕಣ್ಣಮುಂದೆ ಬಂದು ನಿಲ್ಲುತ್ತದೆ.

Advertisement

ಆದರೆ, ಹಿಂದು ಧರ್ಮದ ಪವಿತ್ರಆಚರಣೆಯಲ್ಲಿ ಒಂದಾಗಿರುವ ಹೋಳಿಹುಣ್ಣಿಮೆ ಕಾಮದಹನ, ಬಣ್ಣದಾಟ, ಕಟ್ಟಿಗೆ, ಬೆರಣಿ ಕಳ್ಳತನ, ಹಲಗೆ ವಾದನಸೇರಿದಂತೆ ಹೋಳಿ ಪದಗಳಿಗೂಪ್ರಸಿದ್ಧವಾಗಿದೆ. ಶಿವರಾತ್ರಿ ಅಮವಾಸ್ಯೆ ಮರುದಿನದಿಂದ ಹದಿನೈದು ದಿನಗಳಕಾಲ ಪ್ರಚಲಿತದಲ್ಲಿರುವ ಹೋಳಿ ಹುಣ್ಣಿಮೆಗೆ ತನ್ನದೇಯಾದ ಭವ್ಯ ಪರಂಪರೆಯಿದೆ.

ಮನಸೂರೆಗೊಳ್ಳುವ ಹೋಳಿ ಪದ:ಅಮವಾಸ್ಯೆಯ ಮರುದಿನದಿಂದಪ್ರತಿದಿನ ರಾತ್ರಿ ಗ್ರಾಮೀಣ ಭಾಗದಜನರು ಹೋಳಿ ಹಬ್ಬದ ಪದಗಳನ್ನುಹಾಡಲು ಶುರುವಿಟ್ಟುಕೊಳ್ಳುತ್ತಾರೆ.ಇತಿಹಾಸ ಸಾರುವ ಕಥೆಗಳು, ಆಯಾಗ್ರಾಮದ ಪ್ರಮುಖ ದೇವರ ಮಹಿಮೆಸಾರುವ ಕಥೆಗಳು, ಸ್ವಾತಂತ್ರ್ಯ ಸಂಗ್ರಾಮಸಾರುವ ಕಥೆಗಳು ಸೇರಿದಂತೆವಿವಿಧ ಬಗೆಯ ಘಟನಾವಳಿಗಳನ್ನುತಿಳಿಸಿಕೊಡುವ ಕಥೆಗಳನ್ನು ಪದಗಳರೂಪದಲ್ಲಿ ಲಯಬದ್ಧವಾಗಿ ಹಾಡುತ್ತಿದ್ದರೆ ಪ್ರತಿಯೊಬ್ಬರೂ ಕಿವಿಗೊಟ್ಟು ಕೇಳಬೇಕೆನಿಸುತ್ತದೆ.

ಹಾಡಿಕೆಯಲ್ಲಿ ಸ್ಪರ್ಧೆ: ಹೋಳಿಹಬ್ಬದ ಪದಗಳ ಹಾಡಿಕೆಯಲ್ಲಿಯೂಸ್ಪರ್ಧೆಯನ್ನು ಕಾಣ ಬಹುದು.ಆದರೆ ಇಲ್ಲಿ ಯಾವುದೇ ರೀತಿಯಬಹುಮಾನಗಳು ಇರುವುದಿಲ್ಲ. ಬದಲಿಗೆಹಾಡುಗಾರರಲ್ಲಿ ನಾವು ಯಾರಿಗೂ ಕಮ್ಮಿಗೂ ಇಲ್ಲವೆಂಬಂತೆ ಸ್ಪರ್ಧೆಮೂಡಿರುತ್ತದೆ. ಎದುರಾಳಿ ಹಾಡುವಹಾಡಿಗೆ ಪಟ್ಟು ಹಾಕುವ ರೀತಿಯಲ್ಲಿ ಹಾಡು ಗಾರಿಕೆಯಲ್ಲಿ ಹಾಡುಗಾರರು ತೊಡಗಿಕೊಂಡಿರುತ್ತಾರೆ. ಈ ರೀತಿ ಸ್ಪರ್ಧಾ ಮನೋಭಾವ ಹೆಚ್ಚಿದಾಗ ರಾತ್ರಿಕಳೆದು ಹಗಲಾದರೂ ಹಾಡಿಕೆಮಾತ್ರ ಮುಗಿದಿರುವುದಿಲ್ಲ. ಒಂದುಗುಂಪಿನ ಹಾಡುಗಾರರು ಮೇಲುಗೈ ಸಾಧಿಸಿದಾಗಲೆಲ್ಲ ಆ ಗುಂಪಿನ ಸದಸ್ಯರು ಕೇಕೆ ಹಾಕಿ ಸಂಭ್ರಮಿಸುವುದು ವಾಡಿಕೆ.

ಕಾಮದಹನದಂದು ಬಲು ಜೋರು: ಹದಿನೈದು ದಿನದ ಹಬ್ಬದ ಸಮಯದಲ್ಲಿ ಪ್ರತಿನಿತ್ಯ ಒಂದುಅಥವಾ ಎರಡು ಗಂಟೆ ಹಾಡಿಕೆಯಲ್ಲಿತೊಡಗುವ ಜನರು ಕಾಮದಹನದಂದುಇಡೀ ರಾತ್ರಿ ಹಾಡಿಕೆಯಲ್ಲಿತೊಡಗಿಕೊಳ್ಳುತ್ತಾರೆ. ಹೋಳಿ ಹುಣ್ಣಿಮೆಹಾಗೂ ಕಾಮದಹನದ ಇತಿಹಾಸಸಾರುವ ಹಾಡಿಕೆಯನ್ನು ರಾತ್ರಿಯಿಡೀಹಾಡುವಲ್ಲಿ ಪುರುಷರು ನಿರತರಾಗಿದ್ದರೆ ಸ್ತ್ರೀಯರು, ಮಕ್ಕಳಾದಿಯಾಗಿಗ್ರಾಮಸ್ಥೆರೆಲ್ಲ ಹಾಡಿಕೆಯ ಅರ್ಥವನ್ನುಅರಿತುಕೊಳ್ಳುವಲ್ಲಿ ಮಗ್ನರಾಗಿರುತ್ತಾರೆ. ಯುವಸಮೂಹದಲ್ಲಿ ಹೆಚ್ಚುತ್ತಿದೆ

Advertisement

ನಿರಾಸಕ್ತಿ: ಆಧುನಿಕ ಭರಾಟೆಯ ಅಬ್ಬರದಲ್ಲಿ ತಲ್ಲೀಣರಾಗಿರುವ ಯುವಸಮೂಹ ಗ್ರಾಮೀಣ ಕಲೆ ಸಂಸ್ಕೃತಿ ಪರಂಪರೆಯನ್ನು ಸಾರುವ ಹೋಳಿ ಪದಕಲಿಕೆಯಲ್ಲಿ ಮಾತ್ರ ಹಿಂದೆ ಬಿದ್ದಿದೆ.ಹಿರಿಯರು ಹಾಡುವಾಗ ಮನಸ್ಸಿಟ್ಟುಕೇಳುವ ಯುವಕರು ಅವುಗಳ ಕಲಿಕೆಹಾಗೂ ಅನುಷ್ಠಾನಕ್ಕೆ ಮಾತ್ರ ಮನಸ್ಸುಮಾಡುತ್ತಿಲ್ಲ. ಇದರಿಂದ ಮುಂದಿನತಲೆಮಾರಿನಲ್ಲಿ ಹೋಳಿ ಪದವನ್ನುಕೇವಲ ಪುಸ್ತಕದಲ್ಲಿ ಓದುವ ಹವ್ಯಾಸಮನೆಮಾಡಿದರೂ ಅಚ್ಚರಿಪಡಬೇಕಿಲ್ಲ.ನಾವು ಹೋಳಿ ಪದವನ್ನುಹಾಡುತ್ತಿದ್ದರೆ ಯುವಜನತೆ ಮನಸ್ಸಿಟ್ಟು ಕೇಳುತ್ತಾರೆ. ಆದರೆ ಅವರುಅವುಗಳನ್ನು ಕಲಿತುಕೊಳ್ಳವುದು, ಹಾಡು ಹಾಡಿಕೆಯಲ್ಲಿ ತೊಡಗಿಕೊಳ್ಳುವಲ್ಲಿ ಮಾತ್ರ ಮುಂದಾಗುತ್ತಿಲ್ಲ. ನಮ್ಮ ಸಂಸ್ಕೃತಿಯ ಪ್ರತೀಕವಾಗಿರುವ ಹೋಳಿ ಪದಗಳನ್ನು ಯುವಕರು ಕಲಿತು ಹಾಡುಗಾರಿಕೆಯಲ್ಲಿ ತೊಡಗಿಕೊಂಡರೆ ಸಂತಸವಾಗುತ್ತದೆ ಎಂದು ತಮ್ಮ ಮನದಾಸೆ ಹೊರಹಾಕುತ್ತಾರೆ. ಹಲಗಲಿಯ ಹಾಡುಗಾರರಾದಹನಮಂತ ಜಡಗನ್ನವರ, ಚನ್ನಬಸಪ್ಪಲಕ್ಷ್ಮಪ್ಪ ಮುತ್ತೂರ, ಸದಪ್ಪ ಹಿರಕನ್ನವರ, ಮಲ್ಲಪ್ಪ ಕೊಳ್ಳನ್ನವರ.

ಹೋಳಿಹುಣ್ಣಿಮೆಯ ಸಂಭ್ರಮದಲ್ಲಿ ಹೋಳಿ ಪದ ಹಾಡುವುದೇ ಒಂದು ಸಂಭ್ರಮ. ನಿತ್ಯ ರಾತ್ರಿ ಹಾಡಿಕೆಯಲ್ಲಿ ತೊಡಗಿಕೊಂಡಿದ್ದರೆ ನಮಗರಿವಿಲ್ಲದಂತೆ ಹಾಡುಗಳು ಒಂದಾದ ನಂತರ ನಮ್ಮ ಬಾಯಿಯಲ್ಲಿ ಹೊರಬರುತ್ತವೆ. ನಮ್ಮ ಮುಂದಿನ ತಲೆಮಾರಿನ ಯುವಕರು ಇಂತಹ ಸುಂದರ ಹಾಡಿಕೆ ಮುಂದುವರಿಸಿಕೊಂಡು ಹೋಗಬೇಕು ಎಂಬುದೇ ನಮ್ಮ ಆಶಯವಾಗಿದೆ.  -ಹನಮಂತ ಪೂಜಾರಿ, ಹಲಗಲಿಯ ಹಿರಿಯ ಹಾಡುಗಾರ

ನಮ್ಮ ಸಂಸ್ಕೃತಿ ಸಾರುವ ಹೋಳಿ ಹಬ್ಬದ ಪದಗಳನ್ನು ಕೇಳಲುಸುಮಧುರವಾಗಿರುತ್ತವೆ. ಈ ರೀತಿಯ ಹಾಡುಗಾರಿಕೆಯ ಪರಂಪರೆಯನ್ನುನಮ್ಮ ಯುವ ಪೀಳಿಗೆಯೂ ಮುಂದುವರಿಸಿಕೊಂಡು ಹೋಗಬೇಕು. ಇಂತಹಹಾಡುಗಳಿಗೆ ಹೋಳಿ ಹಬ್ಬವನ್ನೂ ಹೊರತುಪಡಿಸಿ ವಿವಿಧ ಸಂದರ್ಭದಲ್ಲಿಯೂ ಹೋಳಿ ಹಬ್ಬದ ಹಾಡುಗಾರಿಕೆಗೆ ಸೂಕ್ತ ವೇದಿಕೆ ಕಲ್ಪಿಸಿಕೊಟ್ಟರೆ ಹೆಚ್ಚು ಅರ್ಥಪೂರ್ಣವಾಗಿರುತ್ತದೆ. – ಹನಮಂತ ಕಳಸಕೊಪ್ಪ, ಶಿಕ್ಷಕರು

 

­ಗೋವಿಂದಪ್ಪ ತಳವಾರ

Advertisement

Udayavani is now on Telegram. Click here to join our channel and stay updated with the latest news.

Next