ಹೊಳೆನರಸೀಪುರ: ರೈತರು ಕೃಷಿ ಯೊಂದಿಗೆ ಹೈನುಗಾರಿಕೆ ಅನುಸರಿ ಸುವುದರಿಂದ ಆರ್ಥಿಕವಾಗಿ ಸಬಲ ರಾಗಲು ಸಾಧ್ಯ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಕೆ.ಹನುಮಂತರಾಯಪ್ಪ ಹೇಳಿದರು.
ತಾಲೂಕಿನ ಆಲಗೋಡನಹಳ್ಳಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಗ್ರಾಮದ ಜನರಿಗೆ ಹೈನುಗಾರಿಕೆ ತರಬೇತಿ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು, ನಮ್ಮ ರೈತರು ಹಾಲು ಉತ್ಪಾದನೆಗೆ ತೊಡಗಿಸಿ ಕೊಳ್ಳುವ ಮೊದಲು ಹೊಸ ತಾಂತ್ರಿಕತೆ ಬಗ್ಗೆ ಅರಿವು ಮೂಡಿಸಿ ಕೊಂಡಲ್ಲಿ ಹಾಲಿನ ಉತ್ಪಾದನೆ ಹೆಚ್ಚಿಸಿ ಕೊಳ್ಳಲು ಸಾಧ್ಯವಿದೆ ಎಂದರು.
ಸ್ವಉದ್ಯೋಗ ತರಬೇತಿ: ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ಕೇವಲ ಸಾಲ ಸೌಲಭ್ಯ ಒದಗಿಸಿಕೊಡು ವುದಷ್ಟೇ ಆಲ್ಲ ಅದು ಕೃಷಿ ವಿಸ್ತರಣಾ ಕಾರ್ಯಕ್ರಮದಡಿಯಲ್ಲಿ ಹತ್ತು ಹಲವಾರು ಕೃಷಿ ಮತ್ತು ಕೃಷಿಯೇತರ ಕಾರ್ಯಕ್ರಮಗಳು ಸಂಘದ ಸದಸ್ಯರಿಗೆ ಸ್ವ ಉದ್ಯೋಗ ತರಬೇತಿ ಅನುದಾನಗಳು ಮತ್ತು ಸಮುದಾಯ ಅಭಿವೃದ್ಧಿ ಕಾರ್ಯ ಕ್ರಮಗಳು ಲಭ್ಯವಿದೆ ಎಂದರು. ದುರ್ಬಲ ವರ್ಗದ ಜನರಿಗೆ ಕಾರ್ಯಕ್ರಮ ಗಳನ್ನು ವರ್ಷದ ಕ್ರಿಯಾಯೋಜನೆಯಲ್ಲಿ ಗುರಿಹಾಕಿ ಕೊಂಡು ಆ ಕಾರ್ಯ ಕ್ರಮಗಳನ್ನು ಅನುಷ್ಠಾನ ಮಾಡುತ್ತಿದೆ ಎಂದು ಮಾಹಿತಿ ನೀಡಿದರು.
ರಾಸುಗಳ ಆಯ್ಕೆ ಮುಖ್ಯ: ಪಶು ವೈದ್ಯ ರಥುನಾಥ್ ಮಾತನಾಡಿ, ಹೈನುಗಾರಿಕೆ ಉದ್ಯಮದಲ್ಲಿ ಯಶಸ್ಸು ಪಡೆಯಲು ಮೊದಲು ರಾಸುಗಳ ಆಯ್ಕೆ ಅತೀ ಮುಖ್ಯಎಂದರು.
ಉತ್ತಮ ರಾಸುಗಳನ್ನು ಆಯ್ಕೆ ಮಾಡುವಾಗ ಗಮನಿಸಬೇಕಾದ ಭೌತಿಕ ಲಕ್ಷಣಗಳು ಹಾಗೂ ಕಾಲಕಾಲಕ್ಕೆ ಹಸು ಹಾಗೂ ಹೆಮ್ಮೆಗಳಿಗೆ ಪೂರೈಸಬೇಕಾದ ಆಹಾರದ ಗುಣ ಮಟ್ಟದ ಪ್ರಮಾಣ ಮಾದರಿ, ಕೊಟ್ಟಿಗೆ ರಚನೆ, ರಾಸುಗಳಿಗೆ ರೋಗ ಹರಡದಂತೆ ಮುನ್ನೆಚ್ಚರಿಕ್ಕೆ ಕ್ರಮ ಗಳು, ರಾಸುಗಳು ಕರು ಹಾಕಿದಾಗ ಮೊದಲಿಗೆ ಪೋಷಣೆ ಮಾಡುವ ಅಂಶಗಳ ಬಗ್ಗೆ ಮತ್ತು ರಾಸುಗಳಿಗೆ ಕಾಲು ಬಾಯಿ ಜ್ವರ, ಕೆಚ್ಚಲು ಬಾವು, ಕ್ಯಾನ್ಸರ್ ಇತ್ಯಾದಿ ರೋಗ ಹರಡಿದಾಗ ಪಶು ವೈದ್ಯರಿಂದ ಸೂಕ್ತ ಸಮಯದಲ್ಲಿ ಚಿಕಿತ್ಸೆಕೊಡಿಸಬೇಕೆಂದು ತಿಳಿಸಿದರು.
ಹೈನುಗಾರಿಕೆಗೆ ಸರ್ಕಾರ ಪ್ರೋತ್ಸಾಹ: ಧರ್ಮಸ್ಥಳ ಗ್ರಾಮಾಭಿವೃದ್ಧಿಯ ದೊಡ್ಡಕಾಡನೂರು ವಲಯದ ಮೇಲ್ವಿ ಚಾರಕ ರಾಜೇಶ್ ಮಾತನಾಡಿ, ಹೈನು ಗಾರಿಕೆಯಲ್ಲಿ ರೈತರಿಗೆ ನಿಯ ಮಿತವಾದ ಆದಾಯವಿದ್ದು, ಹಾಲು ಉತ್ಪಾದನೆ ಯನ್ನು ಪ್ರೋತ್ಸಾಹಿಸಲು ಸರ್ಕಾರ ಹಲವು ಯೋಜನೆಯನ್ನು ಅನುಷ್ಠಾನ ಗೊಳಿಸಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಲಗೋಡನ ಹಳ್ಳಿ ಗ್ರಾಮದ ಹಲವಾರು ಗ್ರಾಮಸ್ಥರು ಗಳು ಹಾಜರಿದ್ದು ಹೈನುಗಾರಿಕೆ ಬಗ್ಗೆ ಅರಿವು ಪಡೆದರು.
ಸಭೆಯಲ್ಲಿ ಧರ್ಮಸ್ಥಳ ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಸೇವಾ ಪ್ರತಿನಿಧಿ ಬಸವರಾಜಪ್ಪ ಭಾಗವಹಿಸಿದ್ದರು.