Advertisement
ಕಳೆದ ವರ್ಷ ಕೋವಿಡ್ ಭೀತಿಯಿಂದ ಹಬ್ಬಕಳೆಗುಂದಿತ್ತು. ಅದಕ್ಕೂ ಹಿಂದಿನ ವರ್ಷ ಕಿಲ್ಲರ್‌ಕಟ್ಟಡ ದುರಂತದಿಂದ ಹೋಳಿ ಸಂಭ್ರಮವೇ ಮಾಯವಾಗಿತ್ತು. ಇದೀಗ ಕೋವಿಡ್ ಅಲೆಯ 2ನೇಆತಂಕ ಜೋರಾಗಿದ್ದರೂ ಇದಕ್ಕೆ ಮಣೆ ಹಾಕದ ಜನರು ಹಬ್ಬವನ್ನು ಮತ್ತಷ್ಟು ಜೋರಾಗಿಯೇ ಆಚರಿಸಿದ್ದಾರೆ.
Related Articles
Advertisement
ನಗರದ ಆಯುರ್ಧಾಮದಲ್ಲಿ ಡಾ|ಮಹಾಂತಸ್ವಾಮಿ ಹಿರೇಮಠ ಅವರು ಮಕ್ಕಳಿಗೆ ನೈಸರ್ಗಿಕ ಬಣ್ಣ ತಯಾರುಮಾಡುವ ಬಗೆ ಹೇಳಿ ಕೊಟ್ಟು, ಆ ಬಣ್ಣಗಳಿಂದ ಓಕುಳಿಆಡುವಂತೆ ಮಾಡಿದರು. ಇದರ ಜತೆಗೆ ಪರಿಸರ ಸ್ನೇಹಿಕಲಾವಿದ ಮಂಜುನಾಥ ಹಿರೇಮಠ ಅವರ ನೇತೃತ್ವದಲ್ಲಿಅವರ ಬಡಾವಣೆಯಲ್ಲೂ ಅರಿಶಿಣ, ಕುಂಕುಮದಬಣ್ಣಗಳಿಂದ ಬಣ್ಣದಾಟವಾಡಿ ಸಂಭ್ರಮಿಸಲಾಯಿತು.ಕೆಲ ವ್ಯಕ್ತಿಗಳು ಗಾಜಿನ ಬಣ್ಣ, ಕಪ್ಪ ಬಣ್ಣ, ಯರೆಎಣ್ಣೆ, ವಾರನೀಸ್ ಇತ್ಯಾದಿ ರಾಸಾಯನಿಕ ಮಿಶ್ರಿತಬಣ್ಣ ಬಳಸಿ ಓಕುಳಿ ಆಡಿದರು. ಹಾಸ್ಟೆಲ್, ಪಿಜಿಗಳಲ್ಲಿಯುವತಿಯರು, ವಟಾರಗಳಲ್ಲೂ ಕೂಡ ಅಜ್ಜಿಯರು ಬಣ್ಣದಲ್ಲಿ ಮಿಂದೆದ್ದರು.
ಮರಾಠಾ ಕಾಲೋನಿ, ಬೂಸಗಲ್ಲಿ, ಗಾಂಧಿಚೌಕ,ಕಾಮನಕಟ್ಟಿ, ಮ್ಯಾದಾರ ಓಣಿ, ಮುರುಘಾಮಠ,ಮಟ್ಟಿಪ್ಲಾಟ್, ಹೊಸ ಎಪಿಎಂಸಿ ಬಳಿಯ ವಿಜಯನಗರ,ಬೆಂಡಿಗೇರಿ ಓಣಿ,ಯಾಲಕ್ಕಿ ಶೆಟ್ಟರ ಕಾಲೋನಿ,ಗೌಳಿಗಲ್ಲಿಯಲ್ಲೂ ಸಂಭ್ರಮದಿಂದ ಆಚರಿಸಲಾಯಿತು.ಬೆಳಗ್ಗೆಯಿಂದ ನಗರದ ವಿವಿಧ ಓಣಿಯಲ್ಲಿ ಕಾಮದಹನದ ಮೂಲಕ ಆರಂಭಗೊಂಡ ಬಣ್ಣದಾಟದ ಹೋಳಿಹಬ್ಬಕ್ಕೆ ಸಂಜೆ ವೇಳೆಗೆ ಮುರುಘಾಮಠದ ಕಾಮದಹನ ಮೂಲಕ ತೆರೆ ಎಳೆಯಲಾಯಿತು. ಬಣ್ಣದಾಟ ನಿಮಿತ್ತ ನಗರದ ವಿವಿಧ ಕಡೆಗಳಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.
ಬೈಕ್ ಮೇಲೆ ಹೊರಟಿದ್ದ ಯುವಕ ಬಿದ್ದು ಮೃತಪಟ್ಟಿದ್ದು ಹಾಗೂ ಜಗಳಾಟದಲ್ಲಿ ತೊಡಗಿದ್ದ ಯುವಕರನ್ನು ಚದುರಿಸಲು ಪೊಲೀಸರು ಲಾಠಿ ಬೀಸಿದ್ದುಬಿಟ್ಟರೆ ಸಂಜೆಯವರೆಗೂಯಾವುದೇ ಅಹಿತಕರ ಘಟನೆ ನಡೆಯದೇಬಣ್ಣದಾಟ ಬಹುತೇಕ ಶಾಂತಿಯುತವಾಗಿ ನಡೆಯಿತು.ಸಣ್ಣಪುಟ್ಟ ವ್ಯಾಪಾರ, ಕಿರಾಣಿ-ತರಕಾರಿ ವ್ಯಾಪಾರರಂಗಪಂಚಮಿ ನಿಮಿತ್ಯ ಸೋಮವಾರ ಬಹುತೇಕಉದ್ಯಮ ಸ್ಥಗಿತಗೊಂಡಿತ್ತು. ಹೋಟೆಲ್ ಬಂದ್‌ನಿಂದಊಟೋಪಚಾರಕ್ಕೆ ಹಲವರು ಪರದಾಡಿದರು.
ಇನ್ನು ಕೆಲ ಗ್ರಾಮಗಳಲ್ಲಿ ಯುವಕರು ಟ್ರ್ಯಾಕ್ಟರ್‌ನಲ್ಲಿನಡಿ.ಜೆ.ಸೌಂಡ್‌ಗಳಿಗೆ ಜನಪದ ಹಾಡುಗಳನ್ನು ಹಾಕಿ ಡಾನ್ಸ್‌ಮಾಡುವ ದೃಶ್ಯ ಕಂಡು ಬಂತು. ಇನ್ನು ಕೆಲ ಕಡೆಗಳಲ್ಲಿ ಯುವಕರು ಮಾವಿನ ತೋಟಕ್ಕೆ ತೆರಳಿ ಮದ್ಯಪಾನ ಗೋಷ್ಠಿಗಳಲ್ಲಿ ಭಾಗಿಯಾಗಿದ್ದು ಗೋಚರಿಸಿತು.ಇನ್ನುಳಿದಂತೆ ಹೋಳಿಗೆ ಊಟ, ಕೆಲ ಕಡೆಗಳಲ್ಲಿ ಜೂಜಾಟದಲ್ಲಿ ಹಳ್ಳಿಗರು ಭಾಗಿಯಾಗಿದ್ದು ಕಂಡು ಬಂತು. ಕೆಲವು ಹಳ್ಳಿಗಳಲ್ಲಿ ಕಾಮ ದಹನಕ್ಕೆ ಕುಳ್ಳು ಮತ್ತು ಕಟ್ಟಿಗೆ ಬದಲು ಟೈರ್ ಬಳಸಿದ್ದು ಕಂಡು ಬಂತು.