Advertisement

ನಗರದಲ್ಲಿ ಹೋಳಿ ರಂಗು

12:26 PM Mar 03, 2018 | Team Udayavani |

ಬೆಂಗಳೂರು: ಕಾಮನ ಹುಣ್ಣಿಮೆ, ವಸಂತ ಹುಣ್ಣಿಮೆ, ಹೋಳಿ ಹುಣ್ಣಿಮೆ ಇತ್ಯಾದಿ ಹೆಸರುಗಳಿಂದ ಕರೆಯಲ್ಪಡುವ “ಬಣ್ಣಗಳ ಹಬ್ಬ’ ಶುಕ್ರವಾರ ನಗರದಲ್ಲಿ ರಂಗೇರಿಸಿತ್ತು. ಮಾಲ್‌ಗ‌ಳು, ಎಂ.ಜಿ. ರಸ್ತೆ, ಬ್ರಿಗೇಡ್‌ ರಸ್ತೆ ಸೇರಿದಂತೆ ಉತ್ತರ ಭಾರತೀಯರು ಹೆಚ್ಚು ವಾಸಿಸುವ ಪ್ರದೇಶಗಳು ಬಣ್ಣಗಳ ರಂಗಿನಲ್ಲಿ ಮಿಂದೆದ್ದವು. ಕೆಲವು ಖಾಸಗಿ ಹೊಟೇಲ್‌ಗ‌ಳಲ್ಲಿ ಹೋಳಿ ಹಬ್ಬದ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

Advertisement

ಐಟಿ ಉದ್ಯೋಗಿಗಳು, ಯುವಕ-ಯುವತಿಯವರು ಬೆಳಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಹೋಳಿ ಹಬ್ಬದ ಸಂಭ್ರಮದಲ್ಲಿ ತೊಡಗಿಸಿಕೊಂಡಿದ್ದರು. ಬಣ್ಣಗಳಲ್ಲಿ ಮಿಂದೆದ್ದ ಇವರು ಮಧ್ಯಾಹ್ನ ಬಿಸಿಲು ಏರುತ್ತಿದ್ದಂತೆ ತಂಪು ತಾಣಗಳತ್ತ ಮುಖ ಮಾಡಿದರು. ಸಂಜೆಯ ಪಾರ್ಟಿಗಳು ಬಣ್ಣದ ಹಬ್ಬಕ್ಕೆ ಮತ್ತಷ್ಟು ಮೆರಗು ಕೊಟ್ಟಿತು. ಯಾರ ಮೇಲೂ ಬಲವಂತವಾಗಿ ಬಣ್ಣ ಹಾಕಬಾರದು.

ಹೋಳಿ ಸಂಭ್ರಮದಲ್ಲಿ ಪಾಲ್ಗೊಳ್ಳಲು ಒತ್ತಾಯಪಡಿಸಬಾರದು ಎಂಬ ಕಾರಣಕ್ಕೆ ಶಾಲಾ ಕಾಲೇಜುಗಳು, ಧಾರ್ಮಿಕ ಸ್ಥಳಗಳು ಸೇರಿದಂತೆ ಆಯಾಕಟ್ಟಿನ ಕೆಲವೊಂದು ಸ್ಥಳಗಳಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದರು. ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿದ್ದು, ಶುಕ್ರವಾರ ಒಂದೆರಡು ವಿಷಯಗಳ ಪರೀಕ್ಷೆ ಇದ್ದಿದ್ದರಿಂದ ಪರೀಕ್ಷಾ ಕೇಂದ್ರ ಮತ್ತು ಅದರ ಸುತ್ತ ಬಣ್ಣದಾಟಕ್ಕೆ ಪೊಲೀಸರು ಅವಕಾಶ ಕೊಟ್ಟಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next