ಶಿವಮೊಗ್ಗ: ಕೋವಿಡ್ ಹಿನ್ನೆಲೆಯಲ್ಲಿ ರಂಗಿನಾಟಕ್ಕೆ ಶಿವಮೊಗ್ಗ ನಗರದಲ್ಲಿ ಸ್ಪಲ್ಪ ಬ್ರೇಕ್ ಬಿದ್ದಿತ್ತು. ಕಳೆದವರ್ಷಗಳಿಗೆ ಹೋಲಿಸಿದರೆ ಈ ಬಾರಿ ಬಣ್ಣದೋಕುಳಿಸಂಭ್ರಮ ಜೋರಾಗಿರಲಿಲ್ಲ. ಆದರೂ ಯುವಕರ, ಮಕ್ಕಳ ಉತ್ಸಾಹಕ್ಕೆ ಕೊರತೆ ಇರಲಿಲ್ಲ. ಬಹುತೇಕ ನಗರದ ಎಲ್ಲಾ ಬಡಾವಣೆಗಳಲ್ಲಿಯೂ ಪಾರ್ಕ್‌ಗಳ ಬಳಿ, ಓಣಿಗಳು, ಮನೆಗಳ ಮುಂಭಾಗದಲ್ಲಿ ಯುವಕ-ಯುವತಿಯರಗುಂಪು ಪರಸ್ಪರ ಬಣ್ಣ ಎರಚಿ ಬಣ್ಣದಾಟ ಆಡಿ ಸಂಭ್ರಮಿಸಿದರು.
ಸಾಮೂಹಿಕ ಹೋಳಿ ಆಚರಣೆ ನಿಷೇಧಿಸಿದ್ದರಿಂದಎಲ್ಲಾ ಬಡಾವಣೆಯಲ್ಲೂ ಪೊಲೀಸರು ಬಿಗಿಬಂದೋಬಸ್ತ್ ಏರ್ಪಡಿಸಿದ್ದರು. ಕೆಲವೆಡೆ ಯುವಕರು ಗುಂಪುಗೂಡುತ್ತಿದ್ದಂತೆ ಪೊಲೀಸರು ಅವರೆಲ್ಲರಿಗೂ ಎಚ್ಚರಿಕೆನೀಡಿ ಕಳುಹಿಸುತ್ತಿದ್ದರು. ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಮದ್ಯ ಮಾರಾಟ ಇರಲಿಲ್ಲ.
ಅನೇಕ ಕಡೆ ಮಡಕೆಗಳನ್ನು ಕಟ್ಟಿ ಮಕ್ಕಳು ಮತ್ತು ಯುವಕರು ಸಾಹಸ ಕ್ರೀಡೆ ಆಡಿ ಸಂಭ್ರಮಿಸಿದರು. ಗಾಂಧಿಬಜಾರಿನ ತುಳಜಾ ಭವಾನಿ, ಬಸವೇಶ್ವರ ದೇವಸ್ಥಾನ, ಯಲ್ಲಮ್ಮ ದೇವಸ್ಥಾನ ಬಳಿ ಸೇರಿ ಹಲವು ಕಡೆ ಮನ್ಮಥನಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಕೆಲವೆಡೆ ಮೊಟ್ಟೆಒಡೆದು ತಲೆಗೆ ಹಚ್ಚುತ್ತಿದ್ದ ದೃಶ್ಯ ಮತ್ತು ಸಣ್ಣ ಮಕ್ಕಳುಮನೆ ಮಹಡಿ ಮೇಲೆ ಪಿಚಕಾರಿಗಳಲ್ಲಿ ಬಣ್ಣ ತುಂಬಿಸಿಂಪಡಿಸುತ್ತಿದ್ದ ದೃಶ್ಯಗಳು ಕಂಡುಬಂದವು. ಮಹಿಳೆಯರುತಮ್ಮ ಮನೆಗಳ ಮುಂದೆಯೇ ನಿಂತು ಪರಸ್ಪರ ಬಣ್ಣ ಹಚ್ಚಿಹಬ್ಬದ ಶುಭಾಶಯ ಕೋರಿದರು. ಎಂದಿನಂತೆ ಗಾಂಧಿ ಬಜಾರ್‌ನಲ್ಲಿ ಹೋಳಿ ಹಬ್ಬಕ್ಕೆ ಹೆಚ್ಚು ಒತ್ತು ಕೊಡಲಾಗಿತ್ತು. ಕೋವಿಡ್ ಎರಡನೇ ಅಲೆ ಹೆಚ್ಚುವ ಭೀತಿಯಿಂದ ಸಾಮೂಹಿಕ ಬಣ್ಣದಾಟ ನಿಷೇಧಿಸಿದ್ದರೂ ನಗರದ ಕೆಲವೆಡೆ ಹೋಳಿ ಹಬ್ಬದ ಸಂಭ್ರಮ ಕಂಡುಬಂತು.
ಕಾಮದಹನ-ರಂಗಿನಾಟ :
ಭದ್ರಾವತಿ: ಹೋಳಿಹಬ್ಬದ ಪ್ರಯುಕ್ತ ನಗರದ ವಿವಿಧ ಭಾಗಗಳಲ್ಲಿಪ್ರತಿಷ್ಠಾಪಿಸಲಾಗಿದ್ದ ಮನ್ಮಥಮೂರ್ತಿಯ ಮೆರವಣಿಗೆಯನ್ನುಸೋಮವಾರ ಆಯಾ ಬಡಾವಣೆಯಲ್ಲಿನಡೆಸಿ ನಂತರ ದಹನ ಮಾಡಿ ಪರಸ್ಪರ ಬಣ್ಣ ಎರಚುವ ಮೂಲಕ ಹೋಳಿ ಹಬ್ಬ ಆಚರಿಸಲಾಯಿತು.
ಕೋವಿಡ್ ಕಾರಣ ಮೆರವಣಿಗೆಗೆ ಅವಕಾಶ ನೀಡದ್ದರಿಂದ ಕಾಮನಮೂರ್ತಿಯನ್ನು ಹಳೇನಗರದ ಬ್ರಾಹ್ಮಣರಬೀದಿ, ಕುಂಬಾರಬೀದಿ,ಪೇಟೆಬೀದಿಯಲ್ಲಿ ಹಾಗೂ ಭೂತನಗುಡಿಯಲ್ಲಿ ಆಯಾ ಬಡಾವಣೆಗಳ ಬೀದಿಯಲ್ಲಿ ಪ್ರತ್ಯೇಕವಾಗಿ ನಡೆಸಿ ಅಲ್ಲಲ್ಲಿ ಕಾಮದಹನ ಮಾಡಲಾಯಿತು.ಯುವಕರು, ಯುವತಿಯರು, ಮಕ್ಕಳು,ಮಹಿಳೆಯರು, ಪುರುಷರು ಪರಸ್ಪರ ಬಣ್ಣಎರಚುವ ಮೂಲಕ ಹೋಳಿ ಆಚರಿಸಿ ಸಂಭ್ರಮಿಸಿದರು.