ಹೊಳೆನರಸೀಪುರ : ಶುಕ್ರವಾರ ಮಧ್ಯ ರಾತ್ರಿ ಪಟ್ಡಣದ ಹೃದಯ ಭಾಗದ ಸುಭಾಷ್ ಸರ್ಕಲ್ ನಲ್ಲಿ ಎಂಟು ಅಂಗಡಿಗಳಲ್ಲಿ ಸರಣಿ ಕಳವು ಪ್ರಕರಣ ನಡೆದು ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣಗೊಂಡಿದ್ದು ಇದರ ಬೆನ್ನಲ್ಲೇ ಶನಿವಾರ ಮತ್ತೆ ಕಳ್ಳರು ತಮ್ಮ ಕೃತ್ಯ ಮೆರೆದಿದ್ದಾರೆ.
ಈ ಘಟನೆ ನಡೆದು ಇಪ್ಪತ್ತನಾಲ್ಕು ಗಂಟೆ ಕಳೆಯುವಷ್ಟರಲ್ಲಿ ಶನಿವಾರ ರಾತ್ರಿ ಕಳ್ಳರ ತಂಡ ಪಟ್ಟಣದ ಚಿಟ್ಟನಹಳ್ಳಿ ಬಡಾವಣೆ ಅಣ್ಷಾಜಿಗೌಡ ಅವರ ಮನೆಯ ಬಾಗಿಲು ಮುರಿದು ಮನೆಯೊಳಗೆ ಇದ್ದ ಎರಡು ಲಕ್ಷ ನಗದು ಹಣ, ಸುಮಾರು ಎರಡು ಕೆಜಿಯಷ್ಟು ಬೆಳ್ಳಿ ಸಾಮಗ್ರಿ ಕಳವುಗೈದಿದ್ದಾರೆ.
ಅಲ್ಲದೆ ಮನೆ ಕಾವಲಿಗೆ ಇದ್ದ ನಾಯಿಯ ಮೇಲೆ ಕಬ್ಬಿಣದ ಸಲಾಕೆಯಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಘಟನೆ ಬಗ್ಗೆ ಬಡಾವಣೆಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದು ಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಖಾಕಿ ಪಡೆ ವಿಫಲವಾಗಿರುವುದೇ ಇದಕ್ಕೆ ಕಾರಣವೆಂದು ದೂರಿದ್ದಾರೆ.
ಇದನ್ನೂ ಓದಿ : ರಾಹುಲ್- ಸೋನಿಯಾ ಒಪ್ಪುತ್ತಿಲ್ಲ, ಪ್ರಿಯಾಂಕಾ ಕಡೆ ಒಲವಿಲ್ಲ: ಯಾರಿಗೆ ಸಿಗಲಿದೆ ಕೈ ಗದ್ದುಗೆ?