ಹೊಳೆನರಸೀಪುರ: ಪಟ್ಟಣವನ್ನು ಜೂ.1ರಿಂದ ಪ್ಲಾಸ್ಟಿಕ್ ಮುಕ್ತ ಪಟ್ಟಣವನ್ನಾಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಪುರಸಭೆ ಕ್ರಮ ಕೈಗೊಂಡಿದೆ.
ಕಳೆದ 15 ದಿನಗಳ ಹಿಂದೆ ಪುರಸಭೆ ಮತ್ತು ಉಪವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮತ್ತು ವಿವಿಧ ಇಲಾಖೆಗಳು ಪುರಸಭೆಯಲ್ಲಿ ಸಭಾಂಗಣದಲ್ಲಿ ಪಟ್ಟಣದ ವರ್ತಕರು ಮತ್ತು ವಿವಿಧ ಸಂಘ ಸಂಸ್ಥೆಗಳ ಸಭೆ ಕರೆದು ಹೊಳೆ ನರಸೀಪುರ ಪಟ್ಟಣವನ್ನು ಪ್ಲಾಸ್ಟಿಕ್ ಮುಕ್ತವಾಗಿಸುವ ನಿಟ್ಟಿನಲ್ಲಿ ಸಭೆ ನಡೆಸಿದ್ದರು.
ಅಂದು ಸಭೆಯಲ್ಲಿ ಉಪವಿಭಾಗಾಧಿಕಾರಿ ಡಾ.ಎಚ್.ಎಲ್. ನಾಗರಾಜು ಅವರು ಕೂಡಲೇ ಪಟ್ಟಣದಲ್ಲಿ ಪ್ಲಾಸ್ಟಿಕ್ ನಿಷೇಧವನ್ನು ಅನುಷ್ಠಾನಕ್ಕೆ ತರಲು ಮುಂದಾಗಿದ್ದರು.
ಸಭೆಯಲ್ಲಿ ಹಾಜರಿದ್ದ ಪಟ್ಟಣದ ವರ್ತಕರ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ಮಾತನಾಡಿ, ಏಕಾಏಕಿ ಪ್ಲಾಸ್ಟಿಕ್ ನಿಷೇಧದಿಂದ ವರ್ತಕರು ಮತ್ತು ಸಾರ್ವಜನಿಕರಿಗೆ ಒತ್ತಡ ಹೆಚ್ಚುವ ಸಾಧ್ಯತೆ ಇದೆ ಎಂಬ ಹಿನ್ನೆಲೆಯಲ್ಲಿ ಜೂ.1ರಿಂದ ಪಟ್ಟಣದಲ್ಲಿನ ವರ್ತಕರು ಮತ್ತಿತರರು ಪ್ಲಾಸ್ಟಿಕ್ ಬಳಸದಂತೆ ಚಾಲನೆ ನೀಡಲು ಮುಂದಾಗುವುದಾಗಿ ಉಪವಿಭಾಗಾಧಿಕಾರಿ ಗಳಿಗೆ ನೀಡಿದ ಭರವಸೆ ಮತ್ತು ಆ.15ಕ್ಕೆ ಹೊಳೆನರಸೀಪುರ ಪಟ್ಟಣವನ್ನು ಪ್ಲಾಸ್ಟಿಕ್ ಮುಕ್ತ ಪಟ್ಟಣವನ್ನಾಗಿ ಮಾಡುವ ಉದ್ದೇಶ ತಮ್ಮ ವರ್ತಕ ಸಂಘ ಮತ್ತು ವಿವಿಧ ಸಂಘ ಸಂಸ್ಥೆಗಳು ಬದ್ಧವಾಗಿರುವುದಾಗಿ ಹೇಳಿದ್ದವು.
ವಿಶೇಷ ತಂಡಗಳ ರಚನೆ: ಜೂ.1ರಿಂದ ಪಟ್ಟಣದಲ್ಲಿ ಪ್ಲಾಸ್ಟಿಕ್ ನಿಷೇಧವನ್ನು ಅನುಷ್ಠಾನಕ್ಕೆ ತರಲು ತಾಲೂಕು ಆಡಳಿತ ಅನೇಕ ತಂಡಗಳನ್ನು ರಚಿಸಿದೆ. ಈ ತಂಡದಲ್ಲಿ ಪುರಸಭೆ, ಪೊಲೀಸ್, ಕೆಲ ಸರ್ಕಾರಿ ಅಧಿಕಾರಿಗಳು ಕಾರ್ಯನಿರ್ವಹಿ ಸಲಿದ್ದಾರೆ. ಅವರು ಪ್ರತಿನಿತ್ಯ ಪಟ್ಟಣದ ವಿವಿಧಡೆ ಅಂಗಡಿ, ಹೋಟೆಲ್ಗಳ ಮೇಲೆ ದಾಳಿ ನಡೆಸಿ ಪ್ಲಾಸ್ಟಿಕ್ ಮುಕ್ತಗೊಳಿಸುವ ನಿಟ್ಟಿನಲ್ಲಿ ಕಠಿಣ ಕ್ರಮಕೈಗೊಳ್ಳಲಿದ್ದಾರೆ.
ಪ್ಲಾಸ್ಟಿಕ್ ಮುಕ್ತ ಪಟ್ಟಣವನ್ನಾಗಿಸುವ ನಿಟ್ಟಿನಲ್ಲಿ ಪಟ್ಟಣದಲ್ಲಿನ ವಿವಿಧ ಸಂಘ ಸಂಸ್ಥೆಗಳನ್ನು ಒಂದಡೆ ಸೇರಿಸಲು ಪಟ್ಟಣದ ವರ್ತಕ ಸಂಘ ಮುಂದಾಗುವುದಾಗಿ ತಿಳಿಸಿವೆ.
ದೈನಂದಿನ ದಾಳಿ ನಂತರ ಪ್ಲಾಸ್ಟಿಕ್ ಬಳಕೆ , ವ್ಯಾಪಾರ ಮಾಡು ವವರ ವಿರುದ್ಧ ಕಠಿಣ ಕ್ರಮಕ ಕೈಗೊಳ್ಳುತ್ತಿದ್ದು ಇದಕ್ಕೆ ವರ್ತಕರು, ಹೋಟೆಲ್ ಸೇರಿದಂತೆ ಎಲ್ಲಾ ವರ್ತಕರ ವಿರುದ್ಧ ದಂಡ ಸೇರಿದಂತೆ ವಿವಿಧ ರೀತಿಯಲ್ಲಿ ಕಾನೂನು ಕ್ರಮಕೈಗೊಳ್ಳುವ ಸೂಚನೆ ನೀಡಿದೆ.
ಪುರಸಭೆಯಿಂದ ಜಾಗೃತಿ: ಈಗಾಗಲೇ ಪುರಸಭೆ ಪಟ್ಟಣದಲ್ಲಿ ನಿರಂತರವಾಗಿ ತನ್ನ ವಾಹನಗಳ ಮೂಲಕ ಧ್ವನಿವರ್ಧಕದಲ್ಲಿ ಜೂ.1 ರಿಂದ ಪ್ಲಾಸ್ಟಿಕ್ ನಿಷೇಧ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.