Advertisement

ಬೀದಿ ದೀಪ ಬೆಳಗುತ್ತಿಲ್ಲ, ಗುಣಮಟ್ಟದ ಮಾಂಸ ಸಿಗುತ್ತಿಲ್ಲ

02:03 PM Feb 24, 2021 | Team Udayavani |

ಹೊಳೆನರಸೀಪುರ: ಪಟ್ಟಣದ ಬೀದಿ ದೀಪಗಳ ನಿರ್ವಹಣೆ ಸಮರ್ಪಕವಾಗಿ ಮಾಡದ ಕಾರಣ, ನಾಗರಿಕರ ಓಡಾಟಕ್ಕೆ ತೀವ್ರ ತೊಂದರೆ ಆಗಿದೆ. ಕೂಡಲೇ ಹೊಸದಾಗಿ ಟೆಂಡರ್‌ ಕರೆದು ದುರಸ್ತಿಗೆಸೂಕ್ತ ಕ್ರಮಕೈಗೊಳ್ಳಬೇಕೆಂದು ಪುರಸಭೆ ಸದಸ್ಯರು ಒಕ್ಕೂರಲಿನಿಂದ ಆಗ್ರಹಿಸಿದರು.

Advertisement

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಸಿ.ಜಿ.ವೀಣಾ ಅವರ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಸಭೆ ಆರಂಭವಾಗುತ್ತಿದ್ದಂತೆ, ಸದಸ್ಯರು ಎದ್ದುನಿಂತು ಇತ್ತೀಚೆಗೆ ಬೀದಿ ದೀಪಗಳ ನಿರ್ವಹಣೆ ಸರಿಯಲ್ಲದೆ, ಪಟ್ಟಣದ ಮುಖ್ಯರಸ್ತೆ, ಬಡಾವಣೆಗಳ ಬೀದಿಗಳ ದೀಪಗಳುಬೆಳಗುತ್ತಿಲ್ಲ, ಇದರಿಂದ ಜನ ಕತ್ತಲಲ್ಲಿಕಳೆಯುವಂತಾಗಿದೆ ಎಂದು ಆರೋಪಿಸಿದರು. ಗುತ್ತಿಗೆದಾರರ ಬದಲಿಸಿ: ಈ ಬೀದಿ ದೀಪಗಳನಿರ್ವಹಣೆ ಹೊಣೆ ಹೊತ್ತಿರುವ ಗುತ್ತಿಗೆದಾರರಿಗೆಮಾಸಿಕ 1.30 ಲಕ್ಷ ರೂ. ಬಿಲ್‌ ಪಾವತಿಆಗುತ್ತಿದೆ. ಆದರೆ, ಮೂರು ನಾಲ್ಕು ತಿಂಗಳಿಂದ ಬೀದಿ ದೀಪಗಳ ನಿರ್ವಹಣೆ ಇಲ್ಲದೆ, ಕತ್ತಲೆಯಲ್ಲೇ ಜನ ಓಡಾಡುವಂತಾಗಿದೆ.ಗುತ್ತಿಗೆದಾರನ ವಾರ್ಷಿಕ ಅವಧಿಯೂ ಮುಗಿದಿರುವ ಕಾರಣ, ಹೊಸದಾಗಿ ಟೆಂಡರ್‌ ಕರೆಯುವಂತೆ ಒತ್ತಾಯಿಸಿದರು.

ರೈತರಿಂದ ಸುಂಕ ವಸೂಲಿ ಬೇಡ: ಮುಂದಿನ ವರ್ಷ ಪಟ್ಟಣದಲ್ಲಿ ಸಂತೆ ಸುಂಕ, ಬೀದಿ ಸುಂಕದ ಟೆಂಡರ್‌ ಕರೆಯಬೇಕಿದೆ. ಗ್ರಾಮೀಣ ಭಾಗದಿಂದ ರೈತರು ಮಾರಾಟಕ್ಕೆ ತರುವವಸ್ತುಗಳಿಗೆ ಸುಂಕ ವಸೂಲಿ ಮಾಡಬಾರದುಎಂದು ಸದಸ್ಯರಾದ ಕೆ.ಶ್ರೀಧರ, ಶಿವಣ್ಣ ಒತ್ತಾಯಿಸಿದರು. ಸಂತೆ ಸುಂಕ ಪ್ರತಿ ವರ್ಷ ಟೆಂಡರ್‌ ನಡೆಯುತ್ತಿದ್ದು, ಅದು ಎಂದಿನಂತೆ ಮುಂದುವರಿಯಲಿದೆ ಎಂದು ಪ್ರಭಾರ ಮುಖ್ಯಾಧಿ ಕಾರಿ ಶಾಂತಲಾ ಸಭೆಗೆ ತಿಳಿಸಿದರು.

ಗುಣಮಟ್ಟದ ಮಾಂಸ ದೊರಕುತ್ತಿಲ್ಲ: ಪಟ್ಟಣದಲ್ಲಿ ಗುಣಮಟ್ಟದ ಮಾಂಸ ಸಿಗದ ಕಾರಣಕ್ಕೆ ಗ್ರಾಹಕರು ಪಕ್ಕದ ಚನ್ನರಾಯಪಟ್ಟಣದಿಂದ ಖರೀದಿಸುತ್ತಿದ್ದಾರೆ. ಜೊತೆಗೆ ಮನಬಂದಂತೆ ಬೆಲೆ ನಿಗದಿಪಡಿಸಲಾಗುತ್ತಿದೆ. ಹಿಂದೆ ಪುರಸಭೆಯಿಂದ ಟೆಂಡರ್‌ ಪಡೆದ ಮಾಂಸದಂಗಡಿ ಮಾಲಿಕ, ಇಂತಿಷ್ಟು ಬೆಲೆ ಎಂದು ಗೊತ್ತುಪಡಿಸುತ್ತಿದ್ದರು. ಆದರೆ, ಈಗ ಗುತ್ತಿಗೆ ಪಡೆದವರು ಹಬ್ಬ ಹರಿದಿನಬಂದರೆ ಸಾಕು ಬೆಲೆ ದುಪ್ಟಟ್ಟು ಮಾಡುತ್ತಿದ್ದಾರೆ.ಜೊತೆಗೆ ಪಟ್ಟಣದಲ್ಲಿ ಮಾಂಸದಂಗಡಿ ಇರುವುದೇ ಬೆರಳೆಣಿಕೆಯಷ್ಟು. ಮತ್ತಷ್ಟು ಅಂಗಡಿ ತೆರೆಯಲು ಅವಕಾಶ ಮಾಡಿಕೊಡುವ ಜೊತೆಗೆ ಗುಣಮಟ್ಟದ ಮಾಂಸ ಮಾರಾಟಕ್ಕೆ ಮಾಲಿಕರಿಗೆ ತಾಕೀತು ಮಾಡುವಂತೆ ತಿಳಿಸಿದರು.

ಉದ್ದಿಮೆ ಶುಲ್ಕ ಪರಿಷ್ಕರಣೆಗೆ ವಿರೋಧ: ಪಟ್ಟಣದ ವಿವಿಧ ಉದ್ದಿಮೆಗಳಿಂದ ಪಡೆಯುವ ಶುಲ್ಕವನ್ನು ಪುರಸಭೆ ಈ ವರ್ಷ ಪರಿಷ್ಕರಿಸಿದ್ದು, ನಾಲ್ಕು ಪಟ್ಟು ಹೆಚ್ಚಿಸಲಾಗಿದೆ. ಇದರಿಂದ ಉದ್ದಿಮೆದಾರರಿಗೆ ತೊಂದರೆ ಆಗಲಿದೆ. ಅಲ್ಲದೆ, ಜನರು ನಮಗೆ ಮನಬಂದಂತೆ ಬೈಯುತ್ತಿದ್ದಾರೆ. ಶುಲ್ಕ ಪರಿಷ್ಕರಣೆಗೆ ತಮ್ಮ ವಿರೋಧವಿದೆ, ಹಿಂದಿನ ಶುಲ್ಕವನ್ನೇ ಮುಂದುವರಿಸಬೇಕೆಂದು ಹಿರಿಯ ಸದಸ್ಯ ಶ್ರೀಧರ್‌ ಹೇಳಿದರು.

Advertisement

ಸಭೆಯಲ್ಲಿ ಉಪಾಧ್ಯಕ್ಷೆ ತ್ರಿಲೋಚನಾ ಉಪಸ್ಥಿತರಿದ್ದರು. ಪುರಸಭೆ ಸಿಬ್ಬಂದಿ ರಮೇಶ್‌ ಸಭೆಗೆ ಮಾಹಿತಿ ನೀಡುವಲ್ಲಿ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next